Visa-Mastercard ಹೊಂದಿದವರಿಗೊಂದು ಶಾಕಿಂಗ್ ಸುದ್ದಿ, ಇನ್ಮುಂದೆ ಈ ರೀತಿಯ ಪೆಮೆಂಟ್ ನೀವು ಮಾಡಲು ಸಾಧ್ಯವಿಲ್ಲ!
Paytm ಬ್ಯಾಂಕ್ ವಿರುದ್ಧ RBI ಕೈಗೊಂಡ ಕ್ರಮದ ಬಳಿಕ. ಸೆಂಟ್ರಲ್ ಬ್ಯಾಂಕ್ ನ ಈ ನಿರ್ಧಾರವು ಉದ್ಯಮದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುಟ್ಟಿದೆ. ಆದರೆ, ರಿಸರ್ವ್ ಬ್ಯಾಂಕ್ ಏಕೆ ಈ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇದುವರೆಗೂ ಬಹಿರಂಗಪಡಿಸಿಲ್ಲ. (Business News In Kannada)
Paytm ಬ್ಯಾಂಕ್ ವಿರುದ್ಧ RBI ಕೈಗೊಂಡ ಕ್ರಮದ ಬಳಿಕ ಇಂದು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಆರ್‌ಬಿಐ ವೀಸಾ ಮತ್ತು ಮಾಸ್ಟರ್‌ಕಾರ್ಡ್ ನೆಟ್‌ವರ್ಕ್‌ಗಳಿಗೆ ಸಣ್ಣ ಉದ್ಯಮಗಳು ಮಾಡಿದ ಕಾರ್ಡ್ ಆಧಾರಿತ ವಾಣಿಜ್ಯ ಪಾವತಿಗಳನ್ನು ನಿಲ್ಲಿಸುವಂತೆ ತನ್ನ ಆದೇಶದಲ್ಲಿ ಸೂಹಿಸಿದೆ. ಎಕನಾಮಿಕ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಇತರ ವ್ಯಾಪಾರ ಮಳಿಗೆಗಳಲ್ಲಿ ವಹಿವಾಟುಗಳನ್ನು ಸಹ ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ ಎಂದು ಹೇಳಲಾಗಿದೆ. ಆದಾಗ್ಯೂ, ಸೆಂಟ್ರಲ್ ಬ್ಯಾಂಕ್ ಈ ಕ್ರಮವನ್ನು ಏಕೆ ತೆಗೆದುಕೊಂಡಿತು ಎಂಬುದರ ಕುರಿತು ಸರಿಯಾದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. (Business News In Kannada)
ವಾಣಿಜ್ಯ ಕಾರ್ಡ್ ಮೂಲಕ ವ್ಯಾಪಾರ ಪಾವತಿಯನ್ನು ನಿಲ್ಲಿಸಲು ಆದೇಶ
KYC ಅನ್ನು ಅನುಸರಿಸದ ಸಣ್ಣ ಉದ್ಯಮಿಗಳು ಮಾಡುವ ವಹಿವಾಟಿನ ಬಗ್ಗೆ ನಿಯಂತ್ರಕ ತನ್ನ ಕಳವಳ ವ್ಯಕ್ತಪಡಿಸಿದೆ. ಇದೇ RBI ಈ ಕ್ರಮವನ್ನು ತೆಗೆದುಕೊಳ್ಳುವ ಹಿಂದಿನ ಕಾರಣ ಎಂದು ಹೇಳಲಾಗುತ್ತಿದೆ. ಫಿನ್‌ಟೆಕ್ ಸ್ಟಾರ್ಟ್‌ಅಪ್‌ನ ಓರ್ವ ಸಂಸ್ಥಾಪಕರು, ಅನಾಮಧೇಯತೆಯ ಷರತ್ತಿನ ಮೇಲೆ, ಈ ವಲಯದಲ್ಲಿ ಕೆಲಸ ಮಾಡುವ ಫಿನ್‌ಟೆಕ್‌ಗಳಿಗೆ ಮುಂದಿನ ಆದೇಶದವರೆಗೆ ವಾಣಿಜ್ಯ ಕಾರ್ಡ್‌ಗಳ ಮೂಲಕ ವ್ಯವಹಾರ ಪಾವತಿಗಳನ್ನು ನಿಲ್ಲಿಸಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಈ ಹಂತದ ನಂತರ, ಬಾಡಿಗೆ ಮತ್ತು ಬೋಧನಾ ಪಾವತಿಯ ಮೇಲೆ ಪರಿಣಾಮ ಉಂಟಾಗಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Provident Fund ಬಡ್ಡಿ ದರ ಹೆಚ್ಚಳದ ಲಾಭ ಪಡೆಯಬೇಕೇ? ಈ ಒಂದು ಕೆಲಸ ಮಾಡಿ ದೊಡ್ಡ ಹಣ ನಿಮ್ಮ ಕೈಸೇರುತ್ತೆ!
ಶುಲ್ಕ ಪಾವತಿಸುವ ಸೌಲಭ್ಯವೂ ಇದೆ
ಈ ಆದೇಶದ ಬಳಿಕ ಕೆಲ ಫಿನ್‌ಟೆಕ್ ಸಂಸ್ಥೆಗಳು ಅಂತಹ ವಹಿವಾಟುಗಳನ್ನು ಅಮಾನತುಗೊಳಿಸುವ ಬಗ್ಗೆ ಯೋಚಿಸಬೇಕಾಗಲಿದೆ. ವಾಸ್ತವದಲ್ಲಿ, Cred, Paytm ಮತ್ತು NoBroker ನಂತಹ ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಕಾರ್ಡ್ ಮೂಲಕ ಶುಲ್ಕವನ್ನು ಪಾವತಿಸುವ ಸೌಲಭ್ಯವನ್ನು ಒದಗಿಸುತ್ತವೆ. ಸಾಮಾನ್ಯವಾಗಿ ವ್ಯವಹಾರಗಳು ನೆಟ್ ಬ್ಯಾಂಕಿಂಗ್ ಅಥವಾ ಆರ್‌ಟಿಜಿಎಸ್‌ನಂತಹ ಆರ್‌ಬಿಐನಿಂದ ಬೃಹತ್ ವರ್ಗಾವಣೆಯ ಮೂಲಕ ಪಾವತಿಗಳನ್ನು ಮಾಡುತ್ತವೆ.
ಕಾರ್ಡ್‌ಗಳ ಮೂಲಕ ವ್ಯಾಪಾರ ಮಾರಾಟಗಾರರಿಗೆ ಪಾವತಿ ಮಾಡುವ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದ ಫಿನ್‌ಟೆಕ್ ಮತ್ತು ಕಾರ್ಡ್ ನೆಟ್‌ವರ್ಕ್‌ಗಳನ್ನು ಹೊರತುಪಡಿಸಿ. ಈ ವಲಯದಲ್ಲಿ ಕಾರ್ಡ್ ಪಾವತಿಗಳನ್ನು ಸಾಮಾನ್ಯವಾಗಿ ಬಳಸಲಾಗುವುದಿಲ್ಲ. ಎಂಕಾಶ್ ಮತ್ತು ಪೇಮೇಟ್‌ನಂತಹ ಫಿನ್‌ಟೆಕ್ ಮಾರಾಟಗಾರರು ಮತ್ತು ಪೂರೈಕೆದಾರರು ಪಾವತಿಗಳಂತಹ ವ್ಯವಹಾರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಾವತಿ ಸೌಲಭ್ಯಗಳನ್ನು ಒದಗಿಸುತ್ತವೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.