`SBI ಗ್ರಾಹಕ`ರಿಗೆ ಸಿಹಿ ಸುದ್ದಿ : `ಮನೆ ಬಾಗಿಲಿಗೆ ಬ್ಯಾಂಕ್ ಸೇವೆ`
ಕೊರೋನಾ ಲಾಕ್ ಡೌನ್ ನಡುವೆಯೂ, ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಂತ ಪ್ರಯತ್ನ
ನವದೆಹಲಿ : ದೇಶದ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೊರೋನಾ ಲಾಕ್ ಡೌನ್ ನಡುವೆಯೂ, ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಂತ ಪ್ರಯತ್ನಕ್ಕೆ ಇಳಿದಿದೆ. ಲಾಕ್ ಡೌನ್ ನಿಂದಾಗಿ ಬ್ಯಾಂಕ್ ಗೆ ತೆರಳಲಾಗದಂತ ಸಮಸ್ಯೆ ಎದುರಿಸುತ್ತಿರುವಂತ ಗ್ರಾಹಕರಿಗೆ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ಒದಗಿಸುವಂತ ವ್ಯವಸ್ಥೆ ಕಲ್ಪಿಸುತ್ತಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.
ದೇಶಾದ್ಯಂತ ಕೊರೋನಾ 2ನೇ ಅಲೆಯ ಹಿನ್ನಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಕೊರೋನಾ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ನಡುವೆಯೂ ಬ್ಯಾಂಕ್ ತೆರೆಯೋದಕ್ಕೆ ಅವಕಾಶ ನೀಡಿದ್ದರು, ಕಠಿಣ ನಿಯಮಗಳಿಂದಾಗಿ ಬ್ಯಾಂಕ್ ಗ್ರಾಹಕರು(SBI Customers) ಬ್ಯಾಂಕ್ ಗೆ ತೆರಳಿ, ತಮ್ಮ ವ್ಯವಹಾರ ವಹಿವಾಟು ನಡೆಸದಂತ ಕಷ್ಟವನ್ನು ಅನುಭವಿಸುತ್ತಿದ್ದಾರೆ.
Lost Documents : ನಿಮ್ಮ ದಾಖಲೆಗಳು ಕಳೆದು ಹೋದ್ರೆ ಈ ರೀತಿ ಪತ್ತೆ ಮಾಡಿ!
ಹೀಗೆ ಸಮಸ್ಯೆಗೆ ಸಿಲುಕಿರುವಂತ SBI ಗ್ರಾಹಕರಿಗೆ, ಇದೀಗ ಬ್ಯಾಂಕ್ ಸೇವೆ ಮನೆ ಬಾಗಿಲಿಗೆ(SBI Doorstep Banking) ತಲುಪಿಸುವಂತ ವ್ಯವಸ್ಥೆಯನ್ನು SBI ಮಾಡಿದೆ. ಈ ಕುರಿತಂತೆ ತನ್ನ ಗ್ರಾಹಕರಿಗೆ ಸಂದೇಶದ ಮೂಲಕ ಮಾಹಿತಿ ನೀಡುತ್ತಿರುವಂತ ಎಸ್ ಬಿ ಐ 'ಪ್ರೀತಿಯ ಗ್ರಾಹಕರೇ, ಮನೆ ಬಾಗಿಲಿಗೇ ಬ್ಯಾಂಕ್ ಸೇವೆ ಒದಗಿಸುತ್ತಿದ್ದೇವೆ. ಈ ಸೌಲಭ್ಯವನ್ನು ಪಡೆಯಲು psbdsb.in ಜಾಲತಾಣದಲ್ಲಿ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 18001037188, 180012133721 ಗೆ ಕರೆ ಮಾಡಿ ನೊಂದಾಯಿಸಿಕೊಳ್ಳಿ. ಸ್ಟೇ ಹೋಂ, ಸ್ಟೇ ಸೇಫ್' ಎಂಬುದಾಗಿ ತಿಳಿಸಿದೆ. ಈ ಮೂಲಕ ಎಸ್ ಬಿ ಐ ತನ್ನ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ ನೀಡುವುದನ್ನು ಆರಂಭಿಸಿದೆ.
ಇದನ್ನೂ ಓದಿ : Petrol-Diesel Price : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ : ಪೆಟ್ರೋಲ್ ₹ 3 ದುಬಾರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