ನವದೆಹಲಿ : SBI New Savings Account : ಬ್ಯಾಂಕುಗಳ ಉಳಿತಾಯ ಖಾತೆಯ ಬಡ್ಡಿದರಗಳಲ್ಲಿ ಕುಸಿತ ಕಂಡು ಬಂದಿದೆ. . ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಲಭ್ಯವಿರುವ ಬಡ್ಡಿದರಗಳು ಈಗ ಶೇಕಡಾ 3 ಕ್ಕಿಂತಲೂ ಕಡಿಮೆಯಾಗಿದೆ, ಅದು ಈಗ ವಾರ್ಷಿಕವಾಗಿ ಶೇಕಡಾ 2.70 ಕ್ಕೆ ಇಳಿದಿದೆ.


COMMERCIAL BREAK
SCROLL TO CONTINUE READING

ಎಸ್‌ಬಿಐ ಹೊಸ ಉಳಿತಾಯ ಪ್ಲಸ್ ಖಾತೆ (SBI  Savings Plus Account ) :
ಖಾತೆಯಲ್ಲಿ ಹೆಚ್ಚು ಬ್ಯಾಲೆಸ್ ಉಳಿಸಿಕೊಳ್ಳುವ  ಗ್ರಾಹಕರಿಗೆ ಹೆಚ್ಚಿನ ಬಡ್ಡಿಯನ್ನು  ಗಳಿಸುವ ಅವಕಾಶವನ್ನು ಬ್ಯಾಂಕ್ ನೀಡುತ್ತಿದೆ. ಎಸ್‌ಬಿಐ (SBI )ಸೇವಿಂಗ್ಸ್ ಪ್ಲಸ್ ಅಕೌಂಟ್ ಹೆಸರಿನ ಹೊಸ ಉಳಿತಾಯ ಖಾತೆಯನ್ನು ಬ್ಯಾಂಕ್ ತಂದಿದೆ. ಇದನ್ನು ಮಲ್ಟಿ ಆಪ್ಷನ್ ಡಿಪಾಸಿಟ್ ಸ್ಕೀಮ್‌ಗೆ (Multi Option Deposit Scheme – MODS)  ಲಿಂಕ್ ಮಾಡಲಾಗಿದೆ. ಇದರಲ್ಲಿ, ಗ್ರಾಹಕರು ಸಾಮಾನ್ಯ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ.


ಇದನ್ನೂ ಓದಿ LPG Subsidy Updates: ಗ್ಯಾಸ್ ಮೇಲಿನ ಸಬ್ಸಿಡಿ ನಿಂತು ಹೋಗಿರುವುದಕ್ಕೆ ಇದೂ ಕಾರಣವಾಗಿರಬಹುದು, ಪರಿಶೀಲಿಸಿಕೊಳ್ಳಿ


ಏನಿದೆ ಈ ಖಾತೆಯಲ್ಲಿ ?
ಇದರಲ್ಲಿ, ಉಳಿತಾಯ ಖಾತೆಯ ಸರ್ಪ್ಲಾಸ್ ಮೊತ್ತವನ್ನು 1000 ರೂ.ಗಳ ಮಲ್ಟಿಪಲ್ ನಲ್ಲಿ ಟರ್ಮ್ ದಿಪೋಸಿಟ್ ಗೆ  ವರ್ಗಾಯಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಟರ್ಮ್ ದಿಪೋಸಿಟ್ 1 ವರ್ಷದಿಂದ 5 ವರ್ಷಗಳವರೆಗೆ ಇರುತ್ತದೆ. ಇ ಎಂಒಡಿ ಠೇವಣಿ ಮೇಲೆಯೂ ಸಾಲ ತೆಗೆದುಕೊಳ್ಳಬಹುದು.


