SBI Hike FD Rate: ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಗ್ರಾಹಕರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಹೆಚ್ಚಿಸಿದ ನಂತರ, ಇದೀಗ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಸಹ ಬಡ್ಡಿದರಗಳನ್ನು ಹೆಚ್ಚಿಸಲು ಆರಂಭಿಸಿವೆ. ಇದರ ಅಡಿಯಲ್ಲಿ, ಒಂದೆಡೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸುತ್ತಿದ್ದರೆ, ಎಫ್‌ಡಿ ಬಡ್ಡಿ ದರಗಳು ಸಹ ಹೆಚ್ಚಾಗಲು ಪ್ರಾರಂಭಿಸಿವೆ. ಏತನ್ಮಧ್ಯೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೂಡ ತನ್ನ ಸ್ಥಿರ ಠೇವಣಿಗಳ (ಎಫ್‌ಡಿ) ಬಡ್ಡಿದರವನ್ನು ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಹೊಸ ದರಗಳು ಜುಲೈ 15 ರಿಂದ ಜಾರಿಗೆ ಬಂದಿವೆ
ಎಸ್‌ಬಿಐನ ಹೊಸ ದರಗಳು ಜುಲೈ 15 ರಿಂದ ಜಾರಿಗೆ ಬಂದಿವೆ. ಈ ಬಾರಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಎಫ್‌ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಅಂದರೆ, ಬ್ಯಾಂಕ್ 1 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 2 ವರ್ಷಗಳಿಗಿಂತ ಕಡಿಮೆಗೊಳಿಸಿದೆ. ಹೊಸ ದರಗಳನ್ನು ತಿಳಿದುಕೊಳ್ಳೋಣ ಬನ್ನಿ.


ಇದನ್ನೂ ಓದಿ-GST Update: ಮಕ್ಕಳ ಸ್ಟೇಷನರಿಯಿಂದ ಹಿಡಿದು ಆಸ್ಪತ್ರೆಯ ಬೆಡ್ ವರೆಗೆ ಸೋಮವಾರದಿಂದ ಯಾವ ಯಾವ ವಸ್ತುಗಳು ದುಬಾರಿ? ಇಲ್ಲಿದೆ ಪಟ್ಟಿ


SBI ನ ಹೊಸ ಬಡ್ಡಿದರಗಳು ಇಂತಿವೆ
>> ಹೊಸ ದರಗಳ ಪ್ರಕಾರ, 7 ದಿನಗಳಿಂದ 45 ದಿನಗಳವರೆಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವು ಮೊದಲಿನಂತೆಯೇ ಶೇ.3.50ರಷ್ಟು ಇರಲಿದೆ. 
>> 46 ದಿನಗಳಿಂದ 179 ದಿನಗಳವರೆಗಿನ FD ಗಳ ಮೇಲೆ ಶೇ.4 ಬಡ್ಡಿ ದರ ಮುಂದುವರಿಯಲಿದೆ.
>> ಶೇ 4.25 ರ ಬಡ್ಡಿದರದ 180 ದಿನಗಳಿಂದ 210 ದಿನಗಳವರೆಗಿನ ಸ್ಥಿರ ಠೇವಣಿಗೆ ಅನ್ವಯಿಸಲಿದೆ.
>> 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ FD ಗಳಿಗೆ ಬ್ಯಾಂಕ್ ಶೇ.4.50 ಬಡ್ಡಿದರ ಸ್ಥಿರವಾಗಿ ಇರಿಸಿದೆ.
>> ಇದೇ ವೇಳೆ, 1 ವರ್ಷ ಅಥವಾ ಅದಕ್ಕಿಂತ ವರ್ಷಕ್ಕಿಂತ ಮೇಲ್ಪಟ್ಟ ಮತ್ತು 2 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎಫ್.ಡಿ  ಠೇವಣಿಗಳಿಗೆ ಈಗ ಶೇ. 5.25 ರ ಬಡ್ಡಿದರ ಸಿಗಲಿದೆ.
>> 2 ವರ್ಷದಿಂದ ಆರಂಭವಾಗುವ ಮತ್ತು  3 ವರ್ಷಕ್ಕಿಂತ ಕಡಿಮೆ ಅವಧಿಯ FD ಗಳಿಗೆ ಶೇ. 4.25 ರಷ್ಟು ಬಡ್ಡಿ ಸಿಗಲಿದೆ
>> 3 ವರ್ಷದಿಂದ ಆರಂಭವಾಗುವ  ಮತ್ತು 10 ವರ್ಷಗಳ ಅವಧಿಯ ಸ್ಥಿರ ಠೇವಣಿಗಳಿಗೆ ಶೇ. 4.50 ರ ದರದಲ್ಲಿ ಬಡ್ಡಿ ಸಿಗಲಿದೆ.


