Special Trains Cancel: ಕೆಎಸ್‌ಆರ್ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿರ್ಮಾಣ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಸುಮಾರು 11 ವಿಶೇಷ ರೈಲುಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.  


COMMERCIAL BREAK
SCROLL TO CONTINUE READING

ಕೆಲವು ಕಾರ್ಯಾಚರಣೆಯ ಕಾರಣಗಳಿಂದಾಗಿ, ಈ ಕೆಳಗಿನ ವಿಶೇಷ ರೈಲುಗಳನ್ನು ರದ್ದುಗೊಳಿಸಲಾಗುತ್ತಿದೆ (Special Trains Cancel) ಎಂದು ನೈಋತ್ಯ ರೈಲ್ವೆಯ ಇಲಾಖೆ ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. 


ಬ್ಯಾಂಕ್ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಜುಲೈ ವೇತನದಲ್ಲೇ ಹೆಚ್ಚಳವಾಗಲಿದೆ ತುಟ್ಟಿಭತ್ಯೆ


ನೈಋತ್ಯ ರೈಲ್ವೆ (South Western Railways) ನೀಡಿರುವ ಮಾಹಿತಿಯ ಪ್ರಕಾರ, ಕೆಲವು ರೈಲುಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ. ಇದೇ ವೇಳೆ ಕೆಲ ರೈಲುಗಳನ್ನು ಒಂದೆರಡು ದಿನಗಳಷ್ಟೇ ರದ್ದುಗೊಳಿಸಲಾಗಿದೆ. 


ಇದನ್ನೂ ಓದಿ- Ather Rizta: ಅತ್ಯಂತ ಕಡಿಮೆ ಬೆಲೆಗೆ ಈ ಫ್ಯಾಮಿಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿ


ನೈಋತ್ಯ ರೈಲ್ವೆ ರದ್ದುಗೊಳಿಸಿರುವ ರೈಲುಗಳ ವಿವರ ಈ ಕೆಳಕಂಡಂತಿದೆ: 
*  ವಿಶಾಖಪಟ್ಟಣಂ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ (ಎಸ್‌ಎಂವಿಟಿ) ಬೆಂಗಳೂರು  (08543) - ಜೂನ್ 16ರಿಂದ ಮುಂದಿನ ಆದೇಶದವರೆಗೆ
* ಎಸ್‌ಎಂವಿಟಿ ಬೆಂಗಳೂರು - ವಿಶಾಖಪಟ್ಟಣಂ (08544)- ಜೂನ್ 17ರಿಂದ ಮುಂದಿನ ಆದೇಶದವರೆಗೆ 
* ಎಸ್‌ಎಂವಿಟಿ ಬೆಂಗಳೂರು-ಗವಾಹಟಿ (06521)- ಜೂನ್18ರಿಂದ ಮುಂದಿನ ಆದೇಶದವರೆಗೆ 
* ಎಸ್ ಎಂವಿಟಿ ಬೆಂಗಳೂರು-ಮಾಲ್‌ಟೌನ್ (06565)- ಜೂನ್ 19ರಿಂದ ಮುಂದಿನ ಆದೇಶದವರೆಗೆ 
* ಸಂತ್ರಗಾಚ್ ಎಸ್‌ಎಂವಿಟಿ ಬೆಂಗಳೂರು (08845)- ಜೂನ್ 21ರಿಂದ ಮುಂದಿನ ಆದೇಶದವರೆಗೆ 
* ಮಾಲ್ಡ್‌ಟೌನ್ - ಎಸ್‌ಎಂವಿಟಿ ಬೆಂಗಳೂರು (06566)- ಜೂನ್22ರಿಂದ ಮುಂದಿನ ಆದೇಶದವರೆಗೆ 
*  ಗುವಾಹಟಿ -ಎಸ್‌ಎಂವಿಟಿ ಬೆಂಗಳೂರು (06522) ರೈಲಗಳು ರದ್ದು ಜೂ.22ರಿಂದ ಮುಂದಿನ ಆದೇಶದವರೆಗೆ
* ಎಸ್‌ಎಂವಿಟಿ ಬೆಂಗಳೂರು -ಸಂತ್ರಗಾಚ್ (08846)- ಜೂನ್ 23ರಿಂದ ಮುಂದಿನ ಆದೇಶದವರೆಗೆ 


ಉಳಿದಂತೆ ಗಯಾ- ಯಶವಂತಪುರ (06218) ರೈಲನ್ನು ಜೂನ್ 17ರಂದು ಒಂದು ಟ್ರಿಪ್ ಹಾಗೂ ಭಗತ್ ಕಿ ಕೋಠಿ - ಎಸ್‌ಎಂವಿಟಿ ಬೆಂಗಳೂರು ರೈಲು‌ ಎರಡು ಕಡೆಗಳಲ್ಲಿ ಜೂನ್ 20, 23, 27 ಮತ್ತು ಜೂ. 30ರಂದು ರದ್ದುಗೊಳಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.