ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಡಿಎ ಬಳಿಕ ಈ ಮೂರು ಭತ್ಯೆಗಳು ಹೆಚ್ಚಾಗಲಿವೆ

ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದ ನಂತರ ಎಚ್‌ಆರ್‌ಎ, ನಗರ ಭತ್ಯೆ ಮತ್ತು ಪ್ರಯಾಣ ಭತ್ಯೆ ಹೆಚ್ಚಿಸುವ ನಿರೀಕ್ಷೆ ಹೆಚ್ಚಾಗಿದೆ.  

Written by - Nitin Tabib | Last Updated : Apr 26, 2022, 05:48 PM IST
  • ಇತ್ತೀಚೆಗಷ್ಟೇ ಸರ್ಕಾರ ಡಿಎ ಹೆಚ್ಚಳ ಘೋಷಿಸಿದೆ
  • ಡಿಎ ಹೆಚ್ಚಳದ ಬಳಿಕ ಮತ್ತೆ ಮೂರು ಭತ್ಯೆಗಳು ಹೆಚ್ಚಾಗಲಿವೆ
  • ನಗರ ಭತ್ಯೆ, ಮನೆ ಬಾಡಿಗೆ ಭತ್ಯೆ ಹೆಚ್ಚಾಗುವ ನಿರೀಕ್ಷೆ ಇದೆ
ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಡಿಎ ಬಳಿಕ ಈ ಮೂರು ಭತ್ಯೆಗಳು ಹೆಚ್ಚಾಗಲಿವೆ title=
7th Pay Commission Latest News (File Photo)

ನವದೆಹಲಿ: ನೀವು ಅಥವಾ ನಿಮ್ಮ ಮನೆಯ ಯಾವುದೇ ಸದಸ್ಯ ಕೇಂದ್ರ ಸರ್ಕಾರದ ಯಾವುದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಈ ಸುದ್ದಿ ನಿಮಗಾಗಿ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸುವ ಘೋಷಣೆ ಮಾಡಿದೆ. ಇದಾದ ನಂತರ, ಜನವರಿಯಿಂದ ಹೆಚ್ಚಿಸಲಾಗಿರುವ ಡಿಎಯ ಬಾಕಿ ನೀಡುವುದಾಗಿ ಹಣಕಾಸು ಸಚಿವಾಲಯ ಘೋಷಿಸಿದೆ. ಆದರೆ, ನೌಕರರು 18 ತಿಂಗಳ ಬಾಕಿ ನಿರೀಕ್ಷೆಯಲ್ಲಿದ್ದಾರೆ.

ಮತ್ತೆ ನೌಕರರ ಸಂಬಳ ಹೆಚ್ಚಾಗಲಿದೆ
ಇದೆ ಹಿನ್ನಲೆಯಲ್ಲಿ ಇದೀಗ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ನೌಕರರಿಗೆ ಮತ್ತೆ ಮೂರು ಭತ್ಯೆಗಳನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ವರದಿಮಾಡಿವೆ. ಈ ಬಗ್ಗೆ ಒಂದು ವೇಳೆ ಸರ್ಕಾರ ನಿರ್ಧಾರ ಕೈಗೊಂಡರೆ ನೌಕರರ ವೇತನ ಮತ್ತಷ್ಟು ಹೆಚ್ಚಾಗಲಿದೆ.

HRA ಹೆಚ್ಚಳ ಸಾಧ್ಯ
ತುಟ್ಟಿಭತ್ಯೆ ಹೆಚ್ಚಳದ ಬಳಿಕ ಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕೆ ದಾರಿ ಸುಗಮವಾಗಿದೆ ಎನ್ನುತ್ತಾರೆ ತಜ್ಞರು. ಎಚ್‌ಆರ್‌ಎ ಹೆಚ್ಚಿಸಲು ಸರ್ಕಾರ ನಿರ್ಧರಿಸಿದರೆ 50 ಲಕ್ಷ ಕೇಂದ್ರ ನೌಕರರು ಇದರ ಲಾಭ ಪಡೆಯಲಿದ್ದಾರೆ.

ಇದನ್ನೂ ಓದಿ-Arecanut Price: ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆ ಧಾರಣೆ

ನಗರ ಭತ್ಯೆ ಮತ್ತು ಟಿಎ ಕೂಡ ಹೆಚ್ಚಾಗಲಿದೆ!
ತುಟ್ಟಿಭತ್ಯೆಯೊಂದಿಗೆ ಸರ್ಕಾರವು ಮನೆ ಬಾಡಿಗೆ ಭತ್ಯೆಯನ್ನು ಕೂಡ ಹೆಚ್ಚಿಸಿದರೆ, ಅದು ನಗರ ಭತ್ಯೆ ಮತ್ತು ಪ್ರಯಾಣ ಭತ್ಯೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಡಿಎ ಹೆಚ್ಚಳದೊಂದಿಗೆ, ಈ ಎರಡೂ ಭತ್ಯೆಗಳನ್ನು ಹೆಚ್ಚಿಸುವ ನಿರೀಕ್ಷೆ ಹೆಚ್ಚಾಗತೊಡಗಿದೆ.

ಇದನ್ನೂ ಓದಿ-Twitter Takeover: ಟ್ವಿಟ್ಟರ್-ಎಲೋನ್ ಮಸ್ಕ್ ಒಪ್ಪಂದದಲ್ಲಿ ಚೀನಾ ಕನೆಕ್ಷನ್ ಕಂಡ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್

ಟಿಎ ಮತ್ತು ಸಿಎ ಹೆಚ್ಚಳ
ತುಟ್ಟಿಭತ್ಯೆಯನ್ನು ಹೆಚ್ಚಿಸಿದ ನಂತರ ಈಗ ನೌಕರರ ಪ್ರಯಾಣ ಭತ್ಯೆ ಮತ್ತು ನಗರ ಭತ್ಯೆಯಲ್ಲಿ ಹೆಚ್ಚಳವಾಗಲಿದೆ. ಡಿಎ ಹೆಚ್ಚಳದ ನಂತರ, ಟಿಎ ಮತ್ತು ಸಿಎ ಹೆಚ್ಚಳಕ್ಕೆ ದಾರಿ ಕೂಡ ಸುಗಮವಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News