ನವದೆಹಲಿ: ಸಾರ್ವಜನಿಕ ವಲಯದ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ತನ್ನ ತ್ರೈಮಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಬಾರಿ ಎಲ್‍ಐಸಿಯ 2ನೇ ತ್ರೈಮಾಸಿಕ ಫಲಿತಾಂಶ ಉತ್ತಮವಾಗಿರದೇ ಕಂಪನಿಯ ಲಾಭದಲ್ಲಿ ಇಳಿಕೆಯಾಗಿದೆ. ವಾಸ್ತವವಾಗಿ ಎಲ್ಐಸಿ ನಿವ್ವಳ ಲಾಭ ಅರ್ಧದಷ್ಟು ಕಡಿಮೆಯಾಗಿದೆ. ಕಂಪನಿಯ ಆದಾಯದಲ್ಲೂ ಭಾರೀ ಕುಸಿತವಾಗಿದೆ. ಎಲ್‌ಐಸಿಯ ತ್ರೈಮಾಸಿಕ ಫಲಿತಾಂಶ ಹೇಗಿದೆ ಎಂದು ತಿಳಿಯಿರಿ.  


COMMERCIAL BREAK
SCROLL TO CONTINUE READING

ಶೇ.50ರಷ್ಟು ಕುಸಿತ


ಸಾರ್ವಜನಿಕ ವಲಯದ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಶೇ.50ರಷ್ಟು ಕುಸಿದಿದೆ. ಇದರೊಂದಿಗೆ ಕಂಪನಿಯ ಲಾಭ ಈಗ 8,000 ಕೋಟಿ ರೂ.ಗಿಂತ ಕಡಿಮೆಯಾಗಿದೆ. ಕಂಪನಿ ನೀಡಿರುವ ಮಾಹಿತಿಯಲ್ಲಿ ಎಲ್‌ಐಸಿ ನಿವ್ವಳ ಲಾಭದಲ್ಲಿ ಶೇ.50ರಷ್ಟು ಇಳಿಕೆ ಕಂಡು 7,925 ಕೋಟಿ ರೂ.ಗೆ ತಲುಪಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ದೇಶದ ಅತಿದೊಡ್ಡ ವಿಮಾ ಕಂಪನಿಯ ನಿವ್ವಳ ಲಾಭ 15,952 ಕೋಟಿ ರೂ. ಆಗಿತ್ತು.


ಇದನ್ನೂ ಓದಿ: ಟೀಂ ಇಂಡಿಯಾದ ಅತಿ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ? ಈತನ ಆಸ್ತಿ ಮೌಲ್ಯ ಸುಮಾರು 20,000 ಕೋಟಿಗಿಂತಲೂ ಹೆಚ್ಚು…


ನಿವ್ವಳ ಆದಾಯದಲ್ಲೂ ಇಳಿಕೆ!


ಭಾರತೀಯ ಜೀವ ವಿಮಾ ನಿಗಮ (LIC) ಮೂಲಕ ಜನರಿಗೆ ಜೀವ ವಿಮೆಯನ್ನು ಒದಗಿಸಲಾಗಿದೆ. LIC ಜೀವ ವಿಮೆಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಹೊಂದಿದೆ. ಇದಲ್ಲದೆ ಎಲ್ಐಸಿ ಆರೋಗ್ಯ ವಿಮಾ ಯೋಜನೆಗಳನ್ನು ಸಹ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಯ ಲಾಭದಲ್ಲಿನ ಕುಸಿತವು ಸಾಕಷ್ಟು ಆತಂಕಕಾರಿಯಾಗಿದೆ. ಎಲ್‌ಐಸಿಯ ನಿವ್ವಳ ಪ್ರೀಮಿಯಂ ಆದಾಯದಲ್ಲೂ ಇಳಿಕೆಯಾಗಿದೆ.


ನಿವ್ವಳ ಪ್ರೀಮಿಯಂ ಆದಾಯ


ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಪ್ರೀಮಿಯಂ ಆದಾಯ 1,07,397 ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (LIC) ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಇದು ಕಳೆದ ತ್ರೈಮಾಸಿಕದಲ್ಲಿ 1,32,631.72 ಕೋಟಿ ರೂ. ಇತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯದಲ್ಲೂ ಇಳಿಕೆಯಾಗಿದೆ. ಕಂಪನಿಯ ಒಟ್ಟು ಆದಾಯವು 2ನೇ ತ್ರೈಮಾಸಿಕದಲ್ಲಿ 2,01,587 ಕೋಟಿ ರೂ.ಗೆ ಕುಸಿದಿದೆ, ಇದು ಸೆಪ್ಟೆಂಬರ್ 2022 ತ್ರೈಮಾಸಿಕದಲ್ಲಿ 2,22,215 ಕೋಟಿ ರೂ. ಇತ್ತು.


ಇದನ್ನೂ ಓದಿ: ಇವರೇ ಟೀಮ್‌ ಇಂಡಿಯಾದ ಮುಂದಿನ ಹಾರ್ದಿಕ್ ಪಾಂಡ್ಯ.. ಭಾರತದ ಆಲ್ ರೌಂಡರ್ ಆಗಿ ಮಿಂಚ್ತಾರಾ ಈ ಯುವ ಆಟಗಾರ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.