ಫ್ಲೆಕ್ಸಿ ಎಫ್‌ಡಿಯಂತೆ ಕಾರ್ಯನಿರ್ವಹಿಸುತ್ತದೆ :
ಎಸ್‌ಬಿಐ ಸೇವಿಂಗ್ಸ್ ಪ್ಲಸ್ ಖಾತೆಯು (SBI  Savings Plus Accountಫ್ಲೆಕ್ಸಿ ಫಿಕ್ಸ್ಡ್  ದಿಪೋಸಿಟ್ ನಂತೆ ಕಾರ್ಯನಿರ್ವಹಿಸುತ್ತದೆ, ಅಂದರೆ, ಖಾತೆಯಲ್ಲಿನ ಹಣವು ಒಂದು ನಿರ್ದಿಷ್ಟ ಮಿತಿಯನ್ನು ಮೀರಿದಾಗ, ಅದನ್ನು ಸ್ಥಿರ ಠೇವಣಿಗೆ ವರ್ಗಾಯಿಸಲಾಗುತ್ತದೆ, ಅದು ಕನಿಷ್ಟ ಖಾತೆ ಬಾಕಿಗಿಂತ ಕಡಿಮೆಯಾಗಲು ಪ್ರಾರಂಭಿಸಿದಾಗ, ನಂತರ ಹಣವನ್ನು ಎಫ್‌ಡಿಯಿಂದ (FD) ಹಿಂತಿರುಗಿಸಲಾಗುತ್ತದೆ.  ಇದರಿಂದಾಗಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಳ್ಳಬಹುದು.


ಇದನ್ನೂ ಓದಿ : Indian Railways, IRCTC: ಪ್ರಯಾಣಿಕರು ಈಗ ಈ 44 ರೈಲುಗಳಲ್ಲಿ ರಿಸರ್ವೇಶನ್ ಇಲ್ಲದೆಯೇ ಪ್ರಯಾಣಿಸಬಹುದು


SBI Savings Plus Account  ವೈಶಿಷ್ಟ್ಯಗಳು : 
ಎಸ್‌ಬಿಐ ವೆಬ್‌ಸೈಟ್‌  sbi.co.inನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಗ್ರಾಹಕರು ಎಸ್‌ಬಿಐ ಸೇವಿಂಗ್ಸ್ ಪ್ಲಸ್ ಖಾತೆಯಲ್ಲಿ ಈ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.


1. ಠೇವಣಿಯ ಅವಧಿ 1 ರಿಂದ 5 ವರ್ಷಗಳು
2. ಎಟಿಎಂ (ATM) ಕಾರ್ಡ್
3. ಮೊಬೈಲ್ ಬ್ಯಾಂಕಿಂಗ್ (Mobile banking)
4. ಇಂಟರ್ನೆಟ್ ಬ್ಯಾಂಕಿಂಗ್,  ಎಸ್ಎಂಎಸ್ alert
6. ಎಂಒಡಿ ದಿಪೋಸಿಟ್ ಮೇಲೆ ಸಾಲ ಸೌಲಭ್ಯ
7. MOD ಗೆ ವರ್ಗಾವಣೆಯ ಕನಿಷ್ಠ ಮಿತಿ 35,000 ರೂ
8. MOD ಯಲ್ಲಿ ವರ್ಗಾವಣೆಗೆ ಕನಿಷ್ಠ ಮೊತ್ತ 10,000 ರೂ, ಇದು 1000 ದ  ಮಲ್ಟಿಪಲ್ ನಲ್ಲಿ ನಡೆಯುತ್ತದೆ. 
9. ಒಂದು ವರ್ಷದಲ್ಲಿ 25 ಚೆಕ್ ಲೀಫ್  ಉಚಿತವಾಗಿ ಲಭ್ಯವಿದೆ. ಅದರ ನಂತರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
10. ಇಂಟರ್ನೆಟ್ ಬ್ಯಾಂಕಿಂಗ್  ವ್ಯವಹಾರಗಳು
11. ಗರಿಷ್ಠ ಬ್ಯಾಲೆನ್ಸ್ ಗೆ ಯಾವುದೇ ಮಿತಿಯಿಲ್ಲ
13. ಮಾಸಿಕ ಎವೇರೆಜ್ ಬ್ಯಾಲೆನ್ಸ್  ಶೂನ್ಯ


ಇದನ್ನೂ ಓದಿ : LIC Aadhar Shila scheme: ಪ್ರತಿದಿನ ಕೇವಲ 29 ರೂ. ಉಳಿಸಿದರೆ ಸಿಗಲಿದೆ 4 ಲಕ್ಷ ರೂ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