ಎಸ್‌ಬಿಐ ಎಚ್ಚರಿಕೆ: ಈ 2 ಸಂಖ್ಯೆಗಳಿಂದ ಎಂದಿಗೂ ಕರೆ ಸ್ವೀಕರಿಸಬೇಡಿ
ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ: ಯಾವುದೇ ರೀತಿಯ ವಂಚನೆಯನ್ನು ತಪ್ಪಿಸಲು ಎಸ್‌ಬಿಐ ತನ್ನ ಗ್ರಾಹಕರೊಂದಿಗೆ ಎರಡು ಸಂಖ್ಯೆಗಳನ್ನು ಹಂಚಿಕೊಂಡಿದೆ. ಯಾವುದೇ ಸಂದರ್ಭದಲ್ಲೂ ಈ ಎರಡು ಸಂಖ್ಯೆಗಳಿಂದ ಕರೆ ಸ್ವೀಕರಿಸಬೇಡಿ ಎಂದು ಬ್ಯಾಂಕ್‌ನಿಂದ ತಿಳಿಸಲಾಗಿದೆ.
ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ: ಬ್ಯಾಂಕ್ ಗ್ರಾಹಕರು ಯಾವುದೇ ರೀತಿಯ ವಂಚನೆಗೆ ಬಲಿಯಾಗದಂತೆ ಆಗಾಗ್ಗೆ ಎಚ್ಚರಿಕೆ ನೀಡುವ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಇದೀಗ ಹೊಸ ಎಚ್ಚರಿಕೆ ನೀಡಿದೆ. ಇದೀಗ ಬ್ಯಾಂಕ್ ಪರವಾಗಿ ಎರಡು ಫೋನ್ ನಂಬರ್ ಹಂಚಿಕೊಳ್ಳಲಾಗಿದ್ದು ಈ ಸಂಖ್ಯೆಗಳಿಂದ ಬರುವ ಕರೆಗಳನ್ನು ಸ್ವೀಕರಿಸದಂತೆ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ವಂಚನೆಯ ಘಟನೆಗಳು ವೇಗವಾಗಿ ಹೆಚ್ಚುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಫಿಶಿಂಗ್ ಹಗರಣದಿಂದ ಗ್ರಾಹಕರನ್ನು ರಕ್ಷಿಸಲು ಬ್ಯಾಂಕ್ ಈ ಎಚ್ಚರಿಕೆಯನ್ನು ನೀಡುತ್ತಿದೆ. ಅನೇಕ ಸಂದರ್ಭಗಳಲ್ಲಿ, ಫಿಶಿಂಗ್ ಹಗರಣಗಳ ಬಗ್ಗೆ ಟ್ವೀಟ್‌ಗಳು, ಎಸ್‌ಎಂಎಸ್ ಮತ್ತು ಇ-ಮೇಲ್‌ಗಳ ಮೂಲಕ ಮಾಹಿತಿ ಮುಂಚೂಣಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ.
