ನವದೆಹಲಿ : ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಮತ್ತು ನಿಮ್ಮ ಖಾತೆಯಲ್ಲಿ ನೀವು ಇನ್ನೂ ನಾಮಿನಿಯನ್ನು ನೋಂದಾಯಿಸದಿದ್ದರೆ, ಎಸ್‌ಬಿಐ ನಿಮಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಗ್ರಾಹಕರು ಇನ್ನುಮುಂದೆ ಎಸ್‌ಬಿಐ ನಾಮಿನಿ ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದಾಗಿದೆ. ಇದರರ್ಥ ಗ್ರಾಹಕರು ಇನ್ನು ಮುಂದೆ ನಾಮಿನಿ ನೋಂದಣಿಗಾಗಿ ಬ್ಯಾಂಕಿಗೆ ಹೋಗಬೇಕಾಗಿಲ್ಲ.


COMMERCIAL BREAK
SCROLL TO CONTINUE READING

ಪ್ರತಿಯೊಬ್ಬ ಖಾತೆದಾರರಿಗೂ ಸಿಗಲಿದೆ ಸೌಲಭ್ಯ:
ನಿಮ್ಮ ಖಾತೆಯಲ್ಲಿ ಎಸ್‌ಬಿಐ ನಾಮಿನಿ ನೋಂದಣಿ ಇಲ್ಲದಿದ್ದರೆ ಭಯಪಡುವ ಅಗತ್ಯವಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಟ್ವೀಟ್ ಮಾಡಿದೆ. ಈ ಕೆಲಸವನ್ನು ಈಗ ಆನ್‌ಲೈನ್‌ನಲ್ಲಿ ಮನೆಯಲ್ಲಿಯೇ ಮಾಡಬಹುದು. ಇದಲ್ಲದೆ, ಈ ಸೌಲಭ್ಯವು ಪ್ರತಿ ಎಸ್‌ಬಿಐ ಶಾಖೆಯಲ್ಲೂ ಲಭ್ಯವಿದೆ. ಟ್ವೀಟ್ ಪ್ರಕಾರ, ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಅಥವಾ ಚಾಲ್ತಿ ಖಾತೆ (SBI Saving Accounts), ಸ್ಥಿರ ಅಥವಾ ಮರುಕಳಿಸುವ ಠೇವಣಿ (ಆರ್‌ಡಿ) ಹೊಂದಿದ್ದರೆ ಅದರಲ್ಲೂ ಕೂಡ ನೀವು ಆನ್‌ಲೈನ್‌ನಲ್ಲಿಯೇ ನಾಮಿನಿಯನ್ನು ನೋಂದಾಯಿಸಬಹುದು.


ನೆಟ್‌ಬ್ಯಾಂಕಿಂಗ್ (Netbanking) ಮೂಲಕ ನಾಮಿನಿಯನ್ನು ಹೇಗೆ ನವೀಕರಿಸುವುದು?
ನೀವು ಎಸ್‌ಬಿಐನ ನೆಟ್ ಬ್ಯಾಂಕಿಂಗ್ (Net Banking) ಅನ್ನು ಬಳಸಿದರೆ, ಎಸ್‌ಬಿಐನ ವೆಬ್‌ಸೈಟ್ onlinesbi.com. ಭೇಟಿ ನೀಡಿ. ಇದರ ನಂತರ, ನೀವು ವಿನಂತಿ ಮತ್ತು ವಿಚಾರಣೆ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅದರ ನಂತರ ಆನ್‌ಲೈನ್ ನಾಮನಿರ್ದೇಶನದ ಆಯ್ಕೆಯನ್ನು ಆರಿಸಲು ಅನೇಕ ಆಯ್ಕೆಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ. ನೀವು ಎಸ್‌ಬಿಐನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರೆ, ಆ ವಿವರಗಳು ಬಹಿರಂಗಗೊಳ್ಳುತ್ತವೆ. ಸರಿಯಾದ ಆಯ್ಕೆಯನ್ನು ಆರಿಸಿದ ನಂತರ, ನಾಮಿನಿಯ ವಿವರಗಳನ್ನು ಭರ್ತಿ ಮಾಡಬೇಕು. ಪ್ರಕ್ರಿಯೆ ಪೂರ್ಣಗೊಂಡ ನಂತರ, ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರುತ್ತದೆ. ಒಟಿಪಿ ಪರಿಶೀಲನೆಯ ನಂತರ ನಾಮಿನಿಯ ಹೆಸರನ್ನು ಸೇರಿಸಲಾಗುತ್ತದೆ.


