Petrol Diesel Price: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಜನರಿಗೆ ಶೀಘ್ರದಲ್ಲೇ ಪರಿಹಾರ ಸಿಗುವ ನಿರೀಕ್ಷೆ ಇದೆ. ಕಳೆದ ಹಲವು ತಿಂಗಳುಗಳಿಂದ ಇಂಧನ ತೈಲ ಬೆಲೆ ಸ್ಥಿರವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಆದರೆ ಕಂಪನಿಗಳ  ಪ್ರಕಾರ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿವೆ, ಇದರಿಂದ ತೈಲ ಕಂಪನಿಗಳು ಸಾಕಷ್ಟು ಲಾಭವನ್ನು ಪಡೆದುಕೊಂಡಿವೆ, ಇಂತಹ ಪರಿಸ್ಥಿತಿಯಲ್ಲಿ OMC ಗಳು ಅದರ ಲಾಭವನ್ನು ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ವರ್ಗಾಯಿಸಬಹುದು ಎಂದು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ICICI ಸೆಕ್ಯುರಿಟೀಸ್ ಆಪರೇಶನಲ್ ಇನ್ಕಮ್ ಅನ್ನು Q-o-Q ನಲ್ಲಿ ಶೇ.77 ರಷ್ಟು ವೃದ್ಧಿಯನ್ನು ಅಂದಾಜಿಸಿದೆ
ಐಸಿಐಸಿಐ ಸೆಕ್ಯುರಿಟೀಸ್ ತನ್ನ ಇತ್ತೀಚಿನ ವರದಿಯಲ್ಲಿ ಅಂತರಾಷ್ಟ್ರೀಯ ಕಚ್ಚಾ ಮಾರುಕಟ್ಟೆಯಲ್ಲಿನ ಚಂಚಲತೆಯಿಂದಾಗಿ, ತೈಲ ಮಾರುಕಟ್ಟೆ ಕಂಪನಿಗಳು ನಾಲ್ಕನೇ ತ್ರೈಮಾಸಿಕದಲ್ಲಿ ಲಾಭವನ್ನು ಕಾಣಬಹುದು ಎಂದು ಸೂಚಿಸಿದೆ. ಜೂನ್ 2022 ತ್ರೈಮಾಸಿಕದಲ್ಲಿ ದಾಖಲಾದ ದಾಖಲೆ ಮಟ್ಟದ ಕುಸಿತ, ಕಳೆದ ಆರು ತಿಂಗಳಲ್ಲಿ ಸುಧಾರಿಸಿದೆ. ಜೂನ್ ತ್ರೈಮಾಸಿಕದಲ್ಲಿ  ಲೀಟರ್‌ ಪೆಟ್ರೋಲ್ ಗೆ 17.4 ರೂ ಮತ್ತು 27.7 ರೂ ನಷ್ಟವಾಗಿದೆ. ಆದರೆ ಕಳೆದ ಐದು ತ್ರೈಮಾಸಿಕಗಳ ನಂತರ, ಈ ನಾಲ್ಕನೇ ತ್ರೈಮಾಸಿಕದಲ್ಲಿ ಡೀಸೆಲ್ ಸಕಾರಾತ್ಮಕವಾಗಬಹುದು. ಇದಲ್ಲದೆ, ವಿಂಡ್‌ಫಾಲ್ ತೆರಿಗೆ ಮತ್ತು ಅಂದಾಜು ದಾಸ್ತಾನು ನಷ್ಟವನ್ನು ಪರಿಗಣಿಸಿ, ನಾಲ್ಕನೇ ತ್ರೈಮಾಸಿಕದಲ್ಲಿ ಮೂರು ತೈಲ ಮಾರುಕಟ್ಟೆ ಕಂಪನಿಗಳು ತ್ರೈಮಾಸಿಕ ಶೇ. 77 ರಷ್ಟು ಪ್ರತಿ ತ್ರಿಮಾಸಿಕ ಬೆಳವಣಿಗೆಯನ್ನು ತೋರಿಸಬಹುದು ಎಂದು ತೋರುತ್ತಿದೆ. ನಿವ್ವಳ ಲಾಭವು 3.3 ಪಟ್ಟು ಹೆಚ್ಚಾಗಬಹುದು.


