ಪೆಟ್ರೋಲ್, ಡೀಸೆಲ್, ವಿದ್ಯುತ್ ಅಲ್ಲ, ಸೌರಶಕ್ತಿಯಿಂದ ಚಲಿಸುವ ಕಾರುಗಳು, ಇದು ಸರ್ಕಾರದ ಯೋಜನೆ

ಮೂಲಗಳ ಪ್ರಕಾರ ಸೌರ ಕಾರು ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಸರ್ಕಾರವು ಹೊಸ ನೀತಿಯನ್ನು ಸಿದ್ಧಪಡಿಸುತ್ತಿದೆ.

Last Updated : Aug 25, 2020, 03:04 PM IST
  • ಸೌರ ಕಾರು ತಯಾರಿಕೆಗೆ ಸರ್ಕಾರ ಗಮನ ಹರಿಸಲಿದೆ
  • ಆಟೋ ಕಂಪನಿಗಳಿಗೆ ಸರ್ಕಾರ ಹೊಸ ನೀತಿ ರೂಪಿಸಲಿದೆ
  • ಸೌರ ಕಾರು ತಯಾರಿಕೆಯಲ್ಲಿ ಭಾರತ ಸ್ವಾವಲಂಬಿಯಾಗಲಿದೆ
ಪೆಟ್ರೋಲ್, ಡೀಸೆಲ್, ವಿದ್ಯುತ್ ಅಲ್ಲ, ಸೌರಶಕ್ತಿಯಿಂದ ಚಲಿಸುವ ಕಾರುಗಳು, ಇದು ಸರ್ಕಾರದ ಯೋಜನೆ title=

ನವದೆಹಲಿ: ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಮೋದಿ ಸರ್ಕಾರ (Modi Government) ಸಂಪೂರ್ಣ ಕ್ರಮದಲ್ಲಿದೆ. ಸೌರ ಕಾರು ತಯಾರಿಕೆಯತ್ತ ಗಮನ ಹೆಚ್ಚಿಸಲು ಸರ್ಕಾರ ಈಗ ತಯಾರಿ ನಡೆಸುತ್ತಿದೆ. ಝೀ ಮೀಡಿಯಾಕ್ಕೆ ದೊರೆತ ವಿಶೇಷ ಸುದ್ದಿಯ ಪ್ರಕಾರ ದೇಶದಲ್ಲಿ ಸೌರ ಕಾರು ತಯಾರಕರನ್ನು ಉತ್ತೇಜಿಸಲು ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತಿಸುತ್ತಿದೆ. ಮೂಲಗಳ ಪ್ರಕಾರ ಸೌರ ಕಾರು ತಯಾರಿಕೆಯಲ್ಲಿ ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಸರ್ಕಾರವು ಹೊಸ ನೀತಿಯನ್ನು ಸಿದ್ಧಪಡಿಸುತ್ತಿದೆ. ಇದರಿಂದಾಗಿ ಆಟೋ ಕಂಪನಿಗಳು ದೇಶದಲ್ಲಿ ಸೌರ ಕಾರು ತಯಾರಿಕೆಗೆ ಆಕರ್ಷಿತವಾಗಬಹುದು. 

ಮೂಲಗಳ ಪ್ರಕಾರ ಸೌರ ಕಾರು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದೆ ಬರುವ ವಾಹನ ಕಂಪನಿಗಳಿಗೆ ಸರ್ಕಾರ ತೆರಿಗೆ ರಿಯಾಯಿತಿ, ಸಬ್ಸಿಡಿ, ಅಗ್ಗದ ಸಾಲ ಮತ್ತು ಅಗ್ಗದ ಭೂಮಿಯನ್ನು ಒದಗಿಸುವ ಬಗ್ಗೆ ಚಿಂತಿಸುತ್ತಿದೆ.

ಸೌರ ಫಲಕ ನಿರ್ಮಿಸಿ, 25 ವರ್ಷಗಳವರೆಗೆ ಉಚಿತ ವಿದ್ಯುತ್ ಜೊತೆಗೆ ಹಣ ಸಂಪಾದಿಸಲು ಅವಕಾಶ

ಈ ದಿಕ್ಕಿನಲ್ಲಿ ಕಾರ್ಯಗಳನ್ನು ಮುಂದೆ ತೆಗೆದುಕೊಳ್ಳಲು ಸರ್ಕಾರ ಒಂದು ಸಮಿತಿಯನ್ನು ರಚಿಸಲಿದ್ದು ಈ ಸಮಿತಿಯು ಹಣಕಾಸು ಸಚಿವಾಲಯ ವಿದ್ಯುತ್-ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಭಾರಿ ಕೈಗಾರಿಕೆಗಳ ಸಚಿವಾಲಯ ಮತ್ತು ಈ ಕ್ಷೇತ್ರದ ಪ್ರಸಿದ್ಧ ತಜ್ಞರನ್ನು ಒಳಗೊಂಡಿರುತ್ತದೆ. ದೇಶದಲ್ಲಿ ಸೌರ (Solar) ಕಾರು ಉತ್ಪಾದನೆಯನ್ನು ಹೇಗೆ ಉತ್ತೇಜಿಸಬಹುದು ಎಂದು ಪ್ರಧಾನ ಮಂತ್ರಿಗಳ ಕಚೇರಿಗೆ (ಪಿಎಂಒ) ತಮ್ಮ ಸಲಹೆಗಳನ್ನು ನೀಡಬಹುದು. ಮೂಲಗಳ ಪ್ರಕಾರ ಈ ಯೋಜನೆಯ ಬಗ್ಗೆ ಸರ್ಕಾರ ತುಂಬಾ ಗಂಭೀರವಾಗಿದೆ.

ಏಷ್ಯಾದ ಅತಿದೊಡ್ಡ ಸೌರ ಸ್ಥಾವರದಿಂದ ಚಲಿಸಲಿದೆ ದೆಹಲಿ ಮೆಟ್ರೋ

ಒಂದು ಅಂದಾಜಿನ ಪ್ರಕಾರ 2021ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಪ್ರಯಾಣಿಕ ವಾಹನ ಮಾರುಕಟ್ಟೆಯಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ ಸೌರ ಮಾರುಕಟ್ಟೆಗೆ ಹೆಚ್ಚಿನ ಸಾಮರ್ಥ್ಯವನ್ನು ಸರ್ಕಾರ ನೋಡುತ್ತದೆ. ಪ್ರಸ್ತುತ ಟಾಟಾ ಮೋಟಾರ್ಸ್, ಟಿವಿಎಸ್ ಮೋಟಾರ್ಸ್ ಮತ್ತು ಮಹೀಂದ್ರಾ ಗ್ರೂಪ್ ಈಗಾಗಲೇ ಸೌರ ಸ್ಥಾವರಗಳನ್ನು ಹೊಂದಿವೆ.

Trending News