ICICI Bank Credit Card Data: ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್‌ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಇತ್ತೀಚೆಗೆ ವಿತರಿಸಲಾದ ಸುಮಾರು 17,000 ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ತಪ್ಪು ಬಳಕೆದಾರರಿಗೆ ಲಿಂಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿರುವ ಐಸಿಐಸಿಐ ಬ್ಯಾಂಕ್ ಕೂಡಲೇ ಇತ್ತೀಚೆಗೆ ವಿತರಿಸಲಾಗಿರುವ ಕಾರ್ಡ್‌ಗಳನ್ನು ಬ್ಲಾಕ್ ಮಾಡಿರುವುದಾಗಿ ತಿಳಿಸಿದೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಗುರುವಾರ (ಏಪ್ರಿಲ್ 25) ಮಾಹಿತಿ ಹಂಚಿಕೊಂಡಿರುವ ಐಸಿಐಸಿಐ ಬ್ಯಾಂಕ್ (ICICI Bank), ಬ್ಯಾಂಕ್ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳು, ತಮ್ಮ ಪೂರ್ಣ ಸಂಖ್ಯೆ ಮತ್ತು ಕಾರ್ಡ್ ಪರಿಶೀಲನೆ ಮೌಲ್ಯ (CVV) ಸೇರಿದಂತೆ ಬ್ಯಾಂಕ್‌ನ iMobile Pay ಅಪ್ಲಿಕೇಶನ್‌ನಿಂದ ಸೋರಿಕೆಯಾಗುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಳವಳ ವ್ಯಕ್ತಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿರುವುದಾಗಿ ಹೇಳಿಕೊಂಡಿದೆ. 


ಇದನ್ನೂ ಓದಿ- ಲಂಡನ್, ಅಬುದಾಬಿಯಲ್ಲಿ ಅಲ್ಲ, ಇಲ್ಲಿ ನೆರವೇರಲಿದೆ ಅನಂತ್ ಅಂಬಾನಿ ವಿವಾಹ ! ನಡೆಯುತ್ತಿದೆ ಅದ್ದೂರಿ ತಯಾರಿ


ಹಣಕಾಸು-ಸಂಬಂಧಿತ ಫೋರಮ್ ಟೆಕ್ನೋಫಿನೋದಲ್ಲಿ, ಹಲವಾರು ಬಳಕೆದಾರರು ತಮ್ಮ iMobile Pay ಅಪ್ಲಿಕೇಶನ್‌ನಲ್ಲಿ ಕೆಲವು ಅಪರಿಚಿತ ಗ್ರಾಹಕರ ಕ್ರೆಡಿಟ್ ಕಾರ್ಡ್‌ಗಳ ಪೂರ್ಣ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ ಮತ್ತು CVV ನಂತಹ ಸೂಕ್ಷ್ಮ ಡೇಟಾವನ್ನು ಇದ್ದಕ್ಕಿದ್ದಂತೆ ಕಂಡುಕೊಂಡಿರುವುದಾಗಿ ವರದಿ ಮಾಡಿದ್ದಾರೆ. 


ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಐಸಿಐಸಿಐ ಬ್ಯಾಂಕ್ ವಕ್ತಾರರು, "ಕಳೆದ ಕೆಲವು ದಿನಗಳಲ್ಲಿ ನೀಡಲಾದ ಸುಮಾರು 17,000 ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನಮ್ಮ ಡಿಜಿಟಲ್ ಚಾನೆಲ್‌ಗಳಲ್ಲಿ ತಪ್ಪು ಬಳಕೆದಾರರಿಗೆ ಮ್ಯಾಪ್ ಮಾಡಲಾಗಿದೆ" ಎಂದು ತಮ್ಮ ಗಮನಕ್ಕೆ ಬಂದಿದೆ. ಆದಾಗ್ಯೂ, ಈ ಸೆಟ್‌ನಿಂದ ಯಾವುದೇ ಕಾರ್ಡ್ ದುರುಪಯೋಗಪಡಿಸಿಕೊಂಡ ಪ್ರಕರಣಗಳು ನಮ್ಮ ಅರಿವಿಗೆ ಬಂದಿಲ್ಲ.ಆದರೆ ಯಾವುದೇ ಆರ್ಥಿಕ ನಷ್ಟ ಉಂಟಾದರೆ ಬ್ಯಾಂಕ್ ಗ್ರಾಹಕರಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡುತ್ತದೆ ಎಂದಿದ್ದಾರೆ. 


