ನವ ದೆಹಲಿ : ದೇಶದ ಬಹು ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿಐ (SBI) ತನ್ನ ಗ್ರಾಹಕರ ಸೌಕರ್ಯ ಗಳ ಬಗ್ಗೆ  ಸಂಪೂರ್ಣ ಕಾಳಜಿ ವಹಿಸುತ್ತದೆ. ಸಮಯಕ್ಕನು ಗುಣವಾಗಿ ತನ್ನ ಗ್ರಾಹಕರಿಗೆ ಬೇಕಾದ ಸೌಕರ್ಯ ಒದಗಿಸುತ್ತಿದೆ. ಅಲ್ಲದೆ ಗ್ರಾಹಕರ ಸಮಸ್ಯೆಯನ್ನು ಬಗೆಹರಿಸುವ  ಬಗ್ಗೆಯೂ ಗಮನ ಹರಿಸುತ್ತದೆ. ಈಗ ಗ್ರಾಹಕರು ಬ್ಯಾಂಕ್ ಕೆಲಸಗಳಿಗಾಗಿ ಬ್ಯಾಂಕ್ಗೆ ಹೋಗುವ ಅಗತ್ಯ ಇಲ್ಲ. ಬ್ಯಾಂಕ್ (Bank) ನಿಮ್ಮ ಬಳಿ ಬರುತ್ತದೆ. ಡೋರ್ ಸ್ಟೆಪ್ ಬ್ಯಾಂಕಿಂಗ್ (Door Step banking) ಮೂಲಕ ಸೇವೆಗಳನ್ನು ಒದಗಿಸುತ್ತಿದೆ.   


COMMERCIAL BREAK
SCROLL TO CONTINUE READING

ಏನಿದು ಡೋರ್ ಸ್ಟೆಪ್ ಬ್ಯಾಂಕಿಂಗ್ :
ಡೋರ್ ಸ್ಟೆಪ್ ಬ್ಯಾಂಕಿಂಗ್ (Door step banking) ಮೂಲಕ ಈ ಹತ್ತು ಸೇವೆಗಳಿಗೆ ನೀವು ಬ್ಯಾಂಕ್ ಕರ್ಮಚಾರಿಗಳನ್ನು  ನೀವಿದ್ದಲ್ಲಿಗೆ ಕರೆಸಿಕೊಳ್ಳಬಹುದು. ಹಣ ಹಾಕುವುದು ಅಥವಾ ಹಣ ತೆಗೆಯುವ ಕೆಲಸಕ್ಕೆ ಬ್ಯಾಂಕ್ ಕರ್ಮಚಾರಿಯನ್ನು ಕರೆಸಿಕೊಳ್ಳಬಹುದು. ಚೆಕ್ ಜಮೆ ಮಾಡುವುದು ಸೇರಿದಂತೆ ಅನೇಕ್ ಕೆಲಸಗಳಿಗೆ ಬ್ಯಾಂಕ್ (Bank) ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ವಯಸ್ಸಾದವರಿಗೆ ನೀಡುವ ಸೇವೆಯ ಬಗ್ಗೆಯೂ ಸಂಪೂರ್ಣ ಗಮನ ಹರಿಸಲಾಗಿದೆ. ಪೆನ್ಷನ್ ದಾರರು ಜೀವನ ಪ್ರಮಾಣ ಪತ್ರಕ್ಕಾಗಿ (Life certificate)  ಬ್ಯಾಂಕ್ ಗೆ ಹೋಗುವ ಅಗತ್ಯ ಇಲ್ಲ. 


ಇದನ್ನೂ ಓದಿ ದುಬಾರಿಯಾಯಿತು SBI ಹೋಂ ಲೋನ್, ಆಟೋ ಲೋನ್ ..!


ಯಾವೆಲ್ಲಾ  ಸೇವೆ ಸಿಗಲಿದೆ : 
೧. ಕ್ಯಾಶ್ ಹಾಕುವುದು
2 ಕ್ಯಾಶ್ ತೆಗೆಯುವುದು
3. ಚೆಕ್ ಜಮೆ ಮಾಡುವುದು
4. ಚೆಕ್ ಬುಕ್ ಗೆ ಅರ್ಜಿ ಸಲ್ಲಿಸುವುದು
5. ಡ್ರಾಫ್ಟ್ ನ ಹೋಂ ಡೆಲಿವರಿ 
6. ಟರ್ಮ್ ದಿಪೋಸಿಟ್ ಬಗ್ಗೆ ಸಲಹೆ
7. ಕೆವೈಸಿ (KYC) ಅಪ್ ಡೆಟ್
8. ಮನೆಯಲ್ಲಿ  ಕುಳಿತೆ ಲೋನ್ ಬಗ್ಗೆ ಸಲಹೆ
9.ಇನ್ಕಮ್ ಟ್ಯಾಕ್ಸ್ ನ ಚಲಾನ್ 
10. ಪೆನ್ಶನ್ ದಾರರಿಗೆ ಲೈಫ್ ಸರ್ಟಿಫಿಕೇಟ್ ನೀಡುವುದು


ಇದನ್ನೂ ಓದಿ : SBI SME Gold Loan : ಎಸ್ ಬಿಐ ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲಿನ ಸಾಲ..!


ಡೋರ್ ಸ್ಟೆಪ್ ಬ್ಯಾಂಕಿಂಗ್ ಗೆ ರಿಜಿಸ್ಟ್ರೇಷನ್ ಮಾಡುವುದು ಅಗತ್ಯ :
ನೀವು ಕೂಡ SBI  ಡೋರ್ ಸ್ಟೆಪ್ ಬ್ಯಾಂಕಿಂಗ್ ನ ಲಾಭ ಪಡೆಯಲು ಬಯಸುವುದಾದರೆ ಮೊದಲು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಟೋಲ್ ಫ್ರೀ ನಂಬರ್ 18001037188 ಮತ್ತು 18001213721 ಕ್ಕೆ ಕರೆ ಮಾಡಬೇಕಾಗುತ್ತದೆ. ಫೋನ್ ನಲ್ಲಿ ಕೇಳುವ ಸರಳ ಪ್ರಶ್ನೆ ಗಳಿಗೆ ಉತ್ತರಿಸಬೇಕಾಗುತ್ತದೆ.


ಟೋಲ್ ಫ್ರೀ ನಂಬರ್ ಅಲ್ಲದೆ DSB  ಮೊಬೈಲ್ ಆಪ್ ಮೂಲಕ್ ಕೂಡ ರಿಜಿಸ್ಟ್ರೇಷನ್  ಮಾಡಿಸಿಕೊಳ್ಳಬಹುದು. ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೊಲಕ download  ಮಾಡಿಕೊಳ್ಳಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.