ನವದೆಹಲಿ: ಹಳೆಯ ಕಾರುಗಳನ್ನು ಗುತ್ತಿಗೆಗೆ ನೀಡುವ ಸ್ಟಾರ್ಟ್ಅಪ್ ಕಂಪನಿಯಾದ ಪಾಮ್‌ಪಾಮ್‌ಪಾಮ್ (PamPamPam) ಶುಕ್ರವಾರ ಇನ್ಫ್ಲೆಕ್ಷನ್ ಪಾಯಿಂಟ್ಸ್ ವೆಂಚರ್ಸ್ ಲೀಡ್ ಫಂಡಿಂಗ್ ನಲ್ಲಿ 5.5 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ. ಹೂಡಿಕೆ ಮಾಡುವ ಇತರ ಹೂಡಿಕೆದಾರರು ಲೆಟ್ಸ್ ವೆಂಚರ್ ಮತ್ತು ಅಜಿಲಿಟಿ ವೆಂಚರ್ಸ್ ಅನ್ನು ಒಳಗೊಂಡಿರುವುದಾಗಿ ಕಂಪನಿಯು ತಿಳಿಸಿದೆ.


COMMERCIAL BREAK
SCROLL TO CONTINUE READING

ಕಾರನ್ನು ಬಾಡಿಗೆಗೆ ಪಡೆಯಲು ಸಾಧ್ಯವಾಗುತ್ತದೆ:
ಕಂಪನಿಯು ಈ ಹಣವನ್ನು ವಿವಿಧ ಚಟುವಟಿಕೆಗಳಿಗೆ ಬಳಸುತ್ತದೆ. ಇವುಗಳಲ್ಲಿ ಗ್ರಾಹಕರ ಜಾಗೃತಿ, ತಂತ್ರಜ್ಞಾನ ಅಭಿವೃದ್ಧಿ, ಬ್ರಾಂಡ್ ನಿರ್ಮಾಣ ಮತ್ತು ವಿಸ್ತರಣೆ ಸೇರಿವೆ. ಪಾಮ್‌ಪಾಮ್‌ಪಾಮ್ (PamPamPam) ಸಂಸ್ಥಾಪಕ ಮತ್ತು ಸಿಇಒ ತರುಣ್ ಲಾವಾಡಿಯಾ ಮಾತನಾಡಿ, ದೇಶದಲ್ಲಿ ಕಾರನ್ನು (Smart car) ಗುತ್ತಿಗೆ ಮತ್ತು ಬಾಡಿಗೆಗೆ ನೀಡುವ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿವೆ. ಮುಂಬರುವ ಸಮಯದಲ್ಲಿ ಈ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ - Airbag mandatory: ಏಪ್ರಿಲ್ 1 ರಿಂದ ಇನ್ನೂ ಸುರಕ್ಷಿತವಾಗಲಿದೆ ನಿಮ್ಮ ಕಾರಿನ ಪ್ರಯಾಣ


ಸ್ಮಾರ್ಟ್ ಕಾರಿನ ಅನುಭವ ಲಭ್ಯವಿರುತ್ತದೆ :
ಈ ವ್ಯವಹಾರವನ್ನು (Business) ಹೊಸ ಎತ್ತರಕ್ಕೆ ಕೊಂಡೊಯ್ಯಲು ಕಂಪನಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಕಂಪನಿಯಲ್ಲಿನ ಹಣ ಹೂಡಿಕೆಯು ಉತ್ಪನ್ನ ಅಭಿವೃದ್ಧಿ, ಮಾರ್ಕೆಟಿಂಗ್ ವ್ಯವಹಾರ ಮತ್ತು ಕಂಪನಿಯನ್ನು ಬೆಳೆಸಲು ನಮಗೆ ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ. ಪಾಮ್‌ಪಾಮ್‌ಪಾಮ್ (PamPamPam) ತನ್ನ ಗ್ರಾಹಕರಿಗೆ ಸ್ಮಾರ್ಟ್ ಕಾರುಗಳ ಉತ್ತಮ ಅನುಭವವನ್ನು ನೀಡುತ್ತದೆ ಎಂದು ಲವಾಡಿಯಾ ಹೇಳಿದರು.


ಇದನ್ನೂ ಓದಿ - ಭಾರತದಲ್ಲಿ ಲಾಂಚ್ ಆಗಿದೆ C5 Aircross, ಏನಿರಲಿದೆ ವೈಶಿಷ್ಟ್ಯ ತಿಳಿಯಿರಿ


ಪಾವತಿ ಮತ್ತು ವಿಮೆ ಇಲ್ಲದೆ ಕಾರು ಲಭ್ಯವಿರುತ್ತದೆ :
ಇದರಲ್ಲಿ ಆರಂಭದಲ್ಲಿ ಯಾವುದೇ ಪಾವತಿ ತೆಗೆದುಕೊಳ್ಳಲಾಗುವುದಿಲ್ಲ, ನಿರ್ವಹಣೆ, ವಿಮಾ ಪ್ರೀಮಿಯಂ ಸಹ ತೆಗೆದುಕೊಳ್ಳಲಾಗುವುದಿಲ್ಲ. ತಿಂಗಳಿಗೆ ಹತ್ತು ಸಾವಿರ ರೂಪಾಯಿಗಳಿಂದ ಒಂದು ಲಕ್ಷ ರೂಪಾಯಿವರೆಗೆ ಪಾವತಿಸಿ ಕಾರನ್ನು ಬಳಸಬಹುದಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಕಂಪನಿಯು ತನ್ನ ಕಾರ್ಯಾಚರಣೆಯನ್ನು 15 ನಗರಗಳಿಗೆ ವಿಸ್ತರಿಸಲಿದೆ ಎಂದು ಕಂಪನಿ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.