ಸ್ಟೇಟ್ ಬ್ಯಾಂಕ್ Vs ಪೋಸ್ಟ್ ಆಫೀಸ್ ಆರ್‌ಡಿ:  ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಹಣವನ್ನು ಉಳಿಸಲು ಬಯಸುತ್ತಾರೆ. ಹಣವನ್ನು ಉಳಿಸಲು ಸಾಕಷ್ಟು ಯೋಜನೆಗಳಿವೆ.  ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಮರುಕಳಿಸುವ ಠೇವಣಿ ಅಂದರೆ ಆರ್‌ಡಿ  ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ. ಆರ್‌ಡಿಯಲ್ಲಿ ಉತ್ತಮ ಬಡ್ಡಿ ಲಭ್ಯವಿರುವುದರ ಜೊತೆಗೆ ನಮ್ಮ ಹಣಕ್ಕೂ ಗ್ಯಾರಂಟಿ ಇರುತ್ತದೆ. 


COMMERCIAL BREAK
SCROLL TO CONTINUE READING

ಮರುಕಳಿಸುವ ಠೇವಣಿ ಅಂದರೆ ಆರ್‌ಡಿಯಲ್ಲಿ  ಖಾತೆದಾರರು ನಿಶ್ಚಿತ ಕಂತುಗಳಲ್ಲಿ ಹಣವನ್ನು ಠೇವಣಿ ಮಾಡಬೇಕು ಮತ್ತು ಮುಕ್ತಾಯದ ನಂತರ ನಿಮ್ಮ ಹಣದ ಜೊತೆಗೆ ಬಡ್ಡಿಯ ಲಾಭವನ್ನು ಪಡೆಯಬಹುದು. ಆದರೆ, ಆರ್‌ಡಿ ಖಾತೆಯಲ್ಲಿ ಒಮ್ಮೆ ನಿಗದಿಪಡಿಸಿದ ಕಂತು ಮೊತ್ತವನ್ನು ಬದಲಾಯಿಸಲಾಗುವುದಿಲ್ಲ ಎಂಬುದು ಗಮನಾರ್ಹ ವಿಷಯವಾಗಿದೆ. ಮರುಕಳಿಸುವ ಠೇವಣಿ  ಮೇಲೆ ವಿವಿಧ ಬ್ಯಾಂಕ್‌ಗಳು ಶೇ.2.50ರಿಂದ ಶೇ.8.50ರವರೆಗಿನ ಬಯನ್ನು ಒದಗಿಸುತ್ತವೆ.


ಇದನ್ನೂ ಓದಿ- IRCTC Train Ticket Reservation: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್


ನೀವು ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಎಲ್ಲಿ ಬೇಕಾದರೂ ಆರ್‌ಡಿ ಖಾತೆಯನ್ನು ತೆರೆಯಬಹುದು. ನೀವು ಪೋಸ್ಟ್ ಆಫೀಸ್‌ನ ಅಥವಾ ಸ್ಟೇಟ್ ಬ್ಯಾಂಕ್‌ ಎಲ್ಲಿ ಆರ್‌ಡಿ ಖಾತೆಯನ್ನು ತೆರೆಯುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಾ, ಪೋಸ್ಟ್ ಆಫೀಸ್ ಅಥವಾ ಸ್ಟೇಟ್ ಬ್ಯಾಂಕ್  ಎಲ್ಲಿ  ಮರುಕಳಿಸುವ ಠೇವಣಿ ಮೇಲೆ ಉತ್ತಮ ಬಡ್ಡಿ ಲಭ್ಯವಿದೆ ಎಂದು ತಿಳಿಯಲು ಮುಂದೆ ಓದಿ...


ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ - 
ಅಂಚೆ ಕಚೇರಿಯಲ್ಲಿ ನೀವು ಕನಿಷ್ಠ 100 ರೂ.ಗಳೊಂದಿಗೆ ಮರುಕಳಿಸುವ ಠೇವಣಿ ಖಾತೆಯನ್ನು ತೆರೆಯಬಹುದು. ಹಣವನ್ನು ಠೇವಣಿ ಮಾಡಲು ಯಾವುದೇ ಗರಿಷ್ಠ ಮಿತಿಯಿಲ್ಲ. ತಿಂಗಳ ಮೊದಲ 15 ದಿನಗಳಲ್ಲಿ ನಿಮ್ಮ ಖಾತೆಯನ್ನು ತೆರೆದರೆ, ನೀವು ಮುಂದಿನ ತಿಂಗಳ 15 ನೇ ತಾರೀಖಿನೊಳಗೆ ಹಣವನ್ನು ಠೇವಣಿ ಮಾಡಬೇಕು. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಯೋಜನೆಯಲ್ಲಿ ನಿಮ್ಮ ಹೂಡಿಯ ನಿರ್ದಿಷ್ಟ ಮೊತ್ತದ ಮೇಲೆ ನೀವೂ ಸಾಲವನ್ನು ಪಡೆಯಬಹುದು,  ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ಪ್ರಸ್ತುತ ಶೇಕಡಾ 5.8 ರ ದರದಲ್ಲಿ ಬಡ್ಡಿಯ ಪ್ರಯೋಜನವನ್ನು ಪಡೆಯಬಹುದು.


ಇದನ್ನೂ ಓದಿ- ಮನೆ ನಿರ್ಮಿಸುವವರಿಗೆ ಶುಭ ಸುದ್ದಿ : ಕಬ್ಬಿಣದ ಸರಳು ಮತ್ತು ಸಿಮೆಂಟ್ ದರದಲ್ಲಿ ಇಳಿಕೆ


ಸ್ಟೇಟ್ ಬ್ಯಾಂಕ್ ಮರುಕಳಿಸುವ ಠೇವಣಿ -
ನೀವು ಸ್ಟೇಟ್ ಬ್ಯಾಂಕ್‌ನಲ್ಲಿ ಮರುಕಳಿಸುವ ಠೇವಣಿ ಖಾತೆಯನ್ನು ತೆರೆದರೆ, ಸಾಮಾನ್ಯ ಜನರು 5.25% ರಿಂದ 7.25% ವರೆಗೆ ಬಡ್ಡಿಯ ಲಾಭವನ್ನು ಪಡೆಯುತ್ತಾರೆ.   ಸ್ಟೇಟ್ ಬ್ಯಾಂಕ್‌ನಲ್ಲಿ, ನೀವು 1 ವರ್ಷದಿಂದ 10 ವರ್ಷಗಳವರೆಗೆ ಮರುಕಳಿಸುವ ಠೇವಣಿ ಖಾತೆಯನ್ನು ತೆರೆಯಬಹುದು. ಇದರ ಹೊರತಾಗಿ, ನೀವು ಮರುಕಳಿಸುವ ಠೇವಣಿ ಖಾತೆಯ ಮೇಲೆ ಸಾಲವನ್ನು ಪಡೆಯಬಹುದು. ಅದೇ ರೀತಿ ನೀವು ಕನಿಷ್ಟ 12 ತಿಂಗಳವರೆಗೆ ಈ ಖಾತೆಯನ್ನು ತೆರೆಯಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