ಇದನ್ನೂ ಓದಿ - SBI Alert : ಡಿಜಿಟಲ್ ಮೋಸದಿಂದ ತಪ್ಪಿಸಿಕೊಳ್ಳಬೇಕೇ ? ಈ ಮಾರ್ಗಗಳನ್ನು ಅನುಸರಿಸಿ


ಎಸ್‌ಬಿಐ ಅಪ್ಲಿಕೇಶನ್‌ನೊಂದಿಗೆ ನಾಮಿನಿಯನ್ನು ಹೇಗೆ ನವೀಕರಿಸುವುದು?
ಮೊದಲು ನೀವು YONO LITE SBI ಅಪ್ಲಿಕೇಶನ್‌ಗೆ ಲಾಗಿನ್ ಆಗಬೇಕು. ಹೋಮ್ ಬಟನ್ ಕ್ಲಿಕ್ ಮಾಡಿ, ಸೇವಾ ವಿನಂತಿ ಆಯ್ಕೆಯನ್ನು ಆರಿಸಿ. ಸೇವಾ ವಿನಂತಿಯನ್ನು ಕ್ಲಿಕ್ ಮಾಡಿದಾಗ, ತೆರೆಯುವ ಪುಟದಲ್ಲಿ ಆನ್‌ಲೈನ್ ನಾಮನಿರ್ದೇಶನದ ಆಯ್ಕೆಯನ್ನು ನೀಡಲಾಗಿದೆ. ಕ್ಲಿಕ್ ಮಾಡುವಾಗ, ಖಾತೆಯ ವಿವರಗಳನ್ನು ಆಯ್ಕೆಮಾಡಿ ಮತ್ತು ನಾಮಿನಿಯ ಸಂಪೂರ್ಣ ಮಾಹಿತಿಯನ್ನು ನವೀಕರಿಸಿ. ಇಲ್ಲಿ ನಾಮಿನಿಯೊಂದಿಗಿನ ಸಂಬಂಧದ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತದೆ. ಈಗಾಗಲೇ ನಾಮಿನಿ ಇದ್ದರೆ ಮತ್ತು ಅದನ್ನು ನವೀಕರಿಸಬೇಕಾದರೆ, ಮೊದಲ ನಾಮಿನಿಯನ್ನು ರದ್ದತಿ ನಾಮನಿರ್ದೇಶನದ ಮೂಲಕ ರದ್ದುಗೊಳಿಸಬೇಕಾಗುತ್ತದೆ, ಅದರ ನಂತರ ಹೊಸ ನಾಮಿನಿಯ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.


ಇದನ್ನೂ ಓದಿ - SBI ಗ್ರಾಹಕರಿಗೆ ಒಳ್ಳೆಯ ಸುದ್ದಿ! ಶಾಪಿಂಗ್‌ನಲ್ಲಿ Bank ನೀಡುತ್ತಿದೆ ಈ ವಿಶೇಷ ಕೊಡುಗೆ


ನಾಮಿನಿ ನೋಂದಣಿಯ ಅರ್ಥ:
ಯಾವುದೇ ಕಾರಣದಿಂದ ಖಾತೆದಾರನು ಮರಣ ಹೊಂದಿದರೆ ಆ ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತದ ಮೇಲೆ ನಾಮಿನಿಗೆ ಸಂಪೂರ್ಣ ಹಕ್ಕಿರುತ್ತದೆ. ಯಾರು ನಾಮಿನಿಯಾಗಿ ನೋಂದಾಯಿಸಿಕೊಳ್ಳುತ್ತಾರೋ ಅವರು ಪೂರ್ಣ ಮೊತ್ತವನ್ನು ಪಡೆಯುತ್ತಾರೆ. ನಾಮಿನಿಯ ಅನುಪಸ್ಥಿತಿಯಲ್ಲಿ ಖಾತೆದಾರರ ಹಣ ಬ್ಯಾಂಕಿನಲ್ಲಿ ಉಳಿದಿದ್ದರೆ ಎಂದರೆ ಒಂದು ಅಂದಾಜಿನ ಪ್ರಕಾರ, ಮರಣ ಹೊಂದಿದ ಖಾತೆದಾರರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆ ಎಂದು ಭಾವಿಸೋಣ. ಆದರೆ ಅವರ ಖಾತೆಯಲ್ಲಿ ನಾಮಿನಿ ಕೊರತೆಯಿಂದಾಗಿ ಸಂತ್ರಸ್ತರ  ಕುಟುಂಬಕ್ಕೆ ಹಣ ಸಿಗುವುದಿಲ್ಲ. ಹೀಗಾಗಿ ನಿಮ್ಮ ಖಾತೆಗೆ ಹಾಗೂ ಠೇವಣಿಗಳಿಗೆ ನಾಮಿನಿ ನೋಂದಾಯಿಸುವುದು ಅಗತ್ಯವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.