Pradhan Mantri Garib Kalyan Anna Yojana update: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳಿಗೊಂದು ಶಾಕಿಂಗ್ ಸುದ್ದಿಯಿದೆ.  ಈ ಯೋಜನೆಯನ್ನು ಸರ್ಕಾರ ನಿಲ್ಲಿಸಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಹಣಕಾಸು ಇಲಾಖೆಯು  ಸೂಚನೆ ನೀಡಿದೆ ಎನ್ನಲಾಗಿದೆ. ಸರ್ಕಾರ ಈಗ ಈ ಯೋಜನೆಯನ್ನು ಸ್ಥಗಿತಗೊಳಿಸಲು 
ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಕರೋನಾ ಅವಧಿಯಲ್ಲಿ, ದೇಶದ ಬಡ ಕುಟುಂಬಗಳ ಆದಾಯದ ಮೂಲವೇ ನಿಂತು ಹೋಗಿತ್ತು. ಆ ಹಿನ್ನೆಲೆಯಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಆರಂಭಿಸಿತ್ತು. ಆದರೆ ಇದೀಗ ಸೆಪ್ಟೆಂಬರ್ ನಂತರ ಈ ಯೋಜನೆಯನ್ನು ಸ್ಥಗಿತ ಗೊಳಿಸಬಹುದು ಎನ್ನಲಾಗಿದೆ. ಈ ಯೋಜನೆಯನ್ನು ಸೆಪ್ಟೆಂಬರ್ ನಂತರ ವಿಸ್ತರಿಸಬಾರದು ಎಂದು ಹಣಕಾಸು ಸಚಿವಾಲಯ ಸರ್ಕಾರಕ್ಕೆ  ಸಲಹೆ ನೀಡಿದೆ ಎನ್ನಲಾಗಿದೆ. 


ಇದನ್ನೂ ಓದಿ : Gold Price Today : ಅಗ್ಗವಾಯಿತು ಚಿನ್ನ, ಬೆಳ್ಳಿ ದರದಲ್ಲೂ ಭಾರೀ ಇಳಿಕೆ


ಹಣಕಾಸು ಸಚಿವಾಲಯದ ಪ್ರಕಾರ, 'ಈ ಯೋಜನೆಯು ದೇಶದ ಮೇಲೆ ಆರ್ಥಿಕ ಹೊರೆಯನ್ನು ತುಂಬಾ ಹೆಚ್ಚಿಸುತ್ತಿದೆ. ಇದು ದೇಶದ ಆರ್ಥಿಕ ಆರೋಗ್ಯಕ್ಕೂ ಒಳ್ಳೆಯದಲ್ಲ. ಕಳೆದ ತಿಂಗಳು ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿದ್ದರಿಂದ ಆದಾಯದ ಮೇಲೆ ಸುಮಾರು 1 ಸಾವಿರ ಕೋಟಿ ಹೆಚ್ಚುವರಿ ಹೊರೆ ಬಿದ್ದಿದೆ.  ಮತ್ತಷ್ಟು ಪರಿಹಾರ ನೀಡಿದರೆ ಆರ್ಥಿಕ ಹೊರೆ  ಇನ್ನಷ್ಟು ಹೆಚ್ಚಲಿದೆ. ಈಗ ಸಾಂಕ್ರಾಮಿಕ ರೋಗದ ಪರಿಣಾಮ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಉಚಿತ ಪಡಿತರ ಯೋಜನೆಯನ್ನು ನಿಲ್ಲಿಸಬಹುದು ಎಂದು ಸೂಚಿಸಿದೆ.


ಹೆಚ್ಚುತ್ತಿದೆ  ಸರ್ಕಾರದ ಹೊರೆ :
ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಕೊರೊನಾ ಮಹಾಮಾರಿಯಿಂದ ಆಹಾರ ಸಬ್ಸಿಡಿಗೆ ಸರ್ಕಾರ ಸಾಕಷ್ಟು ಖರ್ಚು ಮಾಡಿದೆ. ಇದರ ಅಡಿಯಲ್ಲಿ ದೇಶದ ಸುಮಾರು 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ನೀಡಲಾಗುತ್ತಿದೆ. ಈ ಯೋಜನೆಯಿಂದ ಜನರಿಗೆ ಪರಿಹಾರ ಸಿಕ್ಕಿದ್ದರೂ ಸರಕಾರಕ್ಕೆ ಹೊರೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಿದರೆ ಆಹಾರ ಸಬ್ಸಿಡಿ ಬಿಲ್ 80 ಸಾವಿರ ಕೋಟಿ ರೂ.ಗೆ ಏರಿಕೆಯಾಗಲಿದ್ದು, ಸುಮಾರು 3.7 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಈ ಖರ್ಚು ಸರ್ಕಾರವನ್ನು ದೊಡ್ಡ ಇಕ್ಕಟ್ಟಿಗೆ ಸಿಲುಕಿಸಬಹುದು.


ಇದನ್ನೂ ಓದಿ : Vegetable Price: ಮತ್ತೆ ಈರುಳ್ಳಿ ಬೆಲೆ ಏರಿಕೆ? ಹೇಗಿದೆ ಗೊತ್ತಾ ಇಂದಿನ ತರಕಾರಿ ಬೆಲೆ


ಈ ಯೋಜನೆಯನ್ನು ಸೆಪ್ಟೆಂಬರ್ 2022 ರವರೆಗೆ ವಿಸ್ತರಿಸುವುದಾಗಿ ಮಾರ್ಚ್ ನಲ್ಲಿ ಸಕ್ರಾರ ಘೋಷಿಸಿತ್ತು.  ಅಲ್ಲದೆ, ಬಜೆಟ್‌ನಲ್ಲಿ ಆಹಾರ ಸಬ್ಸಿಡಿಗಾಗಿ 2.07 ಲಕ್ಷ ಕೋಟಿ ರೂ.  ಮೀಸಲಿಟ್ಟಿತ್ತು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.