ಆದಾಯ ತೆರಿಗೆ ಉಳಿಸಲು ಇಲ್ಲಿದೆ ಸರಳ ಉಪಾಯ.! ವಿತ್ತ ಸಚಿವರು ಹೇಳಿದ್ದೇನು ?
ಫೆಬ್ರವರಿ 1 ರಂದು ಹಣಕಾಸು ಸಚಿವರು ಬಜೆಟ್ ಮಂಡಿಸಲಿದ್ದಾರೆ. ಉದ್ಯೋಗಿಗಳಿಂದ ಹಿಡಿದು ರೈತರವರೆಗೆ ಎಲ್ಲರ ದೃಷ್ಟಿ ಇದೀಗ ಬಜೆಟ್ ಮೇಲೆ ನೆಟ್ಟಿದೆ.
ಬೆಂಗಳೂರು : 2023-24ರ ಹಣಕಾಸು ವರ್ಷದ ಬಜೆಟ್ ಮಂಡನೆಗೆ 20 ದಿನಗಳು ಉಳಿದಿವೆ. ಫೆಬ್ರವರಿ 1 ರಂದು ಹಣಕಾಸು ಸಚಿವರು ಬಜೆಟ್ ಮಂಡಿಸಲಿದ್ದಾರೆ. ಉದ್ಯೋಗಿಗಳಿಂದ ಹಿಡಿದು ರೈತರವರೆಗೆ ಎಲ್ಲರ ದೃಷ್ಟಿ ಇದೀಗ ಬಜೆಟ್ ಮೇಲೆ ನೆಟ್ಟಿದೆ. ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ ಸಲ್ಲಿಸುತ್ತಿರುವ ಕೊನೆಯ ಬಜೆಟ್ ಇದಾಗಿದೆ. ಇಡೀ ಕಾರಣಕ್ಕಾಗಿ ಈ ಬಜೆಟ್ ಮೇಲೆ ಜನಸಾಮಾನ್ಯರ ನಿರೀಕ್ಷೆ ಕೂಡಾ ಹೆಚ್ಚಿದೆ.
ಕಡಿಮೆ ಆದಾಯವಿದ್ದರೆ ಕಡಿಮೆ ತೆರಿಗೆ :
ಈ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದರೊಂದಿಗೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಕೂಡಾ ಹೆಚ್ಚಿಸುವ ನಿರೀಕ್ಷೆಯಿದೆ. ಪ್ರಸ್ತುತ, ಆದಾಯ ತೆರಿಗೆ ವಿನಾಯಿತಿಗೆ ಎರಡು ನಿಯಮಗಳಿವೆ. ಮೊದಲನೆಯದ್ದು ಹೊಸ ತೆರಿಗೆ ಪದ್ಧತಿ ಮತ್ತು ಎರಡನೇ ಹಳೆಯ ತೆರಿಗೆ ಪದ್ಧತಿ. ಏಳು ತೆರಿಗೆ ಸ್ಲ್ಯಾಬ್‌ಗಳನ್ನು ಹೊಂದಿರುವ ಆಪ್ಶನಲ್ ಆದಾಯ ತೆರಿಗೆ ವ್ಯವಸ್ಥೆಯನ್ನು ತರಲಾಗಿದ್ದು, ಕಡಿಮೆ ಆದಾಯ ಗಳಿಸುವವರು ಇಲ್ಲಿ ಕನಿಷ್ಠ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಆದಾಯ ತೆರಿಗೆ ಪಾವತಿ ಅನಿವಾರ್ಯವಲ್ಲವೇ ? ಇಲ್ಲಿದೆ ಸಂಪೂರ್ಣ ಮಾಹಿತಿ
ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ವಿನಾಯಿತಿ ಇಲ್ಲ :
ಹಳೆಯ ತೆರಿಗೆ ಪದ್ಧತಿಯಲ್ಲಿ, ವಿವಿಧ ರೀತಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಲ್ಲಿ ತೆರಿಗೆ ಪಾವತಿದಾರರು 7-10 ರೀತಿಯಲ್ಲಿ ವಿನಾಯಿತಿ ಪಡೆಯಬಹುದು. ಇದರಲ್ಲಿ ಶೇ.10, 20 ಮತ್ತು 30ರ ದರದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ಹಳೆ ತೆರಿಗೆ ಪದ್ಧತಿಯ ಜೊತೆಗೆ ಹೊಸ ತೆರಿಗೆ ಪದ್ಧತಿಯನ್ನು ಕೂಡಾ ಸರ್ಕಾರ ಜಾರಿಗೆ ತಂದಿದ್ದು, ಇದರಲ್ಲಿ ತೆರಿಗೆಯಿಂದ ವಿನಾಯಿತಿ ಸಿಗುವುದಿಲ್ಲ. ಆದರೆ ಇದರಲ್ಲಿ ತೆರಿಗೆ ಪ್ರಮಾಣ ಕಡಿಮೆ ಇರಲಿದೆ.
ಹಳೆಯ ತೆರಿಗೆ ಪದ್ಧತಿಯಲ್ಲಿ 4 ಸ್ಲ್ಯಾಬ್‌ಗಳು :
ಹೊಸ ಪದ್ಧತಿಯಲ್ಲಿ 7 ತೆರಿಗೆ ಸ್ಲ್ಯಾಬ್‌ಗಳಿದ್ದರೆ, ಹಳೆಯ ತೆರಿಗೆ ಪದ್ಧತಿಯಲ್ಲಿ 4 ಸ್ಲ್ಯಾಬ್‌ಗಳಿವೆ. ಕಡಿಮೆ ಆದಾಯದ ವರ್ಗದವರಿಗೆ ಹಳೆಯ ತೆರಿಗೆ ಪದ್ಧತಿ ಲಾಭದಾಯಕವಾಗಿರಲಿದೆ. ಇದರಲ್ಲಿ ಮನೆ ಬಾಡಿಗೆ ಭತ್ಯೆ, ಗೃಹ ಸಾಲದ ಬಡ್ಡಿ, 80ಸಿ ಮತ್ತು ವೈದ್ಯಕೀಯ ವಿಮೆ ಸೇರಿದಂತೆ 7 ರೀತಿಯಲ್ಲಿ ತೆರಿಗೆ ಉಳಿಸುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Bank Rules: ಹೊಸ ವರ್ಷದಲ್ಲಿ ಗ್ರಾಹಕರಿಗೆ ಶಾಕ್ ನೀಡಿದ ಸರ್ಕಾರಿ ಬ್ಯಾಂಕ್
ಹಳೆಯ ತೆರಿಗೆ ಪದ್ಧತಿ :
0 ಯಿಂದ – 2,50,000 ರೂವರೆಗೆ ಶೂನ್ಯ ತೆರಿಗೆ
2.5 ಲಕ್ಷದಿಂದ 5 ಲಕ್ಷದವರೆಗೆ – 5 ಶೇಕಡ ತೆರಿಗೆ
5 ಲಕ್ಷದಿಂದ 10 ಲಕ್ಷದವರೆಗೆ - 20 ಶೇ ತೆರಿಗೆ
10 ಲಕ್ಷದಿಂದ 15 ಲಕ್ಷದವರೆಗೆ –30 ಶೇ . ತೆರಿಗೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.