Bank Revises Charges: ನೀವೂ ಕೂಡ ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಹೊಸ ವರ್ಷದಲ್ಲಿ ಗ್ರಾಹಕರಿಗೆ ಶಾಕ್ ನೀಡಿರುವ ಸರ್ಕಾರಿ ವಲಯದ ಬ್ಯಾಂಕ್ ಆದ ಕೆನರಾ ಬ್ಯಾಂಕ್ ತನ್ನ ಒಂಬತ್ತು ಸೇವೆಗಳಿಗೆ ವಿಧಿಸುವ ಶುಲ್ಕವನ್ನು ಪರಿಷ್ಕರಿಸಿದೆ. ಆದಾಗ್ಯೂ, ಬ್ಯಾಂಕ್ ಜಾರಿಗೊಳಿಸಿರುವ ಹೊಸ ದರಗಳು ಫೆಬ್ರವರಿ 3 ರಿಂದ ಜಾರಿಗೆ ಬರಲಿವೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಕೆನರಾ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಬ್ಯಾಂಕ್‌ನಿಂದ ಇನ್ನು ಮುಂದೆ ಒಂಬತ್ತು ಸೇವೆಗಳಿಗೆ ಹೊಸ ಶುಲ್ಕವನ್ನು ವಿಧಿಸಲಾಗುವುದು ಎಂದು ತಿಳಿಸಿದೆ. ಕೆನರಾ ಬ್ಯಾಂಕ್ ಫೆಬ್ರವರಿ 3, 2023 ರಿಂದ ಜಾರಿಗೆ ಬರುವಂತೆ ಕೆಲವು ಕ್ರೆಡಿಟ್ ಅಲ್ಲದ, ಫಾರೆಕ್ಸ್ ಅಲ್ಲದ ಸಂಬಂಧಿತ ಸೇವೆಗಳಿಗೆ ಸೇವಾ ಶುಲ್ಕವನ್ನು ಪರಿಷ್ಕರಿಸಿದೆ.


ಕೆನರಾ ಬ್ಯಾಂಕ್‌ನ ಈ 9 ಸೇವೆಗಳಿಗೆ ಶುಲ್ಕ ಪರಿಷ್ಕರಣೆ:
ಕೆನರಾ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕೆನರಾ ಬ್ಯಾಂಕ್ ಗ್ರಾಹಕರು ಈಗ ಚೆಕ್ ರಿಟರ್ನ್ , ಇಸಿಎಸ್ ಡೆಬಿಟ್ ರಿಟರ್ನ್ ಶುಲ್ಕಗಳು, ಸರಾಸರಿ ಕನಿಷ್ಠ ಬ್ಯಾಲೆನ್ಸ್ (ಎಎಮ್‌ಬಿ), ಸರಾಸರಿ ಮಾಸಿಕ ಕನಿಷ್ಠ ಬ್ಯಾಲೆನ್ಸ್‌ನ ನಿರ್ವಹಣೆ ಮಾಡದಿರುವುದು, ಲೆಡ್ಜರ್ ಫೋಲಿಯೊ ಶುಲ್ಕಗಳು, ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಮೂಲಕ ಹಣ ವರ್ಗಾವಣೆ (ಐಎಂಪಿಎಸ್ ವರ್ಗಾವಣೆ) ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಬ್ಯಾಂಕ್ ಪರಿಷ್ಕೃತ ಶುಲ್ಕಗಳನ್ನು ಮಾಡಿದೆ .


ಇದನ್ನೂ ಓದಿ- 1000 ರೂಪಾಯಿ ನೋಟು ನಿಮ್ಮ ಬಳಿಯಿದ್ದರೆ ಸಿಗುವುದು ಪೂರ್ತಿ 3 ಲಕ್ಷ!


