ಜಿಯೊಗೆ ಸೆಡ್ಡು ಹೊಡೆದ ಏರ್ಟೆಲ್ ನ 399 ರೂಗಳ ಹೊಸ ಯೋಜನೆ ತಿಳಿಯಬೇಕಾ? ಹಾಗಾದ್ರೆ ಇಲ್ಲಿದೆ ಓದಿ ಅದರ ಸಂಪೂರ್ಣ ಮಾಹಿತಿ

     

Last Updated : Jan 22, 2018, 07:49 PM IST
ಜಿಯೊಗೆ ಸೆಡ್ಡು ಹೊಡೆದ ಏರ್ಟೆಲ್ ನ 399 ರೂಗಳ ಹೊಸ ಯೋಜನೆ ತಿಳಿಯಬೇಕಾ? ಹಾಗಾದ್ರೆ ಇಲ್ಲಿದೆ ಓದಿ ಅದರ ಸಂಪೂರ್ಣ ಮಾಹಿತಿ    title=

ನವದೆಹಲಿ: ಮೊಬೈಲ್ ಕಂಪನಿಗಳ ನಡುವೆ ಏರ್ಪಟ್ಟಿರುವ  ಡೇಟಾ ಸಮರವು  ಬೇಗನೆ ಅಂತ್ಯಗೊಳ್ಳುವುದಿಲ್ಲ ಎಂದು ತೋರುತ್ತದೆ. ಇದರಿಂದಾಗಿ  ಬಹುತೇಕ ಟೆಲಿಕಾಂ ಕಂಪನಿಗಳು  ಸುಮಾರು ವಾರಕ್ಕೊಮ್ಮೆ ಪರಿಷ್ಕೃತ ಯೋಜನೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ. ಪ್ರಮುಖ ಟೆಲಿಕಾಂ ಕಂಪನಿಯಾದ ಏರ್ಟೆಲ್ ತನ್ನ 399ರ ಪ್ರಿಪೇಡ್ ಯೋಜನೆಯನ್ನು ಮತ್ತೊಮ್ಮೆ ಪರಿಷ್ಕರಿಸಿದೆ.

ಪರಿಷ್ಕರಣೆಯ ನಂತರ, ಈ ಯೋಜನೆಯು ಹೆಚ್ಚು ಅವಧಿಯ ವ್ಯಾಲಿಡಿಟಿಯನ್ನು ನೀಡುತ್ತದೆ ಅಂದರೆ ಈ ಮೂಲಕ  ಏರ್ಟೆಲ್ ಬಳಕೆದಾರರು ಈಗ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು,ಮತ್ತು  ದಿನಕ್ಕೆ 100 ಎಸ್ಎಂಎಸ್ ಮತ್ತು 84 ದಿನಗಳ ಅವಧಿಯವರೆಗೆ 1 ಜಿಬಿ 3 ಜಿ / 4 ಜಿ ಡೇಟಾವನ್ನು ಬಳಸುವ ಅವಕಾಶವನ್ನು ಅದು ಗ್ರಾಹಕರಿಗೆ ನೀಡಲಿದೆ . ಏರ್ಟೆಲ್ ಎರಡನೇ ಬಾರಿಗೆ ತನ್ನ ರೂ 399 ಯೋಜನೆಯನ್ನು ಪರಿಷ್ಕರಿಸಿದೆ. ಈ ತಿಂಗಳ ಆರಂಭದಲ್ಲಿ, ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೊಗೆ ಸ್ಪರ್ಧೆ ನೀಡಲು ಯೋಜನೆಯನ್ನು ರಿಫ್ರೆಶ್ ಮಾಡಿ 70 ದಿನಗಳವರೆಗೆ ತನ್ನ ವ್ಯಾಲಿಡಿಟಿಯನ್ನು  ಹೆಚ್ಚಿಸಿತು.

ರಿಲಾಯನ್ಸ್ ಜಿಯೊ ಕೂಡಾ ಇದೆ ಮಾದರಿಯ ಆಫರ್ ನ್ನು ನೀಡುತ್ತಿದೆ . 399 ಯೋಜನೆ ಅಡಿಯಲ್ಲಿ ಜಿಯೋ 84 ದಿನಗಳಲ್ಲಿ 100 SMS ಮತ್ತು 1GB 3G / 4G ಡೇಟಾದೊಂದಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ನೀಡುತ್ತದೆ.ಏರ್ಟೆಲ್ ರೂ 399 ಯೋಜನೆ ಜೊತೆಗೆ, ಅದರ 149 ಯೋಜನೆಯನ್ನುಕೂಡಾ  ಪರಿಷ್ಕರಿಸಿದೆ. ರೂ 149 ಯೋಜನೆಯಡಿ ಏರ್ಟೆಲ್ ಈಗ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು, ದಿನಕ್ಕೆ 100 ಎಸ್ಎಂಎಸ್ ಮತ್ತು 28 ದಿನಗಳ ಅವಧಿಯಲ್ಲಿ 1 ಜಿಬಿ ಡೇಟಾವನ್ನು ನೀಡುತ್ತದೆ. ಆ ಮೂಲಕ  ಈ ಯೋಜನೆಯನ್ನು ರಿಲಯನ್ಸ್ ಜಿಯೊ 149 ಯೋಜನೆಯೊಂದಿಗೆ ಸ್ಪರ್ಧಿಸುತ್ತದೆ. ಜಿಯೋ ಅನಿಯಮಿತ ಕರೆಗಳನ್ನು 100 ಎಸ್ಎಂಎಸ್ ಮತ್ತು 1 ಜಿಬಿ ಡೇಟಾವನ್ನು ಪ್ರತಿದಿನ 289 ದಿನಗಳವರೆಗೆ 149 ರೂಪಾಯಿಗೆ ನೀಡುತ್ತಿದೆ. ಇತ್ತೀಚೆಗೆ, ಏರ್ಟೆಲ್ ಅಮೆಜಾನ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ ಮತ್ತು ಅದರ ಪೋಸ್ಟ್ ಪೇಡ್ ಗ್ರಾಹಕರಿಗೆ ಉಚಿತ ಅಮೆಜಾನ್  ಚಂದಾದಾರಿಕೆಯನ್ನು ನೀಡಲಿದೆ. ಪಾಲುದಾರಿಕೆಯ ಭಾಗವಾಗಿ ಟೆಲ್ಕೊ ತನ್ನ ಪೋಸ್ಟ್ಪೇಯ್ಡ್ ಬಳಕೆದಾರರಿಗೆ ವರ್ಷಕ್ಕೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ನೀಡುತ್ತಿದ್ದು, ಯಾರು ಇನ್ಫಿನಿಟಿ ಯೋಜನೆಯನ್ನು 499 ಮತ್ತು ಅದಕ್ಕಿಂತ ಹೆಚ್ಚಿನದನ್ನು ಬಳಸುತ್ತಿದ್ದಾರೋ ಅವರಿಗೆ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಅದೇ ರೀತಿ1,000 ಮತ್ತು ಅದಕ್ಕೂ ಹೆಚ್ಚಿನ ಕೆಲಸದ ಪ್ಲಾನ್ ನ್ನು ಹೊಂದಿದ್ದಾರೋ ಅವರಿಗೆ ಈ ಏರ್ಟೆಲ್ ವಿ-ಫೈಬರ್ ಬ್ರಾಡ್ಬ್ಯಾಂಡ್ ಸೌಲಭ್ಯ ಅನ್ವಯವಾಗಲಿದೆ. 

Trending News