ಬೆಂಗಳೂರು : ಸ್ವಂತ ಮನೆ ಹೊಂದುವುದು  ಪ್ರತಿಯೊಬ್ಬರ ಕನಸಾಗಿರುತ್ತದೆ. ಭಾರತದಲ್ಲಿ, ಬ್ಯಾಂಕುಗಳು 30 ವರ್ಷಗಳ ಅವಧಿಯವರೆಗೆ ಗೃಹ ಸಾಲವನ್ನು ನೀಡುತ್ತವೆ. ಗರಿಷ್ಟ ಹೋಮ್ ಲೋನ್ ಮರುಪಾವತಿ ಅವಧಿಯು ಅರ್ಜಿದಾರರ ನಿವೃತ್ತಿ ವಯಸ್ಸು ಸೇರಿದಂತೆ ಇತರ ಅಂಶಗಳನ್ನು ಅವಲಂಬಿಸಿರುತ್ತದೆ. ಗೃಹ ಸಾಲದ EMI ಅಸಲಿನ ಮೊತ್ತ, ಬಡ್ಡಿ ದರ ಮತ್ತು ಸಾಲದ ಅವಧಿ ಎನ್ನುವ ಮೂರು ಅಂಶಗಳ ಮೇಲೆ ಅವಲಂಬಿತವಾಗಿದೆ. 


COMMERCIAL BREAK
SCROLL TO CONTINUE READING

ನಿಮ್ಮ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಲು ಅನುಸರಿಸಬೇಕಾದ ಏಳು ಪ್ರಮುಖ ಸಲಹೆಗಳು : 
ಲೋನ್ ಅವಧಿಯನ್ನು ಕಡಿಮೆ ಇರಿಸಿಕೊಳ್ಳಿ :
ನಿಮ್ಮ ಲೋನ್ ಮೊತ್ತಕ್ಕೆ ನೀವು ಎಷ್ಟು ಬಡ್ಡಿಯನ್ನು ಪಾವತಿಸುತ್ತೀರಿ ಎಂಬುದನ್ನು ನಿರ್ಧರಿಸುವ ಮೂರು ಪ್ರಾಥಮಿಕ ಅಂಶಗಳಲ್ಲಿ ಹೋಮ್ ಲೋನ್ ಅವಧಿಯು ಕೂಡಾ ಒಂದು. ಅನೇಕ ಸಂದರ್ಭಗಳಲ್ಲಿ, ಜನರು ಪಾವತಿಸಬೇಕಾದ ಮಾಸಿಕ EMI ಅನ್ನು ಕಡಿಮೆ ಮಾಡಲು ದೀರ್ಘಾವಧಿಯವರೆಗೆ ಗೃಹ ಸಾಲಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ದೀರ್ಘಾವಧಿಯ ಸಾಲಕ್ಕೆ ಹೆಚ್ಚು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹೋಮ್ ಲೋನ್‌ಗೆ ಅರ್ಜಿ ಸಲ್ಲಿಸುವ ಮೊದಲು, ಸಾಲದ ಅವಧಿಯನ್ನು ಎಚ್ಚರಿಕೆಯಿಂದ ಆಯ್ಕೆಮಾಡಿ. ಹೀಗೆ ಮಾಡಿದಾಗ ಅಸಲು ಮೊತ್ತದ ಮೇಲೆ ಹೆಚ್ಚಿನ ಬಡ್ಡಿಯನ್ನು  ಪಾವತಿಸುವ ಅಗತ್ಯ ಇರುವುದಿಲ್ಲ. 


