ಮನೆ ಕಟ್ಟುವ ಕನಸು ಇನ್ನು ನನಸು : SBI ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಹೋಂ ಲೋನ್
ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಮಾರ್ಚ್ 31ರ ವರೆಗೆ ಪ್ರೊಸೆಸಿಂಗ್ ಚಾರ್ಜನ್ನು ಕೂಡಾ ಮನ್ನಾ ಮಾಡಲಾಗಿದೆ.
ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಮನೆ ಕಟ್ಟಿಸುವವರಿಗೆ ಅಥವಾ ಮನೆ ಖರೀದಿಸುವವರಿಗೆ ಒಳ್ಳೆ ಸುದ್ದಿಯನ್ನು ತಂದಿದೆ. ಎಸ್‌ಬಿಐ ಗೃಹ ಸಾಲದ (Home loan) ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಇದೀಗ 6.70ರಷ್ಟು ಬಡ್ಡಿದರದಲ್ಲಿ (Interest rate) ಗೃಹ ಸಾಲ ನೀಡಲಾಗುತ್ತಿದೆ. ಇದಲ್ಲದೆ, ಮಾರ್ಚ್ 31ರ ವರೆಗೆ ಪ್ರೊಸೆಸಿಂಗ್ ಚಾರ್ಜನ್ನು ಕೂಡಾ ಮನ್ನಾ ಮಾಡಲಾಗಿದೆ.
ಎಸ್ ಬಿಐ ಸ್ಪೆಷಲ್ ಆಫರ್ :
ಎಸ್‌ಬಿಐನ (SBI) ವಿಶೇಷ ಕೊಡುಗೆಯಲ್ಲಿ ಬಡ್ಡಿದರವನ್ನು 6.70 ಕ್ಕೆ ಇಳಿಸಲಾಗಿದೆ. ಅದೇ ಬಡ್ಡಿದರದಲ್ಲಿ, 75 ಲಕ್ಷದವರೆಗಿನ ಸಾಲ ನೀಡಲಾಗುತ್ತದೆ. 75 ಲಕ್ಷದಿಂದ 2 ಕೋಟಿ ವರೆಗೆ ಸಾಲಕ್ಕೆ 6.75 ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಈ ವಿಶೇಷ ಆಫರ್ ನಲ್ಲಿ ವಿವಿಧ ಕೆಟಗರಿಗಳನ್ನು ರಚಿಸಲಾಗಿದೆ.
ಇದನ್ನೂ ಓದಿ : Auto-Taxi ದರ ಹೆಚ್ಚಳ, ಹೊಸ ದರಗಳನ್ನು ತ್ವರಿತವಾಗಿ ಪರಿಶೀಲಿಸಿ
ಫೋನ್ ಮೂಲಕವೇ ಆಫರ್ ಬಗ್ಗೆ ತಿಳಿದಿಕೊಳ್ಳಬಹುದು :
ಈ ಆಫರ್ ನ (offer) ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಾದರೆ ಬ್ಯಾಂಕ್ ಗೆ (Bank) ಭೇಟಿ ನೀಡುವ ಅಗತ್ಯವಿಲ್ಲ. ಮೊಬೈಲ್ ಸಂಖ್ಯೆ 72089-33140 ಅನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಎಸ್‌ಬಿಐ ಹೇಳಿದೆ.
ಸಾಲ ಸಿಗಬೇಕಾದರೆ ಏನೆಲ್ಲಾ ಬೇಕು :
ಎಸ್‌ಬಿಐನ ಈ ವಿಶೇಷ ಕೊಡುಗೆಯಲ್ಲಿ ಭಾರತೀಯ ನಾಗರಿಕರಲ್ಲದೆ, ಅನಿವಾಸಿ ಭಾರತೀಯರಿಗೂ (NRI) ಸಾಲ ನೀಡಲಾಗುತ್ತದೆ. ಉದ್ಯೋಗಸ್ಥರು ಮತ್ತು ಸ್ವ ಉದ್ಯೋಗಿಗಳು (Self employed) ಕೂಡಾ ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬಹುದು. ಸಾಲ ಪಡೆಯುವವರ ವಯಸ್ಸು 18 ರಿಂದ 75 ವರ್ಷಗಳ ಮಧ್ಯೆ ಇರಬೇಕು. ಅರ್ಜಿದಾರರ ಸಿಬಿಲ್ ಕೂಡ 750 ಕ್ಕಿಂತ ಕಡಿಮೆಯಿರಬಾರದು. ಇದಲ್ಲದೆ, ಮಾಸಿಕ ಸಂಪಾದನೆಯ ದಾಖಲೆಗಳನ್ನು ಬ್ಯಾಂಕ್ ಗೆ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ : LPG Cylinder Price : ಮಾರ್ಚ್ ಮೊದಲ ದಿನವೇ ಮತ್ತೆ ಗಗನಕ್ಕೇರಿದ ಅಡುಗೆ ಅನಿಲ ದರ
ಇತ್ತೀಚೆಗೆ, ಗೃಹ ಸಾಲ (Home loan) ಕ್ಷೇತ್ರದಲ್ಲಿ ಎಸ್‌ಬಿಐ ಉತ್ತಮ ಯಶಸ್ಸನ್ನು ಸಾಧಿಸಿದೆ. ಎಸ್‌ಬಿಐ ಇದುವರೆಗೆ ಒಟ್ಟು 5 ಲಕ್ಷ ಕೋಟಿ ಸಾಲ ನೀಡಿದೆ. 2024 ರ ವೇಳೆಗೆ ಇದನ್ನು 7 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ. 2020 ರ ಡಿಸೆಂಬರ್ ವರೆಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು 2 ಲಕ್ಷ ಜನರಿಗೆ ಎಸ್‌ಬಿಐ ಗೃಹ ಸಾಲ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.