Stock Market Closed On Red Mark Today: ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿದ್ದ ಷೇರು ಮಾರುಕಟ್ಟೆಯಲ್ಲಿ ಇಂದು ಭಾರಿ ಕುಸಿತ ಕಂಡುಬಂದಿದೆ. ಷೇರುಪೇಟೆ ಇಂದು ಕೆಂಪು ನಿಶಾನೆಯಲ್ಲಿ ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ. ಇಂದು, ವಾರದ ಮೊದಲ ವಹಿವಾಟಿನ ದಿನವಾಗಿದ್ದು, ಬಿಎಸ್‌ಇಯ 30-ಷೇರುಗಳ ಸೆನ್ಸೆಕ್ಸ್ ಸೂಚ್ಯಂಕವು 1172 ಪಾಯಿಂಟ್‌ಗಳ ಕುಸಿತದೊಂದಿಗೆ 57,166 ಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ, ಎನ್‌ಎಸ್‌ಇಯ ನಿಫ್ಟಿ ಸೂಚ್ಯಂಕ ಕೂಡ 292 ಪಾಯಿಂಟ್‌ಗಳನ್ನು ಕಳೆದುಕೊಂಡು 17,184 ಮಟ್ಟದಲ್ಲಿ ವಹಿವಾಟನ್ನು ಅಂತ್ಯಗೊಳಿಸಿದೆ.
ವಾರದ ಮೊದಲ ದಿನವೇ ಷೇರುಪೇಟೆಯಲ್ಲಿ ಭಾರಿ ಕುಸಿತ
ದುರ್ಬಲ ಜಾಗತಿಕ ಸೂಚ್ಯಂಕಗಳ ನಡುವೆ, ಭಾರತೀಯ ಷೇರು ಮಾರುಕಟ್ಟೆ ಇಂದು ಭಾರಿ ಕುಸಿತದೊಂದಿಗೆ ಆರಂಭಗೊಂಡಿತ್ತು ಮತ್ತು ಎರಡೂ ಸೂಚ್ಯಂಕಗಳು ದಿನವಿಡೀ ಕೆಂಪು ನಿಶಾನೆಯಲ್ಲಿಯೇ ದಿನವಿಡೀ ಮುಂದುವರೆದಿವೆ. ಬಳಿಕ ದಿನದ ವ್ಯಾಪಾರವೂ ಕೂಡ ಕೆಂಪು ನಿಶಾನೆಯಲ್ಲಿ ಅಂತ್ಯಗೊಂಡಿದೆ. 4 ದಿನಗಳ ರಜೆಯ ನಂತರ, ಬಿಎಸ್‌ಇ ಸೆನ್ಸೆಕ್ಸ್ 1,130 ಪಾಯಿಂಟ್‌ಗಳು ಅಥವಾ ಶೇ.1.94 ರಷ್ಟು ಕುಸಿದು 57,209 ಕ್ಕೆ ಇಂದು ಆರಂಭಗೊಂಡಿತ್ತು ಎಂಬುದು ಇಲ್ಲಿ ಗಮನಾರ್ಹ ಸಂಗತಿ. NSE ಯ ನಿಫ್ಟಿ ಕೂಡ 17,176 ಮಟ್ಟದಲ್ಲಿ ತನ್ನ ವಹಿವಾಟು ಆರಂಭಿಸಿದಾಗ, 299 ಪಾಯಿಂಟ್‌ಗಳು ಅಥವಾ ಶೇ.1.71 ರಷ್ಟು ಕುಸಿದಿತ್ತು.
ಹೂಡಿಕೆದಾರರು ಕಳೆದುಕೊಂಡಿದೆಷ್ಟು?
