Sovereign Gold Bond: ಅಗ್ಗದ ದರದಲ್ಲಿ ಚಿನ್ನ ಖರೀದಿಸಲು  ಉತ್ತಮ ಅವಕಾಶವನ್ನು ನೀಡುವ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್- 2023-24 ರ ನಾಲ್ಕನೇ ಸರಣಿ ಆರಂಭವಾಗಿದೆ. ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ, ನೀವು 2024ರ ಫೆಬ್ರವರಿ 12 ರಿಂದ ಫೆಬ್ರವರಿ 16 ರವರೆಗೆ ಚಿನ್ನದಲ್ಲಿ ಹೂಡಿಕೆ ಮಾಡಬಹುದು.  


COMMERCIAL BREAK
SCROLL TO CONTINUE READING

ನೀವೂ ಸಹ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ ಹೂಡಿಕೆ ಮಾಡಲು ಬಯಸಿದರೆ ಇದಕ್ಕಾಗಿ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಅದನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು. ವಿಶೇಷವೆಂದರೆ ಆನ್‌ಲೈನ್ ಖರೀದಿಯಲ್ಲಿ ಉತ್ತಮ  ರಿಯಾಯಿತಿಯೂ ಲಭ್ಯವಿದೆ. 


ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ ಪ್ರತಿ ಕೆಜಿ ಚಿನ್ನದ ಬೆಲೆ ಎಷ್ಟು?
BJA (India Bullion & Jewellers Association Ltd) ಬಿಡುಗಡೆ ಮಾಡಿರುವ ಚಿನ್ನದ ಬೆಲೆಗಳನ್ನು ಗಮನಿಸಿದರೆ, ಫೆಬ್ರವರಿ 12 ರಂದು 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 6,238 ರೂ., ಪ್ರತಿ ಗ್ರಾಂ  22 ಕ್ಯಾರೆಟ್ ಚಿನ್ನದ ಬೆಲೆ 6,088 ರೂ., ಪ್ರತಿ ಗ್ರಾಂ  20 ಕ್ಯಾರೆಟ್ ಚಿನ್ನದ ದರ 5,552 ರೂ., 18 ಕ್ಯಾರೆಟ್ ಚಿನ್ನದ ಬೆಲೆ 5,053 ರೂ., ಮತ್ತು ಪ್ರತಿ ಗ್ರಾಂ. 14 ಕ್ಯಾರೆಟ್ ಚಿನ್ನದ ಬೆಲೆ  4,024 ರೂ., ಆಗಿದೆ. ಸಾವರಿನ್ ಗೋಲ್ಡ್ ಬಾಂಡ್  ಯೋಜನೆಯಡಿ ನೀವು 24 ಕ್ಯಾರೆಟ್‌ನ 99.9% ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡಬಹುದಾಗಿದೆ. ಇಲ್ಲಿ ನೀವು 24 ಕ್ಯಾರೆಟ್‌ನ 99.9% ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಪ್ರತಿ ಗ್ರಾಂಗೆ 6,263 ರೂ. ಆಗಿದೆ. 


ಇದನ್ನೂ ಓದಿ- Cheapest Gold: ಇಂದಿನಿಂದ ಆರಂಭಗೊಂಡಿದೆ ಅಗ್ಗದ ದರದಲ್ಲಿ ಚಿನ್ನ ಮಾರಾಟದ ಯೋಜನೆ, ತ್ವರೆ ಮಾಡಿ ನಿಮ್ಮ ಬಳಿ ಕೇವಲ ಇಷ್ಟೇ ದಿನ ಬಾಕಿ ಇದೆ!


ಸಾವರಿನ್ ಗೋಲ್ಡ್ ಬಾಂಡ್ ಅನ್ನು ಎಲ್ಲಿ ಖರೀದಿಸಬಹುದು?
ಸಾವರಿನ್ ಗೋಲ್ಡ್ ಬಾಂಡ್ ಅನ್ನು ಗ್ರಾಹಕರು ಬ್ಯಾಂಕ್‌ಗಳಿಂದ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ಆನ್‌ಲೈನ್ ಖರೀದಿಯಲ್ಲಿ ಗ್ರಾಹಕರು ಪ್ರತಿ ಗ್ರಾಂ ಚಿನ್ನ ಖರೀದಿಯಲ್ಲಿ 50 ರೂ. ರಿಯಾಯಿತಿಯನ್ನು ಪಡೆಯುತ್ತೀರಿ.


ಇದಲ್ಲದೆ, ಅಂಚೆ ಕಚೇರಿಯಿಂದಲೂ ಸವಾರಿನ್ ಗೋಲ್ಡ್ ಬಾಂಡ್ ಖರೀದಿಸಬಹುದಾಗಿದೆ.  ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಮೂಲಕ, BSE ಮತ್ತು NSE ಪ್ಲಾಟ್‌ಫಾರ್ಮ್‌ಗಳಿಂದಲೂ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದಾಗಿದೆ. 


ಇದನ್ನೂ ಓದಿ- National Pension System: ನಿಮ್ಮ ಎನ್‌ಪಿ‌ಎಸ್ ಅಕೌಂಟ್ ಫ್ರೀಜ್ ಆಗಿದ್ಯಾ? ಚಿಂತೆಬಿಡಿ, ಈ ರೀತಿ ಮತ್ತೆ ಸಕ್ರಿಯಗೊಳಿಸಿ


ಆನ್‌ಲೈನ್‌ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ:- 
ನೀವು ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಾಗಿದ್ದರೆ ಎಸ್‌ಬಿ‌ಐ ನೆಟ್ ಬ್ಯಾಂಕಿಂಗ್ ಮೂಲಕ ಸಾವರನ್ ಗೋಲ್ಡ್ ಬಾಂಡ್ ಗೆ ಅರ್ಜಿ ಸಲ್ಲಿಸಬಹುದು. ಇದರ ಹಂತ-ಹಂತದ ಪ್ರಕ್ರಿಯೆ ಈ ಕೆಳಕಂಡಂತಿದೆ.. 


ಹಂತ 1: ಮೊದಲು ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸುವ ಮೂಲಕ ಎಸ್‌ಬಿಐ ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ.


ಹಂತ 2: ಮುಖ್ಯ ಮೆನುವಿನಿಂದ 'ಇ-ಸೇವೆ' ಮೇಲೆ ಕ್ಲಿಕ್ ಮಾಡಿ.


ಹಂತ 3: ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಮೇಲೆ ಕ್ಲಿಕ್ ಮಾಡಿ.


ಹಂತ 4: ಹೆಡರ್ ಟ್ಯಾಬ್‌ನಲ್ಲಿ 'ಖರೀದಿ'  ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.


ಹಂತ 5: 'ನಿಯಮಗಳು ಮತ್ತು ಷರತ್ತುಗಳ' ಟ್ಯಾಬ್ ಅನ್ನು ಆಯ್ಕೆ ಮಾಡಿ ಮತ್ತು 'ಮುಂದುವರಿಯಿರಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


ಹಂತ 6: ನೀವು ಖರೀದಿಸಲು ಬಯಸುವ ಪ್ರಮಾಣವನ್ನು ಭರ್ತಿ ಮಾಡಿ. ನಾಮಿನಿ ವಿವರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.


ಈ ರೀತಿ ನೀವು ಸುಲಭವಾಗಿ ನೀವು ಕುಳಿತಲ್ಲಿಯೇ ಸಾವರಿನ್ ಗೋಲ್ಡ್ ಬಾಂಡ್ ಅನ್ನು ಖರೀದಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.