PNG-CNG Price Drop: ಹಣದುಬ್ಬರದಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಬಿಗ್ ರಿಲೀಫ್ ಸಿಕ್ಕಿದೆ. ಶುಕ್ರವಾರ, GAIL ಇಂಡಿಯಾದ ಅಂಗಸಂಸ್ಥೆಯಾದ ಮಹಾನಗರ ಗ್ಯಾಸ್, ಮುಂಬೈನಲ್ಲಿ ಸಿಎನ್‌ಜಿ ಸಿಎನ್ಜಿ-ಪಿಎನ್ಜಿ ಬೆಲೆ ಇಳಿಕೆಯನ್ನು ಘೋಷಿಸಿದೆ. ಸಿಎನ್ಜಿ ಬೆಲೆಯನ್ನು ಕೆಜಿಗೆ 8 ರೂ. ಇಳಿಕೆ ಮಾಡಲಾಗಿದ್ದರೇ, ಪಿಎನ್‌ಜಿ ಬೆಲೆಯನ್ನು ರೂ 5 ಪ್ರತಿ ಎಸ್‌ಸಿಎಂ ಕಡಿತಗೊಳಿಸಲಾಗಿದೆ. ಮಹಾನಗರ ಗ್ಯಾಸ್ ತನ್ನ ಪರವಾನಗಿ ಪ್ರದೇಶದಲ್ಲಿ ಈ ಕಡಿತವನ್ನು ಮಾಡಿದೆ. ಸ್ಥಳೀಯವಾಗಿ ತಯಾರಿಸಿದ ನೈಸರ್ಗಿಕ ಅನಿಲಕ್ಕೆ ಹೊಸ ಬೆಲೆ ವ್ಯವಸ್ಥೆಯನ್ನು ಘೋಷಿಸಿದ ನಂತರ MGL ಈ ಕ್ರಮ ಕೈಗೊಂಡಿದೆ. ಸರ್ಕಾರವು ಸಿಎನ್‌ಜಿ ಮತ್ತು ಪೈಪ್ಡ್ ಅಡುಗೆ ಅನಿಲದ ಹೊಸ ಬೆಲೆಗಳನ್ನು ಶುಕ್ರವಾರ ಪ್ರಕಟಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ ಮತ್ತು ಸರ್ಕಾರದ ಈ ಘೋಷಣೆಯ ಕಂಪನಿ ಈ ಘೋಷಣೆ ಹೊರಬಂದಿದೆ. ಎಂಜಿಎಲ್ ಕೂಡ ಫೆಬ್ರವರಿಯಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 2.5 ರೂ.ಇಳಿಕೆ ಮಾಡಿತ್ತು ಇದರ ಹೊರತಾಗಿಯೂ, CNG ಯ ಬೆಲೆಗಳು ಏಪ್ರಿಲ್ 2022 ಕ್ಕಿಂತ ಸುಮಾರು ಶೇ.80 ರಷ್ಟು ಹೆಚ್ಚಾಗಿವೆ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.
ನೈಸರ್ಗಿಕ ಅನಿಲದ ಬೆಲೆ ನಿಗದಿಯಾಗುತ್ತಿದ್ದಂತೆಯೇ ಮಹಾನಗರ ಗ್ಯಾಸ್ ಲಿಮಿಟೆಡ್ ಮಹತ್ವದ ನಿರ್ಧಾರ ಕೈಗೊಂಡಿದೆ. ಎಂಜಿಎಲ್ ಸಿಎನ್‌ಜಿ ಮತ್ತು ಪಿಎನ್‌ಜಿಗೆ ಬೆಲೆ ಕಡಿತವನ್ನು ಘೋಷಿಸಿದೆ. ಮಹಾನಗರ ಗ್ಯಾಸ್ ಲಿಮಿಟೆಡ್ ಸಿಎನ್‌ಜಿ ಗ್ಯಾಸ್‌ನ ಬೆಲೆಯನ್ನು ಕೆಜಿಗೆ 8 ರೂ. ಕಡಿತಗೊಳಿಸಿ 79 ರೂ.ಗೆ ಇಳಿಸಿದೆ. ಪಿಎನ್‌ಜಿ ಗ್ಯಾಸ್‌ನ ಬೆಲೆಯನ್ನು ಪ್ರತಿ ಯೂನಿಟ್‌ಗೆ 5 ರೂ.ಕಡಿತಗೊಳಿಸಿ 49 ರೂ.ಗೆ ಇಳಿಸಲಾಗಿದೆ. ಹೊಸ ದರವು ಏಪ್ರಿಲ್ 7 ರ ಮಧ್ಯರಾತ್ರಿಯಿಂದ ಅನ್ವಯವಾಗಲಿದೆ. ಪ್ರಸ್ತುತ ಮುಂಬೈನಲ್ಲಿ ಸಿಎನ್ ಜಿ ಗ್ಯಾಸ್ ಬೆಲೆ ಕೆಜಿಗೆ 87 ರೂ.ಗಳಾಗಿದ್ದು, ಪಿಎನ್ ಜಿ ಗ್ಯಾಸ್ ಬೆಲೆ ಯೂನಿಟ್ ಗೆ 54 ರೂ. ಆಗಿದೆ.
