Post Office Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ 50 ರೂ. ಹೂಡಿಕೆ ಮಾಡಿ 35 ಲಕ್ಷ ರೂ. ಪಡೆಯಿರಿ

Post Office: ಸಣ್ಣ ಉಳಿತಾಯ ಯೋಜನೆಗಳು ದೊಡ್ಡ ಮೊತ್ತವನ್ನು ಕಲೆ ಹಾಕಲು ತುಂಬಾ ಪ್ರಯೋಜನಕಾರಿ ಆಗಿದೆ. ಹಾಗಾಗಿಯೇ, ಪ್ರತಿಯೊಬ್ಬರು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಇದಕ್ಕಾಗಿ ಜನರು ಆರ್‌ಡಿ, ಎಫ್‌ಡಿಯಂತಹ ಯೋಜನೆಗಳಲ್ಲಿಯೂ ಹೂಡಿಕೆ ಮಾಡುತ್ತಾರೆ. ನೀವು ಸಹ ಅಪಾಯವಿಲ್ಲದೆ ಲಕ್ಷಾಧಿಪತಿಯಾಗಲು ಬಯಸಿದರೆ ಅಂಚೆ ಕಚೇರಿಯ ಯೋಜನೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

Written by - Yashaswini V | Last Updated : Jun 7, 2023, 04:26 PM IST
  • ಗ್ರಾಮ ಸುರಕ್ಷಾ ಯೋಜನೆಯು ಸಾಮಾಜಿಕ ಭದ್ರತಾ ಯೋಜನೆಯಾಗಿದೆ.
  • ಈ ಯೋಜನೆಯಲ್ಲಿ ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ ನೀವು 35 ಲಕ್ಷದವರೆಗೆ ಪಡೆಯಬಹುದು.
Post Office Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ 50 ರೂ. ಹೂಡಿಕೆ ಮಾಡಿ 35 ಲಕ್ಷ ರೂ. ಪಡೆಯಿರಿ  title=

Post Office Scheme: ಸಣ್ಣ ಉಳಿತಾಯದ ಮೂಲಕ ಲಕ್ಷಾಧಿಪತಿಯಾಗಲು ಬಯಸುವಿರ. ನಿಮ್ಮ ಉತ್ತರ ಹೌದು ಎಂದಾದಲ್ಲಿ ಅಂಚೆ ಕಚೇರಿಯ ಯೋಜನೆಯು ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. ವಾಸ್ತವವಾಗಿ, ಜನರು ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಎಫ್‌ಡಿಗಳನ್ನು ಹೂಡಿಕೆಗೆ ಉತ್ತಮ ಆಯ್ಕೆಗಳೆಂದು ಭಾವಿಸುತ್ತಾರೆ. ಅಂತೆಯೇ ಬೇರೆ ಯೋಜನೆಗಳಲ್ಲಿ ಹೂಡಿಕೆ ಮಾಡಲು ನಮ್ಮ ಹೂಡಿಕೆಯ ಮೇಲೆ ಖಚಿತ ಆದಾಯ ಸಿಗುತ್ತೋ ಅಥವಾ ಇಲ್ಲವೋ ಎಂಬ ಭಯವೂ ಜನರಲ್ಲಿ ಇರುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ,  ನೀವು ಸಹ ಅಪಾಯವಿಲ್ಲದೆ ಲಕ್ಷಾಧಿಪತಿಯಾಗಲು ಬಯಸಿದರೆ ಅಂಚೆ ಕಚೇರಿಯ ಯೋಜನೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಅದುವೇ ಅಂಚೆ ಕಚೇರಿಯ ಗ್ರಾಮ ಸುರಕ್ಷಾ ಯೋಜನೆ. 

