ಬೆಂಗಳೂರು : ಸ್ಟೇಟ್ ಬ್ಯಾಂಕ್‌ನಲ್ಲಿ  ಖಾತೆ ಹೊಂದಿರುವವರಿಗೆ ಇದು ಸಂತಸದ ಸುದ್ದಿ.  SBI ಗ್ರಾಹಕರು ಮಾರ್ಚ್ 31 ರವರೆಗೆ ಈ ಪ್ರಯೋಜನವನ್ನು ಪಡೆಯುವುದು ಸಾಧ್ಯವಾಗುತ್ತದೆ. ಹೌದು, SBI  ಗ್ರಾಹಕರು ಈಗ 40,088 ರೂಪಾಯಿಗಳ ಲಾಭವನ್ನು ಪಡೆಯಲಿದ್ದಾರೆ. ನೀವು ಸಹ SBI ಗ್ರಾಹಕರಾಗಿದ್ದರೆ, ಇದರ ಲಾಭವನ್ನು ಹೇಗೆ ಪಡೆಯಬಹುದು ನೋಡೋಣ. 


COMMERCIAL BREAK
SCROLL TO CONTINUE READING

ಮಾರ್ಚ್ 31 ರವರೆಗೆ ಈ ಲಾಭವನ್ನು ಪಡೆಯಬಹುದು :
ಎಸ್‌ಬಿಐ 400 ದಿನಗಳ ಎಫ್‌ಡಿಯಲ್ಲಿ ಶೇಕಡಾ 7.1 ದರದ ಲಾಭವನ್ನು ನೀಡುತ್ತಿದೆ. ಇದರೊಂದಿಗೆ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಮೇಲೆ 25 ಮೂಲ ಅಂಕಗಳ ಏರಿಕೆಯಾಗಿದೆ. ಮಾರ್ಚ್ 31 ರವರೆಗೆ ನೀವು ಇದರ ಪ್ರಯೋಜನವನ್ನು ಪಡೆಯಬಹುದು. 


ಇದನ್ನೂ ಓದಿ : Petrol Price Today : ಹಣಕಾಸು ಸಚಿವರ ಹೇಳಿಕೆಯಿಂದ ಅಗ್ಗವಾಗಿದೆಯೇ ಪೆಟ್ರೋಲ್-ಡೀಸೆಲ್? 


 40,088 ರೂ.ಗಳನ್ನು ಹೇಗೆ ಪಡೆಯುವುದು ? : 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿಶೇಷ ಯೋಜನೆಯ ಬಡ್ಡಿದರಗಳನ್ನು ಹೆಚ್ಚಿಸಿದೆ. 5 ಲಕ್ಷ ಠೇವಣಿ ಇಟ್ಟರೆ ಮೆಚ್ಯೂರಿಟಿ ನಂತರ 5,40,088 ರೂ. ಸಿಗುತ್ತದೆ. ಇದರಲ್ಲಿ  40,088 ರೂ ಬಡ್ಡಿ ರೂಪದಲ್ಲಿ ನಿಮ್ಮ ಕೈ ಸೇರುತ್ತದೆ. ಇದು ನಿಮ್ಮ ಸ್ಥಿರ ಆದಾಯ. ನೀವು ಯಾವುದೇ ಶಾಖೆಯ ಮೂಲಕ ಈ ಪ್ರಯೋಜನವನ್ನು ಪಡೆಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಯೋಜನೆಯ ಲಾಭವನ್ನು ಮಾರ್ಚ್ 31 ರವರೆಗೆ ಪಡೆಯಬಹುದು. 


1 ವರ್ಷದಲ್ಲಿ ಎಷ್ಟು ಲಾಭವನ್ನು ಪಡೆಯಲಾಗುತ್ತಿದೆ?
ಇದಲ್ಲದೆ, 2 ಕೋಟಿಗಿಂತ ಕಡಿಮೆ ಠೇವಣಿ ಬಗ್ಗೆ ಮಾತನಾಡುವುದಾದರೆ ಬ್ಯಾಂಕ್ ಈ ಠೇವಣಿ ಮೇಲಿನ ಬಡ್ಡಿದರದ ಮೇಲೆ 25 ಮೂಲ ಅಂಕಗಳನ್ನು ಹೆಚ್ಚಿಸಿದೆ. SBIಯ ಮೊದಲ 1 ವರ್ಷದ ಮೆಚುರಿಟಿ FD 6.75% ಲಾಭವನ್ನು ಪಡೆಯಲಾಗುತ್ತಿತ್ತು. ಈಗ ಶೇ.6.80ರಷ್ಟು ಲಾಭ ಸಿಗುತ್ತಿದೆ. ಮೊದಲು 2 ವರ್ಷಗಳ ಎಫ್‌ಡಿಯಲ್ಲಿ 6.75 ಶೇಕಡಾ ಬಡ್ಡಿಯನ್ನು ಪಡೆಯಲಾಗುತ್ತಿತ್ತು ಮತ್ತು ಈಗ 7 ಶೇಕಡಾ ಬಡ್ಡಿಯ ಲಾಭವನ್ನು  ನೀಡಲಾಗುತ್ತಿದೆ. 


ಇದನ್ನೂ ಓದಿ : 7th Pay commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ಮತ್ತೆ ಹೆಚ್ಚಾಗಲಿದೆ ನಿಮ್ಮ ಸಂಬಳ!


3 ಮತ್ತು 5 ವರ್ಷಗಳಲ್ಲಿ ಎಷ್ಟು ಲಾಭವನ್ನು ಪಡೆಯಬಹುದು ? :
3 ವರ್ಷಗಳ ಮೆಚ್ಯೂರಿಟಿಯೊಂದಿಗೆ ಎಫ್‌ಡಿ ಬಗ್ಗೆ ಮಾತನಾಡುವುದಾದರೆ  ಮೊದಲು ಶೇಕಡಾ 6.25 ರ ದರದಲ್ಲಿ ಲಾಭವನ್ನು ಪಡೆಯುತ್ತಿದ್ದರೆ, ಈಗ  ಶೇಕಡಾ 6.50 ಬಡ್ಡಿಯ ಲಾಭವನ್ನು ಪಡೆಯಲಾಗುತ್ತದೆ. ಮೊದಲಿನ 6.25 ಶೇಕಡಾ ಬದಲಿಗೆ, 6.50 ಶೇಕಡಾ ಬಡ್ಡಿಯನ್ನು ಈಗ 5 ವರ್ಷಗಳ ಅವಧಿಯ FD ಗಳಲ್ಲಿ ಸ್ವೀಕರಿಸಲಾಗುತ್ತಿದೆ. ಬ್ಯಾಂಕ್‌ನ ಹೊಸ ದರಗಳು ಫೆಬ್ರವರಿ 15 ರಿಂದ ಜಾರಿಗೆ ಬಂದಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.