ಇದನ್ನೂ ಓದಿ ಆರ್‌ಬಿಐ ವಿತ್ತೀಯ ಪರಾಮರ್ಶೆ ನೀತಿ ಇಂದು ಪ್ರಕಟ : ಬಡ್ಡಿದರ ಇಳಿಕೆ ಸಾಧ್ಯತೆ


ಸಾಧ್ಯವಾದಾಗಲೆಲ್ಲಾ ನಿಮ್ಮ ಲೋನ್‌ಗಳನ್ನು ಪೂರ್ವಪಾವತಿ ಮಾಡಿ ಅಥವಾ ಭಾಗಶಃ ಪಾವತಿಸಿ : 
ಹೆಚ್ಚಿನ ಸಂದರ್ಭಗಳಲ್ಲಿ, ಬ್ಯಾಂಕುಗಳು ಮತ್ತು NBFCಗಳು ಫ್ಲೋಟಿಂಗ್ ಬಡ್ಡಿ ದರದ ಗೃಹ ಸಾಲಗಳ ಮೇಲೆ ಪೂರ್ವಪಾವತಿ ಅಥವಾ ಲೋನ್ ಫೋರ್‌ಕ್ಲೋಸರ್ ಶುಲ್ಕವನ್ನು ವಿಧಿಸುವುದಿಲ್ಲ.  ಆದ್ದರಿಂದ, ನಿಮ್ಮ ಹಣಕಾಸಿನ ಪರಿಸ್ಥಿತಿಗಳು ಸ್ಥಿರವಾಗಿರುವಾಗ, ಫ್ಲೋಟಿಂಗ್ ಬಡ್ಡಿ ದರವನ್ನು ಆಧರಿಸಿದ್ದರೆ ನಿಮ್ಮ ಲೋನ್‌ ಮೊತ್ತವನ್ನು ಪೂರ್ವಪಾವತಿ ಮಾಡಲು ಪ್ರಯತ್ನಿಸಿ. ನೀವು ಮೊದಲ ಕೆಲವು ವರ್ಷಗಳವರೆಗೆ ಪಾವತಿ ಮಾಡುವ  ಹೋಮ್ ಲೋನ್ EMIಯ ದೊಡ್ಡ ಭಾಗವು ಬಡ್ಡಿ ಪಾವತಿಗೆ ಹೋಗುತ್ತದೆ. ಆಗಾಗ ಮುಂಗಡ ಪಾವತಿಗಳನ್ನು ಮಾಡುವುದರಿಂದ ಅಸಲು ಮೊತ್ತವು ಗಣನೀಯವಾಗಿ ಕಡಿಮೆಯಾಗುತ್ತದೆ. ಅದರ ಮೂಲಕ ಬಡ್ಡಿಯ ಮೊತ್ತವೂ ಕಡಿಮೆಯಾಗುತ್ತದೆ. 


ಹೋಮ್ ಲೋನ್ ಬಡ್ಡಿದರಗಳನ್ನು ಹೋಲಿಕೆ ಮಾಡಿ : 
ಗೃಹ ಸಾಲದ ಮೇಲಿನ ಬಡ್ಡಿ ದರಗಳು ಮತ್ತು ಇತರ ನಿಯಮಗಳು ಮತ್ತು ಷರತ್ತುಗಳನ್ನು ಬೇರೆ ಬೇರೆ ಬ್ಯಾಂಕ್ ಗಳು ಅಥವಾ ಸಾಲ ನೀಡುವ ಸಂಸ್ಥೆಗಳೊಂದಿಗೆ ಹೋಲಿಸುವುದು ಬಹಳ ಮುಖ್ಯ. ಈ ವಿಚಾರದಲ್ಲಿ ಯಾವುದೇ ರೀತಿಯ ಅವಸರ ಮಾಡಬೇಡಿ. ಆಸ್ತಿಯನ್ನು ಖರೀದಿಸುವುದು ಅಥವಾ ನಿರ್ಮಿಸುವುದು ದೀರ್ಘಾವಧಿಯ ಹೂಡಿಕೆಯಾಗಿರುತ್ತದೆ. ಒಂದೇ ಪ್ಲಾಟ್ ಫಾರ್ಮ್ ನಲ್ಲಿ ವಿವಿಧ ಬ್ಯಾಂಕ್‌ಗಳು ನೀಡುವ ಬಡ್ಡಿದರಗಳು ಮತ್ತು ಇತರ ವಿವರಗಳನ್ನು ಹೋಲಿಸಿ ನೋಡಲು ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು ಸಹಾಯ ಮಾಡುತ್ತವೆ. 


ಇದನ್ನೂ ಓದಿ : Post Office Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ 50 ರೂ. ಹೂಡಿಕೆ ಮಾಡಿ 35 ಲಕ್ಷ ರೂ. ಪಡೆಯಿರಿ


ಕಡಿಮೆ ಬಡ್ಡಿದರಗಳಿಗೆ ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ : ಈಗಾಗಲೇ ಪಡೆದಿರುವ ಸಾಲ ಮತ್ತು ಆ ಸಾಲದ ಪೂರ್ವಪಾವತಿ ಮಾಡಲು ಪ್ರಾರಂಭಿಸಿದ ವ್ಯಕ್ತಿಗಳಿಗೆ ಸಾಲ ವರ್ಗಾವಣೆ ಸೌಲಭ್ಯವನ್ನು ನೀಡುವ ಸಾಲದಾತರು ಇದ್ದಾರೆ. ಸಾಲ ವರ್ಗಾವಣೆ ಎಂದರೆ ಒಂದು ಬ್ಯಾಂಕ್ ನಿಂದ ಸಾಲದ ಮೊತ್ತವನ್ನು ಬೇರೆ ಬ್ಯಾಂಕ್ ಗೆ ವರ್ಗಾಯಿಸುವುದು. ಹೀಗೆ ಮಾಡಿದಾಗ ಯಾವ ಬ್ಯಾಂಕ್ ಗೆ ನಾವು ಸಾಲವನ್ನು ವರ್ಗಾಯಿಸುತ್ತೆವೆಯೋ ಆ ಬ್ಯಾಂಕ್ ನ ನೀತಿ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅನ್ವಯಿಸಬಹುದಾದ ಸಾಲ ವರ್ಗಾವಣೆ ಶುಲ್ಕಗಳು ಎಷ್ಟು ಎನ್ನುವುದನ್ನು ಸರಿಯಾಗಿ ಗಮನಿಸಬೇಕು. 