ಆದಾಗ್ಯೂ, ತಾಂತ್ರಿಕ ಕಾರಣಗಳಿಂದಾಗಿ ಬ್ಯಾಂಕಿಗೆ ಚೆಕ್ ಅನ್ನು ಹಿಂದಿರುಗಿಸಿದರೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಯಾವುದೇ ಬದಲಾವಣೆಯ ನಂತರ, 
* 1000 ರೂ. ಕ್ಕಿಂತ ಕಡಿಮೆ ಚೆಕ್‌ಗೆ ರೂ. 200 ಶುಲ್ಕವನ್ನು ಪಾವತಿಸಬೇಕಾಗುತ್ತದೆ. 
* 1000 ರಿಂದ 10 ಲಕ್ಷ ರೂ.ವರೆಗಿನ ಮೊತ್ತಕ್ಕೆ ಈ 300 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.  
* 10 ಲಕ್ಷ ರೂ.ಗಳಿಂದ ಹೆಚ್ಚು ಮತ್ತು 50 ಲಕ್ಷ ರೂ.ಗಿಂತ ಕಡಿಮೆ ಮೊತ್ತಕ್ಕೆ ರೂ. 500/- ಶುಲ್ಕ 
* 50 ಲಕ್ಷ ರೂ.ಗಳಿಗಿಂತ ಹೆಚ್ಚು 1 ಕೋಟಿ ರೂ.ಗಿಂತ ಕಡಿಮೆ ಮೊತ್ತಕ್ಕೆ ರೂ. 1000/- ಶುಲ್ಕ ಹಾಗೂ
* 1 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ರೂ. 2000/- ಶುಲ್ಕವನ್ನು ಪಾವತಿಸಬೇಕಾಗುತ್ತದೆ.


ಸರಾಸರಿ ಕನಿಷ್ಠ ಬ್ಯಾಲೆನ್ಸ್ (AMB):
ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಪ್ರದೇಶಕ್ಕೆ ಅನುಗುಣವಾಗಿ ಬ್ಯಾಲೆನ್ಸ್ ನಿರ್ವಹಿಸಬೇಕಾಗುತ್ತದೆ. ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಈ ಮೊತ್ತವನ್ನು ನಿರ್ವಹಿಸದಿದ್ದರೆ ವಿವಿಧ ಪ್ರದೇಶಗಳಿಗೆ ಅನುಗುಣವಾಗಿ 25 ರಿಂದ 45 ರೂ ಮತ್ತು ಜಿಎಸ್‌ಟಿ ದಂಡವನ್ನು ವಿಧಿಸಲು ಬ್ಯಾಂಕ್ ನಿರ್ಧರಿಸಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿ ರೂ. 500/- 
ಸೆಮಿ ಅರ್ಬನ್ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿ ರೂ. 1000/- 
ನಗರ/ಮೆಟ್ರೋ ನಗರಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿ ರೂ. 2000/-  


ಇದನ್ನೂ ಓದಿ- ಮಾರುತಿಯ ಈ ಕಾರಿನ ಮೇಲೆ ಸಿಗುತ್ತಿದೆ 65 ಸಾವಿರದವರೆಗೆ ರಿಯಾಯಿತಿ


ಬ್ಯಾಂಕ್ ಖಾತೆಯಲ್ಲಿ ಹೆಸರುಗಳ ಸೇರ್ಪಡೆ ಅಥವಾ ಅಳಿಸುವಿಕೆಗೆ ಶುಲ್ಕವು 100 ರೂ. ಮತ್ತು ಜಿಎಸ್‌ಟಿ ಶುಲ್ಕವನ್ನು ವಿಧಿಸಲಾಗುತ್ತದೆ. ಆದಾಗ್ಯೂ,  ಈ ಶುಲ್ಕವು ವಿಂಡೋ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅನ್ವಯಿಸುತ್ತದೆ. ಆನ್‌ಲೈನ್ ಮೋಡ್‌ನಲ್ಲಿ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.  ಇದಲ್ಲದೆ, ಜಾಯಿಂಟ್ ಅಕೌಂಟ್‌ನಲ್ಲಿರುವ ಗ್ರಾಹಕರ ಸಾವಿನ ಕಾರಣ ಹೆಸರನ್ನು ಅಳಿಸಲು ಅನ್ವಯಿಸುವುದಿಲ್ಲ.


ಮೊಬೈಲ್ ಸಂಖ್ಯೆ, ಇ-ಮೇಲ್ ಮತ್ತು ವಿಳಾಸ ಇತ್ಯಾದಿಗಳನ್ನು ಬದಲಾಯಿಸಲು ಸಹ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 


ಎಟಿಎಂನಿಂದ ಹಣ ಡ್ರಾ ಮಾಡಲು ಶುಲ್ಕ:
ಕೆನರಾ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಎಟಿಎಂ ಮೂಲಕ ತಿಂಗಳಿಗೆ ನಾಲ್ಕು ಬಾರಿ ಹಣ ಡ್ರಾ ಮಾಡಲು ಯಾವ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದರ ನಂತರ, ಪ್ರತಿ ವಹಿವಾಟಿನ ಮೇಲೆ ರೂ. 5 ಜೊತೆಗೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.