Share Market Update: ಷೇರು ಮಾರುಕಟ್ಟೆಯಲ್ಲಿ ಮುಂದುವರೆದ ಕೋಲಾಹಲ, ಇಂದು ಮತ್ತೆ 700 ಅಂಕಗಳಿಂದ ಕುಸಿದ ಸೆನ್ಸೆಕ್
Stock Market Update: ವಾರದ ಎರಡನೇ ದಿನವಾದ ಇಂದೂ ಕೂಡ ಷೇರು ಮಾರುಕಟ್ಟೆಯಲ್ಲಿ ಭಾರಿ ಕೋಲಾಹಲ ಮುಂದುವರೆದಿದೆ. ಮಾರುಕಟ್ಟೆಯ ವಹಿವಾಟು ಇಂದೂ ಕೂಡ ಭಾರಿ ಕುಸಿತದೊಂದಿಗೆ ಅಂತ್ಯ ಕಂಡಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಇಂದೂ ಕೂಡ ಮಕಾಡೆ ಮಲಗಿಬಿಟ್ಟಿವೆ ಎಂದರೆ ತಪ್ಪಾಗಲಾರದು. ಸೆನ್ಸೆಕ್ಸ್ 700 ಕ್ಕೂ ಅಧಿಕ ಅಂಕಗಳ ಕುಸಿತದೊಂದಿಗೆ ತನ್ನ ದಿನದ ವಯಾಹಿವಾತನ್ನು ನಿಲ್ಲಿಸಿದ್ದರೆ, ನಿಫ್ಟಿ-ಫಿಫ್ಟಿ ಕೂಡ 16,958 ಅಂಕಗಳ ಕನಿಷ್ಠ ಮಟ್ಟಕ್ಕೆ ಜಾರಿದೆ. ಇಂದು ಮಾರುಕಟ್ಟೆಯಲ್ಲಿ ಯಾವ ಷೇರುಗಳು ಟಾಪ್ ಗೆನರ್ ಆಗಿದ್ದವು ಹಾಗೂ ಯಾವುವು ಟಾಪ್ ಲೂಸರ್ ಆಗಿದ್ದವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ನವದೆಹಲಿ: Share Market Latest News - ವಾರದ ಎರಡನೇ ವಹಿವಾಟಿನ ದಿನವಾದ ಇಂದೂ ಕೂಡ ಷೇರುಪೇಟೆ ಕೂಡ ಕುಸಿತದೊಂದಿಗೆ ತನ್ನ ದಿನದಾಂತ್ಯದ ವಹಿವಾಟನ್ನು ನಿಲ್ಲಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿಗಳು ಇಂದು ಬೆಳಗ್ಗೆ ಸ್ವಲ್ಪ ಲಾಭದೊಂದಿಗೆ ಆರಂಭವನ್ನು ಕಂಡಿದ್ದು, ದಿನದ ಪೂರ್ವಾರ್ಧದಲ್ಲಿ ಹಸಿರು ವಲಯದಲ್ಲಿ ವ್ಯಾಪಾರವನ್ನು ಮುಂದುವರೆಸಿದ್ದವು. ಆದರೆ ನಂತರ ಏಕಾಏಕಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕುಸಿಯಲು ಆರಂಭಿಸಿದವು. ಸೆನ್ಸೆಕ್ಸ್ 703 ಅಂಕಗಳಿಂದ ಕುಸಿದರೆ, ಈ ಅವಧಿಯಲ್ಲಿ ನಿಫ್ಟಿ ಕೂಡ 16,958 ಅಂಕಗಳ ಮಟ್ಟಕ್ಕೆ ಜಾರಿದೆ. ವಾರದ ಮೊದಲ ದಿನವಾದ ಸೋಮವಾರವೂ ಮಾರುಕಟ್ಟೆ ಕೆಂಪು ನಿಶಾನೆಯಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿತ್ತು.
ಲಾಭದೊಂದಿಗೆ ಆರಂಭಗೊಂಡ ಮಾರುಕಟ್ಟೆ
ಮಂಗಳವಾರ ಷೇರುಪೇಟೆ ಲಾಭದೊಂದಿಗೆ ತನ್ನ ದಿನದ ವಹಿವಾಟನ್ನು ಆರಂಭಿಸಿತ್ತು. ಸೆನ್ಸೆಕ್ಸ್ 57,381.77 ಅಂಕಗಳಲ್ಲಿ ಮತ್ತು ನಿಫ್ಟಿ 17,258.95 ಅಂಕಗಳಲ್ಲಿ ವಹಿವಾಟು ಆರಂಭಿಸಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ. ಇಂದೂ ಕೂಡ ಮಾರುಕಟ್ಟೆ ಹಲವು ಏರಿಳಿತಗಳಿಗೆ ಸಾಕ್ಷಿಯಾಗಿದ್ದು, ಕೇವಲ ಅಲ್ಪಾವಧಿಗೆ ಮಾತ್ರ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಎರಡೂ ಹಸಿರು ವಲಯದಲ್ಲಿ ವಹಿವಾಟು ನಡೆಸಿದ್ದವು.
ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಏರಿಕೆ ಕಂಡಿವೆ
ಮಂಗಳವಾರ, ಬಿಎಸ್‌ಇಯ 30 ಕಂಪನಿಗಳ ಷೇರು ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ ಕೊಂಚವೇ ಲಾಭದೊಂದಿಗೆ ಮುಕ್ತಾಯ ಕಂಡಿದೆ. ಇದೇ ವೇಳೆ, NSE ಯ ನಿಫ್ಟಿ ಸಹ ಆರಂಭಿಕ ವಹಿವಾಟಿನಲ್ಲಿ ಸ್ವಲ್ಪ ಚಂಚಲತೆಯನ್ನು ತೋರಿಸಿತ್ತು. ಬೆಳಗ್ಗೆ 9.30ರ ಹೊತ್ತಿಗೆ ಸೆನ್ಸೆಕ್ಸ್ 57,220.54 ಅಂಕಗಳಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 17,190.05 ಅಂಕಗಳಲ್ಲಿ ವಹಿವಾಟು ನಡೆಸಿತ್ತು.
ಇದನ್ನೂ ಓದಿ-Online Money Transfer:ಇಂಟರ್ನೆಟ್ ಇಲ್ಲದೆಯೇ ಚಿಟಿಕೆ ಹೊಡೆಯೋದ್ರಲ್ಲಿ ಹಣ ವರ್ಗಾವಣೆ ಮಾಡುವುದು ಹೇಗೆ?
ಸೋಮವಾರ ಮಾರುಕಟ್ಟೆ ಕೆಂಪು ನಿಶಾನೆಯಲ್ಲಿ ತನ್ನ ವಹಿವಾಟನ್ನು ನಿಲ್ಲಿಸಿತ್ತು
ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರದಂದು ಮಾರುಕಟ್ಟೆಯು ಕೆಂಪು ನಿಶಾನೆಯಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿತ್ತು. ನಿನ್ನೆ ಸೆನ್ಸೆಕ್ಸ್ 57,166.74 ಅಂಕಗಳಲ್ಲಿ ಮತ್ತು ನಿಫ್ಟಿ 17,173.65 ಅಂಕಗಳಲ್ಲಿ ಮುಚ್ಚಲ್ಪಟ್ಟಿದ್ದವು. ಇಂದಿನ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 16 ಅಂಕ ಗಳಿಸಿತ್ತು.
ಇದನ್ನೂ ಓದಿ-HDFC Bonds:ಹೂಡಿಕೆದಾರರಿಗೊಂದು ಅದ್ಭುತ ಸುವರ್ಣಾವಕಾಶ! ಜೀವನವಿಡೀ ಸಿಗಲಿದೆ ಬಂಪರ್ ರಿಟರ್ನ್
ಟಾಟಾ ಸ್ಟೀಲ್ ಟಾಪ್ ಗೇನರ್
ಇಂದಿನ ವಹಿವಾಟಿನಲ್ಲಿ ಏರಿಳಿತದ ನಡುವೆ ಟಾಟಾ ಸ್ಟೀಲ್ ಸೆನ್ಸೆಕ್ಸ್‌ನಲ್ಲಿ ಟಾಪ್ ಗೇನರ್ ಆಗಿ ಹೊರಹೊಮ್ಮಿದೆ, ಜೆಎಸ್‌ಡಬ್ಲ್ಯೂ ಸ್ಟೀಲ್ ನಿಫ್ಟಿಯಲ್ಲಿ ಟಾಪ್ ಗೇನರ್ ಆಗಿ ಹೊರಹೊಮ್ಮಿದೆ. ಇನ್ನೊಂದೆಡೆ ಟಾಪ್ ಲೂಸರ್ ಕುರಿತು ಮಾತನಾಡುವುದಾದರೆ, ಇಂದು ಎಚ್‌ಡಿಎಫ್‌ಸಿ ಷೇರು ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡರಲ್ಲೂ ಟಾಪ್ ಲೂಸರ್ ಆಗಿತ್ತು. ಇದು ಎರಡರಲ್ಲೂ ಕೂಡ ಶೇ.2.5ರಷ್ಟು ಕುಸಿತ ದಾಖಲಿಸಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.