SBI ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಈ ಡೆಬಿಟ್ ಕಾರ್ಡ್‌ಗಳ ಮೇಲಿನ ಶುಲ್ಕ ಹೆಚ್ಚಳ
Debit Cards Charges Hike: ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಲವು ಡೆಬಿಟ್ ಕಾರ್ಡ್‌ಗಳ ಮೇಲಿನ ಶೂಲವನ್ನು ಹೆಚ್ಚಿಸಿದೆ.
SBI Debit Card Charges Hike: ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದ ಕೋಟ್ಯಾಂತರ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ವಾಸ್ತವವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲವು ಡೆಬಿಟ್ ಕಾರ್ಡ್‌ಗಳ ನಿರ್ವಹಣೆ ಶುಲ್ಕವನ್ನು ಹೆಚ್ಚಿಸಿದ್ದು, ಈ ಹೊಸ ಶುಲ್ಕಗಳು ಏಪ್ರಿಲ್‌ನಿಂದ ಅನ್ವಯಿಸಲಿವೆ.
ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಮತ್ತು ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳು, ಯುವ, ಗೋಲ್ಡ್, ಕಾಂಬೊ ಮತ್ತು ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣೆ ಶುಲ್ಕವನ್ನು ಹೆಚ್ಚಿಸಿದೆ. ಏಪ್ರಿಲ್ 1, 2024 ರಿಂದ, ಈ ಡೆಬಿಟ್ ಕಾರ್ಡ್‌ಗಳ ನಿರ್ವಹಣೆಗಾಗಿ 75 ರೂ.ಗಳನ್ನು (ಜಿಎಸ್‌ಟಿ ಸೇರಿಸದೆಯೇ) ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ- Railway Facts: ರೈಲ್ವೆ ನಿಲ್ದಾಣದಲ್ಲಿ ಬರೆಯಲಾಗುವ ಜಂಕ್ಷನ್, ಟರ್ಮಿನಲ್, ಸೆಂಟ್ರಲ್ ಸ್ಟೇಷನ್‌ಗಳ ಅರ್ಥವೇನು?
ವಾಸ್ತವವಾಗಿ, ಬ್ಯಾಂಕ್‌ಗಳು ಗ್ರಾಹಕರು ಒದಗಿಸುವ ಪ್ರತಿಯೊಂದು ಸೇವೆಗೆ ಶುಲ್ಕ ವಿಧಿಸುತ್ತವೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಹಲವು ರೀತಿಯ ಡೆಬಿಟ್ ಕಾರ್ಡ್‌ಗಳನ್ನು (Debit Card) ನೀಡುತ್ತದೆ. ಅಂತೆಯೇ, ಗ್ರಾಹಕರು ಯಾವ ಡೆಬಿಟ್ ಕಾರ್ಡ್‌ಗಳನ್ನು ಹೊಂದಿರುತ್ತಾರೋ ಅವುಗಳ ಆಧಾರದ ಮೇಲೆ ನಿರ್ವಹಣಾ ಶುಲ್ಕಗಳು ಕೂಡ ಬದಲಾಗುತ್ತವೆ.
ಪ್ರಸ್ತುತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ-ಎಸ್‌ಬಿಐ ತನ್ನ ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳ ಮೇಲೆ 125 ರೂ.+ ಜಿಎಸ್‌ಟಿ ಶುಲ್ಕವನ್ನು ವಿಧಿಸುತ್ತಿದೆ. ಆದರೆ, ಈ ಶುಲ್ಕ ಏಪ್ರಿಲ್ 1 ರಿಂದ ಬದಲಾಗಲಿದ್ದು ಇದು 200 ರೂ.+ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಅಂತೆಯೇ, ಇತರ ಕಾರ್ಡ್‌ಗಳ ಮೇಲೂ 75-75 ರೂಪಾಯಿ ಹೆಚ್ಚಳವಾಗಿದ್ದು, ಇದರಲ್ಲಿ ಜಿಎಸ್‌ಟಿ ಶುಲ್ಕವನ್ನು ಪ್ರತ್ಯೇಕವಾಗಿ ಸೇರಿಸಲಾಗುತ್ತದೆ.
ಇದನ್ನೂ ಓದಿ- ಹೊಸ ವೇತನ ವ್ಯವಸ್ಥೆ ಜಾರಿಗೆ ಸರ್ಕಾರ ಸಿದ್ದತೆ ! ಸರ್ಕಾರಿ ನೌಕರರಿಗೆ ನೇರ ಲಾಭ !
ಯುವ/ಗೋಲ್ಡ್/ಕಾಂಬೋ ಡೆಬಿಟ್ ಕಾರ್ಡ್/ಮೈ ಕಾರ್ಡ್ (ಇಮೇಜ್ ಕಾರ್ಡ್) ಮೇಲೆ ಗ್ರಾಹಕರು ಇದುವರೆಗೆ 175ರೂ. + ಜಿಎಸ್‌ಟಿ ಪಾವತಿಸುತ್ತಿದ್ದರು. ಆದರೆ, ಏಪ್ರಿಲ್ 01ರಿಂದ ಗ್ರಾಹಕರು 250 ರೂ. + ಜಿಎಸ್‌ಟಿ ಅನ್ನು ಪಾವತಿಸಬೇಕಾಗುತ್ತದೆ.
ಪ್ರಸ್ತುತ ಪ್ಲಾಟಿನಂ ಡೆಬಿಟ್ ಕಾರ್ಡ್‌ನ ಶುಲ್ಕವು 250 ರೂ.+ ಜಿಎಸ್‌ಟಿ ಇದ್ದು, ಏಪ್ರಿಲ್ 1 ರಿಂದ ಈ ಶುಲ್ಕವು 325 +ರೂ. ಜಿಎಸ್‌ಟಿಗೆ ಆಗಲಿದೆ. ಗ್ರಾಹಕರು ಪ್ರೈಡ್ / ಪ್ರೀಮಿಯಂ ಬಿಸಿನೆಸ್ ಡೆಬಿಟ್ ಕಾರ್ಡ್‌ನಲ್ಲಿ 350ರೂ. + ಜಿಎಸ್‌ಟಿ ಪಾವತಿಸುತ್ತಿದ್ದಾರೆ. ಏಪ್ರಿಲ್ 1 ರಿಂದ 425 ರೂ. + ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.