ಡೌನ್ ಪೇಮೆಂಟ್ ಆಗಿ ಹೆಚ್ಚು ಪಾವತಿಸಿ : 
ಬ್ಯಾಂಕ್‌ಗಳು ಮತ್ತು NBFCಗಳು ಆಸ್ತಿಯ ಒಟ್ಟು ಮೌಲ್ಯದ 75 ಪ್ರತಿಶತದಿಂದ 90 ಪ್ರತಿಶತದವರೆಗೆ ಸಾಲವನ್ನು ನೀಡುತ್ತವೆ. ಉಳಿದ ಮೊತ್ತವನ್ನು ನಿಮ್ಮ ಜೇಬಿನಿಂದ ಖರ್ಚು ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಜೇಬಿನಿಂದ ಗರಿಷ್ಟ ಹಣವನ್ನು ಪಾವತಿಸಿದರೆ ಸಾಲದ ಮೊತ್ತವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಪ್ರಧಾನ ಸಾಲದ ಮೊತ್ತವು ಕಡಿಮೆಯಾದಂತೆ, ಇದು ಗೃಹ ಸಾಲದ ಮೇಲೆ ಪಾವತಿಸಬೇಕಾದ ಒಟ್ಟಾರೆ ಬಡ್ಡಿ ಮತ್ತಷ್ಟು ಕಡಿಮೆಯಾಗುತ್ತದೆ.  


ಇದನ್ನೂ ಓದಿ : ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಬಂಪರ್ ಹೆಚ್ಚಳ ! ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಮೋದಿ ಕ್ಯಾಬಿನೆಟ್ !


ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿಕೊಳ್ಳಿ :


ಸಾಲದಾತರು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಆದ್ಯತೆ ನೀಡುತ್ತಾರೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲದಾತರೊಂದಿಗೆ ಬಡ್ಡಿದರಗಳ ಕುರಿತು ಮಾತುಕತೆ ನಡೆಸುವಾಗ  ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ನೀಡುವ ಸಾಧ್ಯತೆ ಇರುತ್ತದೆ. ನಿಮ್ಮ ಕ್ರೆಡಿಟ್  ಹಿಸ್ಟರಿ ಉತ್ತಮವಾಗಿಲ್ಲದಿದ್ದರೆ,  ಸಾಲದಾತರ ವಿಶ್ವಾಸ ಗಳಿಸುವುದು ಕಷ್ಟವಾಗಬಹುದು. 


ನಿಮ್ಮ EMI ಅನ್ನು ಹೆಚ್ಚಿಸಿ : 
ಸಾಲದಾತನು ನಿಮ್ಮ EMI ದರಗಳನ್ನು ವಾರ್ಷಿಕವಾಗಿ ಪರಿಷ್ಕರಿಸಲು  ಅನುಮತಿಸಿದರೆ, ನಿಮ್ಮ ಆದಾಯ ಹೆಚ್ಚಾದಂತೆ ನೀವು ಹೆಚ್ಚಿನ EMI ಅನ್ನು ಆರಿಸಿಕೊಳ್ಳಬೇಕು. ಗೃಹ ಸಾಲದ EMI ಅನ್ನು ಹೆಚ್ಚಿಸುವುದರಿಂದ ಲೋನಿನ ಅವಧಿಯು ಕಡಿಮೆಯಾಗುತ್ತದೆ. ಆದ್ದರಿಂದ ನಿಮ್ಮ ಹೋಮ್ ಲೋನಿನ ಮೇಲೆ ಪಾವತಿಸಬೇಕಾದ ಬಡ್ಡಿಯು ಗಣನೀಯವಾಗಿ ಕಡಿಮೆಯಾಗುತ್ತದೆ. ನಿಮ್ಮ ಸಾಲದಾತರು ಅಂತಹ ಸೌಲಭ್ಯವನ್ನು ಒದಗಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು.


ಇದನ್ನೂ ಓದಿ :  ಕೇವಲ 5000 ರೂ. ಇದ್ದರೆ ಸಾಕು ಪ್ರತಿ ತಿಂಗಳಿಗೆ 50 ಸಾವಿರ ಆದಾಯದ ಕೆಲಸ ನಿಮಗಾಗಿ ! ಬಲು ಅದ್ಭುತ ಕೇಂದ್ರ ಸರ್ಕಾರದ ಈ ಯೋಜನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.