ತನ್ನ 45 ಕೋಟಿ ಗ್ರಾಹಕರನ್ನು ಯಾವುದೇ ರೀತಿಯ ವಂಚನೆಯಿಂದ ರಕ್ಷಿಸಲು ಬ್ಯಾಂಕ್ ಎಚ್ಚರಿಕೆಯ ಸಂದೇಶ:
ಎಸ್‌ಬಿಐ ಪರವಾಗಿ ಎರಡು ಸಂಖ್ಯೆಗಳನ್ನೂ ಹಂಚಿಕೊಳ್ಳಲಾಗಿದ್ದು, ಈ ಸಂಖ್ಯೆಗಳಿಂದ ಕರೆ ಮಾಡಿ ಎಸ್‌ಬಿಐ ಉದ್ಯೋಗಿಯಂತೆ ಮಾತನಾಡುವ ಮೂಲಕ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ. ಆದರೆ, ಗ್ರಾಹಕರು ಇಂತಹ ವಂಚನೆಗಳಿಗೆ ಬಲಿಯಾಗಬಾರದು. ಈ ಸಂಖ್ಯೆಗಳಿಂದ ಬರುವ ಕರೆಗಳನ್ನು ಎಂದಿಗೂ ಅಪ್ಪಿತಪ್ಪಿಯೂ ರಿಸೀವ್ ಮಾಡಬೇಡಿ ಎಂದು ಬ್ಯಾಂಕ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ- ಉಚಿತ ರೇಷನ್ ಬೇಕಿದ್ದರೆ ಕೂಡಲೇ ಈ ಕೆಲಸ ಮಾಡಿ
ಬ್ಯಾಂಕ್ ನೀಡಿರುವ ಈ ಎರಡು ಸಂಖ್ಯೆಗಳನ್ನು ಗಮನಿಸಿ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 8294710946 ಮತ್ತು 7362951973 ಸಂಖ್ಯೆಗಳಿಂದ ಬರುವ ಯಾವುದೇ ಕರೆಯನ್ನು ಸ್ವೀಕರಿಸದಂತೆ ಎಚ್ಚರಿಕೆ ನೀಡಿದೆ. ಈ ಎರಡು ನಂಬರ್‌ಗಳಿಂದ ಕರೆ ಬಂದರೆ ಸ್ವೀಕರಿಸುವ ತಪ್ಪು ಮಾಡಬೇಡಿ ಎಂದು ಬ್ಯಾಂಕ್‌ನಿಂದ ಹೇಳಲಾಗಿದೆ.
ಸಿಐಡಿ ಅಸ್ಸಾಂ :
ಇದಕ್ಕೂ ಮುನ್ನ ಸಿಐಡಿ ಅಸ್ಸಾಂ ಎಸ್‌ಬಿಐ ನಮೂದಿಸಿದ ಎರಡೂ ಸಂಖ್ಯೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತಂತೆ ಟ್ವೀಟ್ ಮಾಡಿದ್ದ ಸಿಐಡಿ ಅಸ್ಸಾಂ, ಸ್ಟೇಟ್ ಬ್ಯಾಂಕ್ ಗ್ರಾಹಕರು 8294710946 ಮತ್ತು 7362951973 ಎಂಬ ಎರಡು ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. ಈ ಸಂಖ್ಯೆಗಳಿಂದ ಕರೆ ಮಾಡುವವರು ಗ್ರಾಹಕರನ್ನು ಕೆವೈಸಿಗಾಗಿ ಕೇಳುತ್ತಾರೆ ಮತ್ತು ಮೊಬೈಲ್‌ನಲ್ಲಿ ಕಳುಹಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ತಿಳಿಸುತ್ತಾರೆ. ಇದರಿಂದ ಬ್ಯಾಂಕ್ ಗ್ರಾಹಕರು ವಂಚನೆಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿತ್ತು.
RBI ಹೊಸ ನಿಯಮಗಳು : ಕ್ರೆಡಿಟ್-ಡೆಬಿಟ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ!
ಎರಡೂ ಸಂಖ್ಯೆಗಳು ಬ್ಯಾಂಕ್‌ಗೆ ಲಿಂಕ್ ಆಗಿಲ್ಲ:
ಈ ಎರಡೂ ಸಂಖ್ಯೆಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ ಎಂದು ಬ್ಯಾಂಕ್ ಹೇಳಿದೆ. ಎಸ್‌ಬಿಐ ಪರವಾಗಿ ಅಸ್ಸಾಂ ಸಿಐಡಿಗೆ ಮರು ಟ್ವೀಟ್ ಮಾಡುವಾಗ ಇದನ್ನು ಬರೆಯಲಾಗಿದೆ. ಗ್ರಾಹಕರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸ್ಟೇಟ್ ಬ್ಯಾಂಕ್, ಈ ಎರಡೂ ಸಂಖ್ಯೆಗಳ ವಿರುದ್ಧ ಐಟಿ ಸೆಕ್ಯುರಿಟಿ ತಕ್ಷಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.