ಮಾರ್ಚ್‌ನಲ್ಲಿ ಇಂಧನ ಬೇಡಿಕೆ ಹೆಚ್ಚಾಗಿದೆ
ಮಾರ್ಚ್‌ನಲ್ಲಿ ದೇಶದಲ್ಲಿ ಇಂಧನ ಬೇಡಿಕೆ ಹೆಚ್ಚಾಗಿದೆ. ಈ ಹಿಂದೆ ಉದ್ಯಮದ ಆರಂಭಿಕ ಅಂಕಿಅಂಶಗಳಿಂದ ಈ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಅಂಕಿಅಂಶಗಳ ಪ್ರಕಾರ, ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡ ಕಾರಣ ಮಾರ್ಚ್ ಮೊದಲ ಹದಿನೈದು ದಿನಗಳಲ್ಲಿ ಇಂಧನ ಬೇಡಿಕೆಯಲ್ಲಿನ ಮಂದಗತಿಯನ್ನು ಸರಿದೂಗಿಸುತ್ತದೆ. ಕೃಷಿ ವಲಯದಿಂದ ಬಲವಾದ ಬೇಡಿಕೆಯೊಂದಿಗೆ ಜಡ ಚಳಿಗಾಲದ ನಂತರ ಸಾರಿಗೆಯಲ್ಲಿ ಹೆಚ್ಚಳದಿಂದ ಫೆಬ್ರವರಿಯಲ್ಲಿ ಇಂಧನ ಮಾರಾಟವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಆದರೆ ಮಾರ್ಚ್ ಮೊದಲ ಹದಿನೈದು ದಿನಗಳಲ್ಲಿ  ಇದು ನಿಧಾನಗತಿಯನ್ನು ಕಂಡಿತು. ಆದಾಗ್ಯೂ, ತಿಂಗಳ ಎರಡನೇ ಹದಿನೈದು ದಿನಗಳಲ್ಲಿ ಇಂಧನ ಬೇಡಿಕೆ ಹೆಚ್ಚಾಯಿತು ಮತ್ತು ಫೆಬ್ರವರಿಯ ಹೆಚ್ಚಿನ ಬೇಸ್ ಹೊರತಾಗಿಯೂ, ಮಾರಾಟವು ಮಾಸಿಕ ಆಧಾರದ ಮೇಲೆ ಬೆಳವಣಿಗೆಯನ್ನು ದಾಖಲಿಸಿದೆ.


ಇದನ್ನೂ  ಓದಿ-PNG-CNG Price Drop: ಹಣದುಬ್ಬರದ ಹೊಡೆತಕ್ಕೆ ತತ್ತರಿಸಿದ ದೇಶದ ನಾಗರಿಕರಿಗೊಂದು ಭಾರಿ ನೆಮ್ಮದಿಯ ಸುದ್ದಿ


ಪೆಟ್ರೋಲ್, ಡೀಸೆಲ್ ಮಾರಾಟ ಹೇಗಿತ್ತು
ಅಂಕಿಅಂಶಗಳ ಪ್ರಕಾರ, ಕಳೆದ ತಿಂಗಳು ಪೆಟ್ರೋಲ್ ಮಾರಾಟವು 2.65 ಮಿಲಿಯನ್ ಟನ್‌ಗಳಿಗೆ ಶೇ. 5.1 ರಷ್ಟು ಹೆಚ್ಚಾಗಿದೆ. ಮಾಸಿಕ ಆಧಾರದ ಮೇಲೆ ಮಾರಾಟವು ಶೇಕಡಾ 3.4 ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಅತಿ ಹೆಚ್ಚು ಬಳಕೆಯಾಗುವ ಇಂಧನವಾಗಿರುವ ಡೀಸೆಲ್‌ನ ಬೇಡಿಕೆಯು ಮಾರ್ಚ್‌ನಲ್ಲಿ 68.1 ಲಕ್ಷ ಟನ್‌ಗಳಿಗೆ ಶೇಕಡಾ 2.1 ರಷ್ಟು ಏರಿಕೆಯಾಗಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 66.7 ಲಕ್ಷ ಟನ್ ಡೀಸೆಲ್ ಮಾರಾಟವಾಗಿತ್ತು. ಮಾಸಿಕ ಆಧಾರದ ಮೇಲೆ, ಬೇಡಿಕೆಯು ಶೇಕಡಾ 4.5 ರಷ್ಟು ಹೆಚ್ಚಾಗಿದೆ.


ಇದನ್ನೂ ಓದಿ-Big Update: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!


ಮೊದಲ ಹದಿನೈದು ದಿನಗಳಲ್ಲಿ, ವಾರ್ಷಿಕ ಆಧಾರದ ಮೇಲೆ ಪೆಟ್ರೋಲ್ ಮಾರಾಟದಲ್ಲಿ ಶೇಕಡಾ 1.4 ಮತ್ತು ಡೀಸೆಲ್ ಮಾರಾಟದಲ್ಲಿ ಶೇಕಡಾ 10.2 ರಷ್ಟು ಇಳಿಕೆಯಾಗಿದೆ. ಮಾರ್ಚ್ 2021 ಕ್ಕಿಂತ ಪೆಟ್ರೋಲ್ ಬಳಕೆ 16.2 ಶೇಕಡಾ ಹೆಚ್ಚಾಗಿದೆ ಮತ್ತು ಮಾರ್ಚ್ 2020 ಕ್ಕಿಂತ ಸುಮಾರು 43 ಶೇಕಡಾ ಹೆಚ್ಚಾಗಿದೆ. ಈ ಅವಧಿಯಲ್ಲಿ, ಡೀಸೆಲ್ ಬಳಕೆಯು ಮಾರ್ಚ್ 2021 ಕ್ಕಿಂತ ಶೇ. 13.5 ಮತ್ತು ಮಾರ್ಚ್ 2020 ಕ್ಕಿಂತ ಶೇ.41.8 ರಷ್ಟು ಹೆಚ್ಚಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.