ಟೀಂ ಇಂಡಿಯಾದ ಅತಿ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ? ಈತನ ಆಸ್ತಿ ಮೌಲ್ಯ ಸುಮಾರು 20,000 ಕೋಟಿಗಿಂತಲೂ ಹೆಚ್ಚು…

India’s richest cricketer Samarjeet Singh Net Worth: ಭಾರತದ ಅತ್ಯಂತ ಜನಪ್ರಿಯ ಕ್ರೀಡೆ ಎಂದರೆ ಅದು ಕ್ರಿಕೆಟ್. ಅಂದಹಾಗೆ ಭಾರತೀಯ ಕ್ರಿಕೆಟಿಗರು ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರು ಎಂಬುದು ಎಲ್ಲರಿಗೂ ತಿಳಿದ ಸತ್ಯ. ಪಂದ್ಯದ ಶುಲ್ಕಗಳ ಹೊರತಾಗಿಯೂ  ಜಾಹೀರಾತುಗಳು ಮತ್ತು ಇತರ ವಿಷಯಗಳ ಮೂಲಕ ಗಣನೀಯ ಪ್ರಮಾಣದ ಹಣವನ್ನು ಗಳಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮುಂತಾದ ಲೆಜೆಂಡರಿ ಕ್ರಿಕೆಟಿಗರು ಭಾರತದ ಶ್ರೀಮಂತ ಕ್ರಿಕೆಟಿಗರು. ಆದರೆ ಈ ಎಲ್ಲಾ ದಿಗ್ಗಜರನ್ನು ಮೀರಿಸಬಲ್ಲ ಓರ್ವ ಕ್ರಿಕೆಟಿಗನಿದ್ದಾನೆ. ಈತನ ನಿವ್ವಳ ಮೌಲ್ಯವು ಎಷ್ಟೆಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.

2 /8

ಅಂದಹಾಗೆ ನಾವಿಂದು ಮಾತನಾಡುತ್ತಿರುವುದು ಮಾಜಿ ಕ್ರಿಕೆಟಿಗ ಸಮರ್ಜಿತ್ಸಿಂಗ್ ರಣಜಿತ್ ಸಿಂಗ್ ಗಾಯಕ್ವಾಡ್ ಬಗ್ಗೆ.

3 /8

ಸಮರ್ಜಿತ್ಸಿಂಗ್ ರಣಜಿತ್ ಸಿಂಗ್ ಗಾಯಕ್ವಾಡ್ ಅವರು ಏಪ್ರಿಲ್ 25, 1967 ರಂದು ಜನಿಸಿದರು. ರಣಜಿತ್ ಸಿಂಗ್ ಪ್ರತಾಪ್ ಸಿಂಹ ಗಾಯಕ್ವಾಡ್ ಮತ್ತು ಶುಭಾಂಗಿನಿರಾಜೆ ಅವರ ಏಕೈಕ ಪುತ್ರ ಇವರು. ಸಮರ್ಜಿತ್‌ಸಿಂಗ್ ರಣಜಿತ್ ಸಿಂಗ್ ಗಾಯಕ್ವಾಡ್ ಡೆಹ್ರಾಡೂನ್‌’ನ ದಿ ಡೂನ್ ಶಾಲೆಯಲ್ಲಿ ಓದಿದರು. ಚಿಕ್ಕ ವಯಸ್ಸಿನಿಂದಲೂ ಕ್ರೀಡೆಯತ್ತ ಒಲವು ಹೊಂದಿದ್ದ ಅವರು, ಶಾಲೆಯ ಫುಟ್ಬಾಲ್, ಟೆನಿಸ್ ಮತ್ತು ಕ್ರಿಕೆಟ್ ತಂಡಗಳ ನಾಯಕರಾಗಿದ್ದರು.

4 /8

ಅಷ್ಟೇ ಅಲ್ಲದೆ, ಸಮರ್ಜಿತ್‌ಸಿಂಗ್ ಅವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಆಗಿದ್ದರು. ಜೊತೆಗೆ ಬರೋಡೈನ್ ರಣಜಿ ಟ್ರೋಫಿಗಾಗಿ ಆಡಿದ್ದಲ್ಲದೆ, 1987/88 ಮತ್ತು 1988/89 ಸೀಸನ್’ನಲ್ಲಿ ಪ್ರತಿನಿಧಿಸಿದರು. ಕ್ರಿಕೆಟ್‌’ನಿಂದ ನಿವೃತ್ತರಾದ ನಂತರ, ಸಮರ್ಜಿತ್‌ಸಿಂಗ್ ಅವರು ಬರೋಡಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದರು.