ಏನಿದು ಗ್ರಾಮ ಸುರಕ್ಷಾ ಯೋಜನೆ? 
ಅಪಾಯವಿಲ್ಲದೆ ಮಿಲಿಯನೇರ್ ಆಗಲು ಬಯಸುವವರಿಗೆ ಅಂಚೆ ಕಚೇರಿಯ "ಗ್ರಾಮ ಸುರಕ್ಷಾ ಯೋಜನೆ" ಅತ್ಯುತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ನೀವು ನಿತ್ಯ 50 ರೂ.ಗಳನ್ನು ಉಳಿಸಿ ಬರೋಬ್ಬರಿ 35 ಲಕ್ಷವನ್ನು ಕಲೆ ಹಾಕಬಹುದು. 

ಇದನ್ನೂ ಓದಿ- ಹೆಣ್ಣು ಮಕ್ಕಳಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿಶೇಷ ಯೋಜನೆ: ನಿಮ್ಮ ಮಗಳಿಗೆ ಸಿಗುತ್ತೆ 15 ಲಕ್ಷ ರೂ.

ವಾಸ್ತವವಾಗಿ, ಯಾವುದೇ ಹೂಡಿಕೆಯೊಂದಿಗೆ ಸಾಮಾನ್ಯವಾಗಿ ಅಪಾಯವೂ ಇದ್ದೇ ಇರುತ್ತದೆ. ಆದರೆ, ಎಲ್ಲರಿಗೂ ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಈ ಸಾಮಾಜಿಕ ಭದ್ರತಾ ಯೋಜನೆಯು ಅಂತಹ ಒಂದು ಆಯ್ಕೆಯಾಗಿದ್ದು, ಇದರಲ್ಲಿ ನೀವು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯಬಹುದು. 

ಇಂಡಿಯಾ ಪೋಸ್ಟ್ ತನ್ನ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಈ ರಕ್ಷಣಾ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯಲ್ಲಿ, ನೀವು ನಿತ್ಯ 50 ರೂ. ಉಳಿಸುವ ಮೂಲಕ ಪ್ರತಿ ತಿಂಗಳು 1500 ರೂ. ಹೂಡಿಕೆ ಮಾಡಬೇಕು. ನೀವು ನಿಯಮಿತವಾಗಿ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಸಮಯದಲ್ಲಿ 31 ಲಕ್ಷದಿಂದ 35 ಲಕ್ಷ ರೂಪಾಯಿಗಳ ಬೃಹತ್ ಮೊತ್ತವನ್ನು ಪಡೆಯಬಹುದು. 

ಇದನ್ನೂ ಓದಿ- Global Economy Outlook: ದುಬಾರಿ ಸಾಲ ವಿಶ್ವದ ಆರ್ಥಿಕ ಬೆಳವಣಿಗೆಗೆ ಭಾರಿ ಪೆಟ್ಟು ನೀಡಲಿದೆ ಎಂದ ವಿಶ್ವ ಬ್ಯಾಂಕ್

ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆಯ ನಿಯಮಗಳು: 
* ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
* ಹೂಡಿಕೆದಾರರಿಗೆ ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. 
* ನೀವು 55 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡಬಹುದು.
* ಈ ಯೋಜನೆಯಲ್ಲಿ ಕನಿಷ್ಠ ವಿಮಾ ಮೊತ್ತ 10,000 ರೂ.ಗಳು, ಗರಿಷ್ಠ 10 ಲಕ್ಷ ರೂ.ಗಳು. 
* ಈ ಯೋಜನೆಯ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು.
* ಪ್ರೀಮಿಯಂ ಪಾವತಿಗಾಗಿ 30 ದಿನಗಳ ಗ್ರೆಸ್ ಅವಧಿ ಕೂಡ ಲಭ್ಯವಾಗಲಿದೆ. 
* ಈ ಯೋಜನೆಯಲ್ಲಿ ನೀವು ಈ ಪಾಲಿಸಿಯ ವಿರುದ್ಧ ನೀವು ಸಾಲವನ್ನು ತೆಗೆದುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News