ನಾಳೆಯಿಂದ ಸಿಗಲಿದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ.! ಹೇಗೆ ಗೊತ್ತಾ..?
ಮೇ-ಸೆಪ್ಟಂಬರ್ ಅವಧಿಯಲ್ಲಿ ಆರು ಕಂತುಗಳಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಜಾರಿ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿದೆ. ಅದರ ಮೊದಲ ಕಂತಿನ ಖರೀದಿ ಮೇ 17-21 ರ ನಡುವೆ ನಡೆಯಲಿದೆ. ಮೇ 25ಕ್ಕೆ ಬಾಂಡ್ ಜಾರಿ ಮಾಡಲಾಗುತ್ತದೆ.
ನವದೆಹಲಿ : ಮೇ 17ರಿಂದ ನಿಮಗೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶವೊಂದು ನಿಮಗೆ ಲಭ್ಯವಾಗಲಿದೆ. ಈ ಅವಕಾಶವನ್ನು ಕೇಂದ್ರ ಸರ್ಕಾರ ನಿಮಗೆ ನೀಡಲಿದೆ. ಕೇಂದ್ರ ಸರ್ಕಾರವು 2021-22ರ ಸಾಲಿನ ಸಾವರಿನ್ ಗೋಲ್ಡ್ ಬಾಂಡಿನ ಮೊದಲ ಸೀರಿಸ್ ಇಶ್ಯೂ ಪ್ರೈಸ್ ಜಾರಿ ಮಾಡಿದೆ. ಹಾಗಾಗಿ ಮೇ 17 - 21 ರ ನಡುವೆ ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond) ಮಾರಾಟವಾಗುತ್ತದೆ. ಮೇ 25, 2021ರಂದು ಅದರ ಸೆಟಲ್ ಮೆಂಟ್ ಆಗುತ್ತದೆ.
ಪ್ರತಿ ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ..?
ಮೇ-ಸೆಪ್ಟಂಬರ್ ಅವಧಿಯಲ್ಲಿ ಆರು ಕಂತುಗಳಲ್ಲಿ ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond) ಜಾರಿ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿದೆ. ಅದರ ಮೊದಲ ಕಂತಿನ ಖರೀದಿ ಮೇ 17-21 ರ ನಡುವೆ ನಡೆಯಲಿದೆ. ಮೇ 25ಕ್ಕೆ ಬಾಂಡ್ ಜಾರಿ ಮಾಡಲಾಗುತ್ತದೆ. ಒಂದು ಗ್ರಾಂ ಚಿನ್ನಕ್ಕೆ 4777 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಆನ್ ಲೈನ್ (Online) ಮೂಲಕ ಡಿಜಿಟಲ್ ಪೇಮೆಂಟ್ (Digital payment) ಮಾಡಿ ಇದನ್ನು ಖರೀದಿಸಬಹುದು. ಇದರಲ್ಲಿ ಪ್ರತಿ ಗ್ರಾಮ್‍ಗೆ 50 ರೂಪಾಯಿ ಡಿಸ್ಕೌಂಟ್ (Discount) ಕೂಡಾ ಸಿಗಲಿದೆ. ಎಲ್ಲಾ ಬ್ಯಾಂಕ್ (Bank), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ, ಅಂಚೆ ಕಚೇರಿ, ಮಾನ್ಯತೆ ಪಡೆದ ಷೇರು ಪೇಟೆಗಳು, ಬಿಎಸ್‍ಇ ಮತ್ತು ಎನ್‍ಎಸ್‍ಇ ಗಳಲ್ಲಿ ಈ ಬಾಂಡ್ ಗಳು ಲಭ್ಯ ಇದೆ.
ಇದನ್ನೂ ಓದಿ : Covid-19 Life Insurance: ಕೇವಲ 330 ರೂ. ಪ್ರೀಮಿಯಂಗೆ ಸಿಗುತ್ತಿದೆ ಈ ವಿಮಾ ಪಾಲಸಿ, ನೀವೂ ಲಾಭ ಪಡೆದುಕೊಳ್ಳಬಹುದು
ಹೂಡಿಕೆ ಮಿತಿ ಎಷ್ಟು..?
ಸಾವರಿನ್ ಗೋಲ್ಡ್ ಬಾಂಡ್ ಅವಧಿ ಎಂಟು ವರ್ಷಗಳದ್ದಾಗಿದೆ. ಒಂದು ವಿತ್ತೀಯ ವರ್ಷದಲ್ಲಿ ಓರ್ವ ವ್ಯಕ್ತಿ ಅಥವಾ ಅವಿಭಜಿತ ಕುಟುಂಬ ಕನಿಷ್ಠ 1 ಗ್ರಾಂ ಮತ್ತು ಗರಿಷ್ಠ ನಾಲ್ಕು ಕಿಲೋ ಗ್ರಾಂ ಚಿನ್ನದ ಮೇಲೆ ಹೂಡಿಕೆ (Investment) ಮಾಡಬಹುದಾಗಿದೆ. ಟ್ರಸ್ಟ್ ಮುಂತಾದ ಸಂಸ್ಥೆಗಳು 20 ಕೆಜಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದಾಗಿದೆ.
ಹೌದು ಏನಿದು ಸಾವರಿನ್ ಗೋಲ್ಡ್ ಬಾಂಡ್..?
1.ಇದೊಂದು ಸರ್ಕಾರಿ ಬಾಂಡ್.
2. ಡಿಮ್ಯಾಟ್ (Demat) ರೂಪದಲ್ಲಿ ಪರಿವರ್ತನೆಗೊಳಿಸಬಹುದು.
3. ರೂಪಾಯಿ ಅಥವಾ ಡಾಲರ್ (Dollar) ಮೇಲೆ ಇದರ ಮೌಲ್ಯ ನಿರ್ಧಾರಿತವಾಗುವುದಿಲ್ಲ.
4. ಬದಲಿಗೆ ಚಿನ್ನದ ತೂಕದ ಮೇಲೆ ಅದರ ಮೌಲ್ಯ ನಿರ್ಧಾರಿತವಾಗುತ್ತದೆ.
5. ಸರ್ಕಾರ ಮತ್ತು RBI ಈ ಬಾಂಡ್‍ನ್ನು ಜಾರಿಗೆ ತರುತ್ತವೆ.
6. ಈ ಯೋಜನೆ 2015ರಲ್ಲಿ ಆರಂಭವಾಗಿತ್ತು.
ಇದನ್ನೂ ಓದಿ : Post Office ಈ ಯೋಜನೆಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಿ ನಂತ್ರ ಪಡೆಯಿರಿ ₹ 4950!
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.