ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಹಿನ್ನಡೆ ಅನುಭವಿಸಿದೆ. ವಾಸ್ತವವಾಗಿ ಎಸ್‌ಬಿಐ ಇತ್ತೀಚೆಗೆ ತನ್ನ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಬ್ಯಾಂಕಿನ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ.7ರಷ್ಟು ಇಳಿಕೆಯಾಗಿದೆ. ಇದರೊಂದಿಗೆ ಬ್ಯಾಂಕಿನ Net profit 6,068 ಕೋಟಿ ರೂ. ಗೆ ತಲುಪಿದೆ. ಹೀಗಾಗಿ ಆಗಸ್ಟ್ 8ರ ಸೋಮವಾರ SBI ಷೇರುಗಳಲ್ಲಿ ದುರ್ಬಲತೆ ಕಂಡುಬಂದಿದೆ. ಇಂದು ಈ ಷೇರು ಸುಮಾರು ಶೇ.3ರಷ್ಟು ಕುಸಿತ ಕಂಡಿದೆ. ಹೀಗಿರುವಾಗ ಹೂಡಿಕೆದಾರರು ಈಗ ಎಸ್‌ಬಿಐ ಷೇರುಗಳನ್ನು ಏನು ಮಾಡಬೇಕೆಂದು ಚಿಂತಿಸುತ್ತಿದ್ದಾರೆ? ಮಾರಾಟ ಮಾಡಬೇಕೋ ಅಥವಾ ಇನ್ನು ಹೆಚ್ಚಿನ ಷೇರುಗಳನ್ನು ಕೊಳ್ಳಬೇಕೋ ಅನ್ನೋ ಗೊಂದಲವಿದೆ.


COMMERCIAL BREAK
SCROLL TO CONTINUE READING

ಎಸ್‌ಬಿಐ ಷೇರು ಕುಸಿತ


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆದಾಯ ಕುಸಿದಿರುವುದರಿಂದ ಬ್ಯಾಂಕ್ ಲಾಭದಲ್ಲಿ ಇಳಿಕೆಯಾಗಿದೆ. ಪರಿಣಾಮ ಸೋಮವಾರ ಎಸ್‌ಬಿಐ ಷೇರು ಕುಸಿತ ಕಂಡಿದ್ದು, ಶೇ.3ಕ್ಕಿಂತ ಇಳಿಕೆಯಾಗಿದೆ. ಇದರ ಹೊರತಾಗಿಯೂ ಹೆಚ್ಚಿನ ಬ್ರೋಕರೇಜ್ ಸಂಸ್ಥೆಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರಿಗೆ ಉತ್ತಮ ರೇಟಿಂಗ್ ನೀಡಿದ್ದಾರೆ.   


ಇದನ್ನೂ ಓದಿ: Gold Price Today : ಇಂದಿನ ಚಿನ್ನ ಬೆಳ್ಳಿ ದರ ಎಷ್ಟಿದೆ ತಿಳಿದುಕೊಳ್ಳಿ


ಸೋಮವಾರ ಮಧ್ಯಾಹ್ನದ ವೇಳೆಗೆ ಸುಮಾರು 15 ರೂ.ಗಳ ಕುಸಿತದೊಂದಿಗೆ ಎಸ್‌ಬಿಐ ಷೇರು 524 ರೂ.ನಿಂದ 516 ರೂ. ತಲುಪಿದೆ. ಇದರೊಂದಿಗೆ ಹೂಡಿಕೆದಾರರ ಕೋಟ್ಯಂತರ ರೂ. ನಷ್ಟಅನುಭವಿಸಿದ್ದಾರೆ. ಹೆಚ್ಚಿನ ಹೂಡಿಕೆದಾರರು ಎಸ್‌ಬಿಐ ಷೇರುಗಳಲ್ಲಿ ದೀರ್ಘಾವಧಿ ಹೂಡಿಕೆ ಮಾಡಿದ್ದಾರೆ. ಮುಂದಿನ 12 ತಿಂಗಳುಗಳಲ್ಲಿ ಈ ಷೇರ 600 ರಿಂದ 650 ರೂ.ವರೆಗೂ ಏರಿಕೆಯಾಗಬಹುದು ಎಂದು ಹೇಳಲಾಗಿದೆ.   


ಎಸ್‌ಬಿಐ ಷೇರಿನ ಟಾರ್ಗೆಟ್ ಎಷ್ಟು?


ಬ್ರೋಕರೇಜ್ ಸಂಸ್ಥೆಗಳಾದ ಶೇರ್‌ಖಾನ್ ಎಸ್‌ಬಿಐ ಖರೀದಿಸಲು ಸಲಹೆ ನೀಡಿದ್ದು, 600 ರೂ. ಟಾರ್ಗೆಟ್ ನೀಡಿದೆ. ಇದಲ್ಲದೆ ಜೆಫರೀಸ್ ಮತ್ತು ಎಚ್‌ಎಸ್‌ಬಿಸಿ ಎರಡೂ ಎಸ್‌ಬಿಐನಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದ್ದು, 630 ರೂ. ಟಾರ್ಗೆಟ್ ನೀಡಿವೆ. ಮತ್ತೊಂದೆಡೆ ಮೋತಿಲಾಲ್ ಓಸ್ವಾಲ್ ಸಹ ಎಸ್‌ಬಿಐಗೆ ಖರೀದಿಸಲು ಸಲಹೆ ನೀಡಿದ್ದು, 625 ರೂ. ಟಾರ್ಗೆಟ್ ನೀಡಿದೆ. ಜೆಪಿ ಮೋರ್ಗಾನ್ ಎಸ್‌ಬಿಐ ಬುಲಿಷ್ ಆಗಿದ್ದು, ಖರೀದಿಸಲು ಇದು ಉತ್ತಮ ಸಮಯವೆಂದು ಸಲಹೆ ನೀಡಿ 650 ರೂ. ಟಾರ್ಗೆಟ್ ನೀಡಿದೆ.


ಇದನ್ನೂ ಓದಿ: ಹೊಸ ಸೂತ್ರದೊಂದಿಗೆ ಸರ್ಕಾರಿ ನೌಕರರ ವೇತನ ಹೆಚ್ಚಳ! ಹಣಕಾಸು ಸಚಿವರ ಮಹತ್ವದ ಮಾಹಿತಿ


(ವಿಶೇಷ ಸೂಚನೆ: ಷೇರುಮಾರುಕಟ್ಟೆಯಲ್ಲಿ ನೀವು ಯಾವುದೇ ಷೇರು ಖರೀದಿಸುವಾಗ ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ. Zee Kannada News ಇದಕ್ಕೆ ಯಾವುದೇ ರೀತಿ ಜವಾಬ್ದಾರಿಯಾಗಿರುವುದಿಲ್ಲ)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.