ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (Life Insurance Corporation)ವು ತನ್ನ ಗ್ರಾಹಕರಿಗೆ ಹಲವು ಉಳಿತಾಯ ಯೋಜನೆಗಳನ್ನು ರೂಪಿಸಿದೆ. ಹೂಡಿಕೆ ಮಾಡಿದ ಹಣದ ಮೇಲೆ ಅತಿಹೆಚ್ಚಿನ ಬಡ್ಡಿ ಮತ್ತು ಭದ್ರತೆಯನ್ನು ಒದಗಿಸುತ್ತದೆ. ಭಾರತೀಯ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ ಹೊಂದಿರುವ ಯೋಜನೆಯೊಂದನ್ನು ಎಲ್‌ಐಸಿ ರೂಪಿಸಿದೆ. ಈ ಯೋಜನೆಯಲ್ಲಿ ತ್ವರಿತವಾಗಿ ಹಣವನ್ನು ಬೆಳೆಸುವ ಅವಕಾಶವನ್ನು ಮಹಿಳೆಯರಿಗೆ ನೀಡುತ್ತಿದೆ.
8 ರಿಂದ 55 ವರ್ಷದೊಳಗಿನ ಮಹಿಳೆಯರು ಎಲ್‌ಐಸಿ(LIC)ಯ ‘ಆಧಾರ್ ಶಿಲಾ’ ಎಂಬ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಸಣ್ಣ ಮೊತ್ತದ ಹೂಡಿಕೆ ಅಂದರೆ ದಿನವೊಂದಕ್ಕೆ ಕೇವಲ 29 ರೂ.ವನ್ನು ಈ ಯೋಜನೆಯಲ್ಲಿ ಹಾಕಿಕೊಂಡು ಬಂದರೆ ಮುಕ್ತಾಯದ ಹಂತದಲ್ಲಿ ಬರೋಬ್ಬರಿ 4 ಲಕ್ಷ ರೂ. ಕೈಸೇರುತ್ತದೆ.
ಇದನ್ನೂ ಓದಿ: Gold-Silver Rate : ಮಹಿಳೆಯೆರೆ ಗಮನಿಸಿ : ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ
ಹೂಡಿಕೆಯ ಮೇಲೆ ಖಚಿತ ಆದಾಯ(Assured Returns)ದ ಜೊತೆಗೆ ಎಲ್‌ಐಸಿಯು ಈ ಯೋಜನೆಯಲ್ಲಿ ರಕ್ಷಣೆ ವ್ಯಾಪ್ತಿಯನ್ನು ಒದಗಿಸುತ್ತಿದೆ. ಉದಾಹರಣೆಗೆ ಯಾವುದೇ ಹೂಡಿಕೆದಾರರು ಯೋಜನೆಯ ಮುಕ್ತಾಯಕ್ಕಿಂತ ಮುಂಚೆಯೇ ಮರಣ ಹೊಂದಿದ್ದಲ್ಲಿ, ಸರ್ಕಾರಿ ಸ್ವಾಮ್ಯದ ವಿಮೆದಾರರು(ಎಲ್‌ಐಸಿ) ಮೃತನ ಕುಟುಂಬಕ್ಕೆ ಹಣಕಾಸಿನ ನೆರವು ನೀಡುತ್ತಾರೆ. ಎಲ್‌ಐಸಿಯ ‘ಆಧಾರ್ ಶಿಲಾ’ ಯೋಜನೆಯಲ್ಲಿ ಹೂಡಿಕೆದಾರರಿಗೆ ಕನಿಷ್ಠ 75 ಸಾವಿರ ಹಾಗೂ ಗರಿಷ್ಠ 3 ಲಕ್ಷದವರೆಗೆ ಖಚಿತ ಮೊತ್ತದ ಭರವಸೆ ಸಿಗಲಿದೆ.
ಮಹಿಳೆಯರು ಈ ಯೋಜನೆಯಲ್ಲಿ ಕನಿಷ್ಠ 10 ವರ್ಷದಿಂದ ಗರಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಹೂಡಿಕೆದಾರರಿಗೆ ಎಲ್‌ಐಸಿ ‘ಆಧಾರ್ ಶಿಲಾ’ ಯೋಜನೆ(LIC Aadhar Shila Scheme)ಯಲ್ಲಿ ಖಾತೆ ತೆರೆಯಲು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. ಇದು ಖಾತರಿಯ ರಿಟರ್ನ್ ಎಂಡೋಮೆಂಟ್ ಯೋಜನೆಯಾಗಿದೆ. ಆಸಕ್ತರು ಎಲ್‌ಐಸಿ ಏಜೆಂಟರನ್ನು ಸಂಪರ್ಕಿಸುವ ಮೂಲಕ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.
ಇದನ್ನೂ ಓದಿ: Petrol-Diesel Price : ವಾಹನ ಸವಾರರೇ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ!
4 ಲಕ್ಷ ರೂ. ಮೆಚುರಿಟಿ ಹೇಗೆ ಪಡೆದುಕೊಳ್ಳಬಹುದು..?
4 ಲಕ್ಷ ರೂ. ಮೆಚುರಿಟಿ ಮೊತ್ತ(Maturity Amount)ವನ್ನು ಪಡೆದುಕೊಳ್ಳಲು ಮಹಿಳೆಯರು ವರ್ಷಕ್ಕೆ ಶೇ.4.5 ರಷ್ಟು ತೆರಿಗೆ ಸಹಿತ 10,959 ರೂ.ಗಳನ್ನು 20 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಆಗ ನಿಮ್ಮ ಪ್ರತಿದಿನದ ಉಳಿತಾದಯ ಮೊತ್ತ 29 ರೂ. ಆಗಲಿದೆ. ಮುಂದಿನ 20 ವರ್ಷಕ್ಕೆ ನೀವು ಎಲ್‌ಐಸಿಗೆ 2,14,696 ರೂ.ವನ್ನು ಕಟ್ಟಿದಂತಾಗುತ್ತದೆ. ಯೋಜನೆ ಮುಕ್ತಾಯದ ಬಳಿಕ ಎಲ್ಐಸಿಯು ನಿಮ್ಮ ಹೂಡಿಕೆ ಮೇಲೆ 4 ಲಕ್ಷ ರೂ.ವನ್ನು ನೀಡುತ್ತದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮಹಿಳೆಯರು ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ರೀಮಿಯಂಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟಾರೆ ದಿನವೊಂದಕ್ಕೆ 29 ರೂ. ಉಳಿಸಿ ‘ಆಧಾರ್ ಶಿಲಾ’ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಗಂಟು ಮಹಿಳಾ ಹೂಡಿಕೆದಾರರ ಕೈಸೇರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