SBI ಗ್ರಾಹಕರೇ ಗಮನಿಸಿ : ನಾಳೆ ಲಭ್ಯವಿರಲ್ಲ `ಇಂಟರ್ನೆಟ್ ಬ್ಯಾಂಕಿಂಗ್` ಸೇವೆಗಳು!
ಆನ್ ಲೈನ್ ಸೇವೆಗಳಾದ ಇಂಟರ್ನೆಟ್ ಬ್ಯಾಂಕಿಂಗ್ ವೈಒಎನ್ ಒ ಮತ್ತು ಯುಪಿಐ ಗಳು ತಾತ್ಕಾಲಿಕ ಸ್ಥಗಿತ
ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ್ದು, ಆನ್ ಲೈನ್ ಸೇವೆಗಳಾದ ಇಂಟರ್ನೆಟ್ ಬ್ಯಾಂಕಿಂಗ್ ವೈಒಎನ್ ಒ ಮತ್ತು ಯುಪಿಐ ಗಳು ತಾತ್ಕಾಲಿಕ ಸ್ಥಗಿತವಾಗಲಿವೆ, ಏಕೆಂದರೆ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಜೂನ್ ನಲ್ಲಿ ಮತ್ತೊಮ್ಮೆ ನಿರ್ವಹಣಾ ಚಟುವಟಿಕೆಗಳಿಗೆ ಒಳಗಾಗಲು ಸಜ್ಜಾಗಿದೆ.
ತನ್ನ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು(Internet Banking services) ಜೂನ್20 ರಂದು ಸುಮಾರು 40 ನಿಮಿಷಗಳ ಕಾಲ ಅಲಭ್ಯವಾಗಿರುತ್ತವೆ, ಇದರಿಂದ ಅದು ತನ್ನ ನಿಗದಿತ ನಿರ್ವಹಣಾ ಚಟುವಟಿಕೆಗಳಲ್ಲಿ ಕೆಲಸ ಮಾಡಬಹುದು ಎಂದು ಎಸ್ ಬಿಐ ಹೇಳಿದೆ.
ಇದನ್ನೂ ಓದಿ : Covid-19 3rd Wave In India: ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾ ವೈರಸ್ ಮೂರನೇ ಅಲೆ - Dr. Randeep Guleria
ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಎಸ್ ಬಿಐ(State Bank of India), ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ನಾವು ಶ್ರಮಿಸುತ್ತಿರುವುದರಿಂದ ನಮ್ಮ ಗ್ರಾಹಕರು ಸಹಕಾರ ನೀಡಬೇಕು ವಿನಂತಿಸುತ್ತೇವೆ ಎಂದು ಎಸ್ ಬಿಐ ಟ್ವೀಟ್ ಮಾಡಿದೆ. ತನ್ನ ಟ್ವೀಟ್ ಜೊತೆಗೆ ಸಂದೇಶದಲ್ಲಿ, ಬ್ಯಾಂಕ್ 20.06.2021 ರಂದು 01:00 ಗಂಟೆಯಿಂದ 01:40 ಗಂಟೆಗಳ ನಡುವೆ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ಹೇಳಿದೆ.
Earthquake: ಅಸ್ಸಾಂನಲ್ಲಿ ಭೂಕಂಪ, ಈಶಾನ್ಯ ಪ್ರದೇಶದಲ್ಲಿ 24 ಗಂಟೆಗಳಲ್ಲಿ 5 ಬಾರಿ ಕಂಪಿಸಿದ ಭೂಮಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.