Good Return : ಎಸ್ ಬಿಐ ಅನ್ವುಟಿ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ, ಪಡೆಯಿರಿ ಅಧಿಕ ಲಾಭ
ಸರಿಯಾದ ವಸ್ತುವಿನ ಮೇಲೆ ಹೂಡಿಕೆ (Investment) ಮಾಡುವುದರಿಂದ ಭವಿಷ್ಯದ ಹಲವು ಚಿಂತೆಗಳು ದೂರವಾಗುತ್ತದೆ.
ನವದೆಹಲಿ : ಸರಿಯಾದ ವಸ್ತುವಿನ ಮೇಲೆ ಹೂಡಿಕೆ (Investment) ಮಾಡುವುದರಿಂದ ಭವಿಷ್ಯದ ಹಲವು ಚಿಂತೆಗಳು ದೂರವಾಗುತ್ತದೆ. ನಾವೀಗ ಹೇಳುತ್ತಿರುವುದು ಎಸ್ ಬಿಐ ಅನ್ಯುಟಿ ಸ್ಕೀಮ್ (SBI Annuity Scheme)ಬಗ್ಗೆ. ಈ ಸ್ಕೀಮ್ ನಲ್ಲಿ ನೀವು ಹೂಡಿಕೆ ಮಾಡಿದರೆ, ಒಂದು ನಿರ್ದಿಷ್ಟ ಅವಧಿಯ ಬಳಿಕ ನಿಮಗೆ ಮಾಸಿಕ ಒಂದಷ್ಟು ದುಡ್ಡು ಬರುತ್ತದೆ. ಭವಿಷ್ಯದ ಭದ್ರತೆಗಾಗಿ(Future Security) ರೂಪಿಸಲಾಗಿರುವ ಸ್ಕೀಮ್ ಇದಾಗಿದೆ.
ಏನಿದು ಎಸ್ ಬಿಐ ಅನ್ಯುಟಿ ಸ್ಕೀಮ್ :
ಎಸ್ ಬಿಐ ನ (SBI) ಈ ಅನ್ಯುಟಿ ಸ್ಕೀಮ್ ನಲ್ಲಿ ನೀವು 36, 60, 84, 120 ತಿಂಗಳ ಅವಧಿಗೆ ಹೂಡಿಕೆ ಮಾಡಬಹುದು. ಇದೆ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗೆ (Fixed deposit)ಯಾವ ಬಡ್ಡಿ ಸಿಗುತ್ತದೆಯೋ, ಅದೇ ಬಡ್ಡಿ ದರ (Interest rate)ಇಲ್ಲೂ ಕೂಡಾ ಸಿಗುತ್ತದೆ. ಉದಾಹರಣೆಗೆ ನೀವು 5 ವರ್ಷದ ಅವಧಿಯ ಸ್ಕೀಮ್ ಆಯ್ಕೆ ಮಾಡಿದ್ದರೆ, ನಿಮಗೆ 5 ವರ್ಷದ ಅವಧಿಯ ಟರ್ಮ್ ಫಿಕ್ಸೆಡ್ ಡೆಪಾಸಿಟ್ ಗೆ (Fixed Deposit) ಏನು ಬಡ್ಡಿ ಸಿಗುತ್ತದೆಯೋ ಅದೇ ಬಡ್ಡಿ ಇಲ್ಲೂ ಸಿಗುತ್ತದೆ.
ಇದನ್ನೂ ಓದಿ : Family Pension: ಪ್ರತಿ ತಿಂಗಳ Family Pension ಲಿಮಿಟ್ ಹೆಚ್ಚಿಸಿದ Modi Government
ತಿಂಗಳಿಗೆ 10000 ಆದಾಯ ಬೇಕಾ..?
ನೀವು ಒಂದು ವೇಳೆ 10000 ರೂಪಾಯಿ ಮಾಸಿಕ ಆದಾಯ ಪಡೆಯಲು ಬಯಸಿದ್ದರೆ, ನೀವು 5, 07, 965.95 ರೂಪಾಯಿ ಜಮೆ ಮಾಡಬೇಕು. ಇದರ ಮೇಲೆ ನಿಮಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಇದರಿಂದ ನಿಮಗೆ ಸರಿಸುಮಾರು ತಿಂಗಳಿಗೆ 10000 ರೂಪಾಯಿ ಆದಾಯ ಸಿಗುತ್ತದೆ. ಡೆಪಾಸಿಟ್ (deposit) ಮಾಡಲು ನಿಮ್ಮಲ್ಲಿ ಇನ್ನೂ ಹಣ ವಿದ್ದರೆ ಇನ್ನೂ ಅನೇಕ ಬೇರೆ ಅಪ್ಶನ್ ನೋಡಬಹುದು.
ಹೂಡಿಕೆ ನಿಯಮ ತಿಳಿದುಕೊಳ್ಳಿ.!
ಎಸ್ ಬಿಐ ಅನ್ಯುಟಿ ಸ್ಕೀಮಿನಡಿ (SBI Annuity Scheme) ನೀವು ಪ್ರತಿ ತಿಂಗಳು ಕನಿಷ್ಟ ಹತ್ತು ಸಾವಿರ ರೂಪಾಯಿ ಜಮೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಗ್ರಾಹಕರು ಜಮೆ ಮಾಡಿದ ಮೊತ್ತದ ಮೇಲೆ ಶೇ. 7 ರಷ್ಟು ಬಡ್ಡಿ ಸೇರಿಸಿ ಒಂದು ನಿಗದಿತ ಕಾಲಮಿತಿಯ ಬಳಿಕ ಆದಾಯ ಬರಲು ಆರಂಭವಾಗುತ್ತದೆ. ಭವಿಷ್ಯದ ಭದ್ರತೆಗಾಗಿ ಇದೊಂದು ಉತ್ತಮ ಸ್ಕೀಮ್ ಎಂದು ಹೇಳಲಾಗಿದೆ.
ಇದನ್ನೂ ಓದಿ : ತಿಳಿದಿರಲೇಬೇಕು..! ನಿಮಗೆ ಪಿಎಫ್ ಜೊತೆ ಸಿಗುತ್ತೆ ವಿಮೆಯ ಲಾಭ.! ಸಿಗೋ ದುಡ್ಡು ಎಷ್ಟು ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.