ಇದನ್ನೂ ಓದಿ- Car Insurance Tips: ರಿಯಾಯಿತಿ ಹೆಸರಿನಲ್ಲಿ ಮೋಸ ಹೋಗದಿರಿ, ಕಾರ್ ವಿಮೆ ಕೊಳ್ಳುವಾಗ ನೆನಪಿರಲಿ ಈ ವಿಷಯ


ಏನಿದು ಪ್ರಕರಣ? 
ವಾಸ್ತವವಾಗಿ, ಐಸಿಐಸಿಐ ಬ್ಯಾಂಕ್‌ನ ಹೊಸ ಗ್ರಾಹಕರ ಕ್ರೆಡಿಟ್ ಕಾರ್ಡ್ (Credit Card) ಸಂಖ್ಯೆಗಳನ್ನು ಕೆಲವು ಹಳೆಯ ಗ್ರಾಹಕರ ಕಾರ್ಡ್‌ಗಳೊಂದಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ದೋಷದಿಂದಾಗಿ, ಬ್ಯಾಂಕ್‌ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹಳೆಯ ಗ್ರಾಹಕರನ್ನು ಆಯ್ಕೆ ಮಾಡಲು ಹೊಸ ಕಾರ್ಡ್‌ದಾರರ ಸಂಪೂರ್ಣ ವಿವರಗಳು ಕಾಣಿಸಿಕೊಳ್ಳಲಾರಂಭಿಸಿದವು. ಬುಧವಾರ (ಏಪ್ರಿಲ್ 24) ಸಂಜೆಯಿಂದಲೇ ಬ್ಯಾಂಕ್‌ನ ಈ ತಪ್ಪಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಆದರೀಗ, ಬ್ಯಾಂಕ್ ಈ ತಪ್ಪನ್ನು ಸರಿಪಡಿಸಿದ್ದು ತಪ್ಪಾದ 'ಮ್ಯಾಪಿಂಗ್' ಕಾರಣದಿಂದಾಗಿ ಬ್ಯಾಂಕಿನ ಹಳೆಯ ಬಳಕೆದಾರರು ಹೊಸ ಕ್ರೆಡಿಟ್ ಕಾರ್ಡ್ ಗ್ರಾಹಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡಲು ಸಾಧ್ಯವಾಯಿತು ಎನ್ನಲಾಗಿದೆ. 


ಐಸಿಐಸಿಐ ಬ್ಯಾಂಕ್ ವಕ್ತಾರರು ನೀಡಿರುವ ಮಾಹಿತಿಯ ಪ್ರಕಾರ,  ಈ ಸಮಸ್ಯೆಯಿಂದ ಪ್ರಭಾವಿತವಾಗಿರುವ ಕ್ರೆಡಿಟ್‌ಗಳು ಅದರ ಒಟ್ಟು ಕಾರ್ಡ್ ಪೋರ್ಟ್‌ಫೋಲಿಯೊದಲ್ಲಿ ಕೇವಲ 0.1 ಪ್ರತಿಶತದಷ್ಟು ಮಾತ್ರ. ಈ ಎಲ್ಲಾ ಕಾರ್ಡ್ ಗಳನ್ನು ಬ್ಲಾಕ್ ಮಾಡಲಾಗಿದ್ದು, ಗ್ರಾಹಕರಿಗೆ ಹೊಸ ಕಾರ್ಡ್ ನೀಡಲಾಗುವುದು  ಎಂದು ತಿಳಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.Te