5 /8

ಸಮರ್ಜಿತ್‌ಸಿಂಗ್ ಅವರು ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎಂದು ವರದಿಯಾಗಿದೆ. ಇವರ ಆಸ್ತಿ ಮೌಲ್ಯ ಸುಮಾರು 20,000 ಕೋಟಿಗಿಂತಲೂ ಹೆಚ್ಚು. ಸಮರ್ಜಿತ್‌ಸಿಂಗ್ ಅವರು ತಮ್ಮ ಕುಟುಂಬದ ಸಂಪತ್ತಿನ ಗಮನಾರ್ಹ ಮೊತ್ತವನ್ನು ಆನುವಂಶಿಕವಾಗಿ ಪಡೆದಿದ್ದಾರೆ.

6 /8

ಅವರ ತಂದೆ ರಣಜಿತ್ ಸಿಂಗ್ ಪ್ರತಾಪ್‌ಸಿನ್ಹ್ ಗಾಯಕ್ವಾಡ್ ಅವರ ನಿಧನದ ನಂತರ, ಸಮರ್ಜಿತ್‌ಸಿಂಗ್ ಅವರು ಜೂನ್ 2012 ರಲ್ಲಿ ಲಕ್ಷ್ಮೀ ವಿಲಾಸ್ ಅರಮನೆಯಲ್ಲಿ ಬರೋಡಾದ ಮಹಾರಾಜರಾಗಿ ಪಟ್ಟಾಭಿಷೇಕ ಮಾಡಿದರು. ಸಮರ್ಜಿತ್‌ಸಿಂಗ್ ಗಾಯಕ್ವಾಡ್ ಅವರು ಭಾರತದ ಅತಿದೊಡ್ಡ ಖಾಸಗಿ ನಿವಾಸವಾಗಿರುವ ಲಕ್ಷ್ಮಿ ವಿಲಾಸ್ ಅರಮನೆಯ ಮಾಲೀಕರಾಗಿದ್ದಾರೆ.

7 /8

ಗುಜರಾತ್ ಮತ್ತು ಬನಾರಸ್‌’ನ 17 ಪ್ರಮುಖ ದೇವಾಲಯಗಳ ದೇವಾಲಯದ ಟ್ರಸ್ಟ್‌’ಗಳನ್ನು ಸಹ ನಿಯಂತ್ರಿಸುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಸಮರ್ಜಿತ್‌ಸಿಂಗ್ ಅವರು ಗುಜರಾತ್‌’ನ ವಾಂಕನೇರ್ ರಾಜ್ಯಕ್ಕೆ ಸೇರಿದ ರಾಧಿಕರಾಜೆ ಗಾಯಕ್ವಾಡ್ ಅವರನ್ನು ವಿವಾಹವಾಗಿದ್ದಾರೆ.

8 /8

ಸಮರ್ಜಿತ್‌ಸಿಂಗ್ ಗಾಯಕ್ವಾಡ್ ಅವರ ನಿವ್ವಳ ಮೌಲ್ಯವನ್ನು ಜನಪ್ರಿಯ ಭಾರತೀಯ ಕ್ರಿಕೆಟಿಗರೊಂದಿಗೆ ಹೋಲಿಸಿದರೆ, ಅವರಿಗಿಂತ ಅದೆಷ್ಟೋ ಪಟ್ಟು ಹೆಚ್ಚು ಶ್ರೀಮಂತರು ಎಂದು ಹೇಳಬಹುದು. ಸಚಿನ್ ತೆಂಡೂಲ್ಕರ್ ಅವರ ನಿವ್ವಳ ಮೌಲ್ಯ ರೂ. 1250 ಕೋಟಿ, ವಿರಾಟ್ ಕೊಹ್ಲಿ ನಿವ್ವಳ ಮೌಲ್ಯ 1050 ಕೋಟಿ, ಎಂಎಸ್ ಧೋನಿ ಸಂಪತ್ತು ಸುಮಾರು ರೂ. 1040 ಕೋಟಿ. ಆದರೆ ಇವರ ನಿವ್ವಳ ಮೌಲ್ಯ ಸುಮಾರು 20 ಸಾವಿರ ಕೋಟಿಗೂ ಹೆಚ್ಚು.