ಹೊಸ ಬೆಲೆ ಸೂತ್ರವನ್ನು ನಿರ್ಧರಿಸಲಾಗಿದೆ
ಇತ್ತೀಚೆಗೆ, ನೈಸರ್ಗಿಕ ಅನಿಲದ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ಹೊಸ ಬೆಲೆ ಸೂತ್ರವನ್ನು ನಿರ್ಧರಿಸಿತ್ತು. ಸಾರಿಗೆ ಸೇರಿದಂತೆ ಇತರ ಕೆಲಸಗಳಲ್ಲಿ ದೇಶೀಯ ನೈಸರ್ಗಿಕ ಅನಿಲದ ಬಳಕೆಯನ್ನು ಹೆಚ್ಚಿಸಲು ಸರ್ಕಾರ ಬಯಸಿದೆ. ಇದರ ನೆರವಿನಿಂದ ಸ್ವಚ್ಛ ಮತ್ತು ಹಸಿರು ಭಾರತ ಕಾರ್ಯಕ್ರಮಕ್ಕೆ ನೆರವಾಗಲಿದೆ. ಈ ಹಿಂದೆ ಫೆಬ್ರವರಿ ತಿಂಗಳಿನಲ್ಲಿ ಮಹಾನಗರ ಗ್ಯಾಸ್ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 2.5 ರೂಪಾಯಿ ಕಡಿತಗೊಳಿಸಿತ್ತು.
ಇದನ್ನೂ ಓದಿ-Big Update: ದೇಶದ ಲಕ್ಷಾಂತರ ಪಿಂಚಣಿದಾರರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
ಮುಂಬೈನಲ್ಲಿ ಪೆಟ್ರೋಲ್ ಗಿಂತ CNG 49% ಅಗ್ಗವಾಗಿದೆ
ಪೆಟ್ರೋಲ್‌ಗೆ ಹೋಲಿಸಿದರೆ ಇದೀಗ ಸಿಎನ್‌ಜಿ ಅನಿಲವು ಶೇಕಡಾ 49 ರಷ್ಟು ಅಗ್ಗವಾಗಿದೆ ಎಂದು ಮಹಾನಗರ ಗ್ಯಾಸ್ ಹೇಳಿದೆ, ಆದರೆ ಇದು ಡೀಸೆಲ್‌ಗಿಂತ ಶೇಕಡಾ 16 ರಷ್ಟು ಇದು ಅಗ್ಗವಾಗಿದೆ. ವಾಸ್ತವದಲ್ಲಿ, ಇಂದು ಸರ್ಕಾರವು ಏಪ್ರಿಲ್ ತಿಂಗಳ ನೈಸರ್ಗಿಕ ಅನಿಲದ ಬೆಲೆಯನ್ನು ನಿಗದಿಪಡಿಸಿದೆ. ಏಪ್ರಿಲ್ 8 ರಿಂದ ಏಪ್ರಿಲ್ 30 ರವರೆಗೆ ನೈಸರ್ಗಿಕ ಅನಿಲದ ಬೆಲೆಯನ್ನು ಪ್ರತಿ ಎಂಎಂಬಿಟಿಯು (ಮಿಲಿಯನ್ ಬ್ರಿಟಿಷ್ ಥರ್ಮಲ್ ಯೂನಿಟ್) ಗೆ $7.92 ಎಂದು ನಿಗದಿಪಡಿಸಲಾಗಿದೆ. ಏಪ್ರಿಲ್ 1-7 ರ ಈ ದರವು ಪ್ರತಿ mmbtu ಗೆ $ 9.16 ಆಗಿದೆ.
ಇದನ್ನೂ ಓದಿ-CNG-PNG ಬೆಲೆ ಕುರಿತು ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
ದೆಹಲಿಯಲ್ಲಿ CNG ಗ್ಯಾಸ್ ಸುಮಾರು 6 ರೂಪಾಯಿಗಳಷ್ಟು ಅಗ್ಗವಾಗಿದೆ
ಈ ನಿರ್ಧಾರದ ನಂತರ, ದೆಹಲಿಯಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 79.56 ರೂ.ನಿಂದ 73.59 ರೂ.ಗೆ ಮತ್ತು ಪಿಎನ್‌ಜಿ ಪ್ರತಿ ಸಾವಿರ ಕ್ಯೂಬಿಕ್ ಮೀಟರ್‌ಗೆ 53.59 ರೂ.ನಿಂದ 47.59 ರೂ.ಗೆ ಇಳಿಕೆಯಾಗಲಿದೆ. ಶೀಘ್ರದಲ್ಲೇ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಅಂದರೆ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಜಿಎಲ್ ಕೂಡ ಬೆಲೆಯನ್ನು ಕಡಿತಗೊಳಿಸುವ ಸಾಧ್ಯತೆಯಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.