ಇಂದಿನ ವಹಿವಾಟಿನ ಕುಸಿತದಿಂದ ಹೂಡಿಕೆದಾರರು ಸುಮಾರು 3 ಲಕ್ಷ ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ನಾವು ವಿವಿಧ ಷೇರುಗಳ ಕುರಿತು ಹೇಳುವುದಾದರೆ, ಇಂದು ಮಾರುಕಟ್ಟೆಯ ಆರಂಭಗೊಂಡಾಗ, ಸುಮಾರು 950 ಷೇರುಗಳಲ್ಲಿ ಏರಿಕೆ ಕಂಡುಬಂದಿದ್ದರೆ, 1611 ಷೇರುಗಳು ಕುಸಿತ ಕಂಡಿವೆ ಮತ್ತು 142 ಷೇರುಗಳು ಯಾವುದೇ ಬದಲಾವಣೆಯನ್ನು ತೋರಿಸಿಲ್ಲ.
ಈ ಷೇರುಗಳಲ್ಲಿ ಭಾರಿ ಕುಸಿತ
ಇಂದು ನಿಫ್ಟಿಯಲ್ಲಿ ಇನ್ಫೋಸಿಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರಾ ಮತ್ತು ಅಪೊಲೊ ಆಸ್ಪತ್ರೆಗಳು ಅತಿ ಹೆಚ್ಚು ನಷ್ಟವನ್ನು ಅನುಭವಿಸಿದರೆ, ಎನ್‌ಟಿಪಿಸಿ, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಎಚ್‌ಡಿಎಫ್‌ಸಿ ಲೈಫ್, ಕೋಲ್ ಇಂಡಿಯಾ ಮತ್ತು ಟಾಟಾ ಸ್ಟೀಲ್ ಷೇರುಗಳು ಮಾರುಕಟ್ಟೆ ಪ್ರಕ್ಷುಬ್ಧತೆಯ ಹೊರತಾಗಿಯೂ ಉತ್ತಮ ಸ್ಥಿತಿಯಲ್ಲಿದ್ದವು. ಇದೇ ವೇಳೆ, ಐಟಿ ಸೂಚ್ಯಂಕವು ಶೇ. 4.7 ರಷ್ಟು ಕುಸಿತವನ್ನು ಕಂಡಿದೆ ಮತ್ತು ರಿಯಾಲಿಟಿ ಮತ್ತು ಬ್ಯಾಂಕ್ ಸೂಚ್ಯಂಕಗಳು ಸಹ ಶೇ. 1-1 ರಷ್ಟು ಕುಸಿತ ಕಂಡಿವೆ. ಇನ್ನೊಂದೆಡೆ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳಲ್ಲಿ ಶೇಕಡಾ 1-1 ರಷ್ಟು ಕುಸಿತ ಕಂಡುಬಂದಿದೆ.
ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ಬಾಕಿ DA ಕುರಿತು ಬಿಗ್ ಅಪ್ಡೇಟ್ ಪ್ರಕಟ
ಕಳೆದ ವಾರ ಸೆನ್ಸೆಕ್ಸ್ 1100 ಅಂಕಗಳಿಗಿಂತ ಹೆಚ್ಚು ಕುಸಿದಿತ್ತು
ಇನ್ನು ಕಳೆದ ವಾರದ ಕುರಿತು ಹೇಳುವುದಾದರೆ, ಬಿಎಸ್‌ಇಯ 30-ಷೇರುಗಳ ಸೆನ್ಸೆಕ್ಸ್ 1,108.25 ಪಾಯಿಂಟ್‌ಗಳ ಕುಸಿತವನ್ನು ಕಂಡಿತ್ತು, ನಿಫ್ಟಿ 308.70 ಪಾಯಿಂಟ್‌ಗಳಷ್ಟು ಕುಸಿತ ಕಂಡಿತ್ತು. ಮಾರುಕಟ್ಟೆಯು ಎಫ್‌ಡಿಐ, ರೂಪಾಯಿ ಮತ್ತು ಕಚ್ಚಾ ತೈಲದ ಏರಿಳಿತದ ಮೇಲೆಯೂ ತನ್ನ ದೃಷ್ಟಿ ಬೀರಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.