ಇದನ್ನೂ ಓದಿ-Big News: ಇನ್ಮುಂದೆ ಬೇರೆ ರಾಜ್ಯಗಳಲ್ಲಿಯೂ ಸುಲಭವಾಗಿ ಬೆಳೆ ಮಾರಾಟ ಮಾಡಿ, ರೈತರಿಗೆ ದೊಡ್ಡ ಸೌಕರ್ಯ ಕಲ್ಪಿಸಿದ ಕೇಂದ್ರ ಸರ್ಕಾರ


ಹಲವು ಬ್ಯಾಂಕುಗಳು FD ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ
ಎಸ್‌ಬಿಐ ಹೊರತುಪಡಿಸಿ ಇತರ ಬ್ಯಾಂಕ್‌ಗಳು ಕೂಡ ತನ್ನ ಬಡ್ಡಿ ದರವನ್ನು ಹೆಚ್ಚಿಸುತ್ತಿವೆ. ಖಾಸಗಿ ವಲಯದ ಐಡಿಬಿಐ ಬ್ಯಾಂಕ್ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ, ಇದು ಜುಲೈ 14, 2022 ರಿಂದ ಜಾರಿಗೆ ಬಂದಿದೆ. ಇದರ ಅಡಿಯಲ್ಲಿ, ಬ್ಯಾಂಕ್ 7 ದಿನಗಳಿಂದ 30 ದಿನಗಳವರೆಗೆ ಮ್ಯಾಚ್ಯೂರ್ ಆಗುವ  ಠೇವಣಿಗಳ ಮೇಲೆ ಶೇ. 2.70 ರ ಬಡ್ಡಿದರವನ್ನು ನಿಗದಿಪಡಿಸಿದೆ, ಆದರೆ 31 ದಿನಗಳಿಂದ 45 ದಿನಗಳವರೆಗೆ ಇರುವ  FD ಗಳಿಗೆ ಶೇ. 3 ರಷ್ಟು ಬಡ್ಡಿ ಪಾವತಿಸಲಿದೆ.ಇದೇ ವೇಳೆ, ಬ್ಯಾಂಕ್ 46 ರಿಂದ 60 ದಿನಗಳ ಅವಧಿಯ ಠೇವಣಿಗಳಿಗೆ ಶೇ.3.25 ರಷ್ಟು ಬಡ್ಡಿದರವನ್ನು ಮತ್ತು 61 ರಿಂದ 90 ದಿನಗಳ ಅವಧಿಯ ಠೇವಣಿಗಳಿಗೆ ಶೇ. 3.40 ರಷ್ಟು ಬಡ್ಡಿದರವನ್ನು ಪಾವತಿಸಲಿದೆ, ಆದರೆ 91 ದಿನಗಳಿಂದ 6 ತಿಂಗಳವರೆಗೆ ಇರುವ ಎಫ್‌ಡಿಗಳಿಗೆ ಶೇ.4 ರಷ್ಟು ಬಡ್ಡಿಯನ್ನು ಪಾವತಿಸಲಿದೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