Covid-19 Life Insurance: ಕೇವಲ 330 ರೂ. ಪ್ರೀಮಿಯಂಗೆ ಸಿಗುತ್ತಿದೆ ಈ ವಿಮಾ ಪಾಲಸಿ, ನೀವೂ ಲಾಭ ಪಡೆದುಕೊಳ್ಳಬಹುದು

 Cheapest Life Insurance - ಕರೋನಾ (Corona Pandemic) ಮಹಾಮಾರಿ  ಜೀವ ವಿಮಾ ಪಾಲಸಿಗಳ (Cheapest Life Insurance) ಮಹತ್ವವನ್ನು ಹಲವು ಪಟ್ಟು ಹೆಚ್ಚಿಸಿದೆ. ಈ ಹಿಂದೆ ವಿಮೆಯನ್ನು ವ್ಯರ್ಥ ಖರ್ಚು ಎಂದು ನಿರ್ಲಕ್ಷಿಸುತ್ತಿದ್ದವರು, ಇಂದು ತಮ್ಮ ಕುಟುಂಬಗಳಿಗೆ ಆರೋಗ್ಯ ಮತ್ತು ಜೀವ ವಿಮೆಯ ರಕ್ಷಣಾತ್ಮಕ ಹೊದಿಕೆಯನ್ನು ಹೊದಿಸುತ್ತಿದ್ದಾರೆ.

Written by - Nitin Tabib | Last Updated : May 15, 2021, 03:39 PM IST
  • ಕೊರೊನಾ ಕಾಲದಲ್ಲಿ ಜೀವ ವಿಮಾ ಪಾಲಸಿಗಳ ಮಹತ್ವ ಮತ್ತಷ್ಟು ಹೆಚ್ಚಾಗಿದೆ.
  • ಕಡಿಮೆ ಆದಾಯದ ಗುಂಪಿನವರು ಸುಲಭವಾಗಿ ಪ್ರವೇಶಿಸಬಹುದಾದ ಕೆಲ ವಿಮಾ ಪಾಲಿಸಿಗಳಿವೆ.
  • ಅವುಗಳಲ್ಲಿ ಒಂದು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)
Covid-19 Life Insurance: ಕೇವಲ 330 ರೂ. ಪ್ರೀಮಿಯಂಗೆ ಸಿಗುತ್ತಿದೆ ಈ ವಿಮಾ ಪಾಲಸಿ, ನೀವೂ ಲಾಭ ಪಡೆದುಕೊಳ್ಳಬಹುದು title=
Covid-19 Life Insurance (File Photo)

ನವದೆಹಲಿ: Cheapest Life Insurance - ಕರೋನಾ (Corona Pandemic) ಮಹಾಮಾರಿ  ಜೀವ ವಿಮಾ ಪಾಲಸಿಗಳ (Cheapest Life Insurance) ಮಹತ್ವವನ್ನು ಹಲವು ಪಟ್ಟು ಹೆಚ್ಚಿಸಿದೆ. ಈ ಹಿಂದೆ ವಿಮೆಯನ್ನು ವ್ಯರ್ಥ ಖರ್ಚು ಎಂದು ನಿರ್ಲಕ್ಷಿಸುತ್ತಿದ್ದವರು, ಇಂದು ತಮ್ಮ ಕುಟುಂಬಗಳಿಗೆ ಆರೋಗ್ಯ ಮತ್ತು ಜೀವ ವಿಮೆಯ ರಕ್ಷಣಾತ್ಮಕ ಹೊದಿಕೆಯನ್ನು ಹೊದಿಸುತ್ತಿದ್ದಾರೆ. ಪ್ರಸ್ತುತ, ಕಡಿಮೆ ಆದಾಯದ ಗುಂಪಿನವರು ಸುಲಭವಾಗಿ ಪ್ರವೇಶಿಸಬಹುದಾದ ಕೆಲವು ವಿಮಾ ಪಾಲಿಸಿಗಳಿವೆ. ಅವುಗಳಲ್ಲಿ ಒಂದು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY). ಈ ಯೋಜನೆಯಲ್ಲಿ ಮೋದಿ ಸರ್ಕಾರವು ಜೀವ ವಿಮೆಯನ್ನು ಅತ್ಯಂತ ಅಗ್ಗದ ಪ್ರೀಮಿಯಂನೊಂದಿಗೆ ಒದಗಿಸುತ್ತದೆ.

2015 ರಿಂದ, ಭಾರತ ಸರ್ಕಾರವು ಹೆಚ್ಚಿನ ಉಳಿತಾಯ ಖಾತೆದಾರರಿಗೆ ಎರಡು ಕೈಗೆಟುಕುವ ವಿಮಾ ಯೋಜನೆಗಳನ್ನು ಪರಿಚಯಿಸಿದೆ. ಮೊದಲ ಯೋಜನೆ ಪ್ರಧಾನಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) 330 ರೂ.ಗಳ ಪ್ರೀಮಿಯಂ  ಹೊಂದಿದ್ದರೆ, ಎರಡನೇ ಯೋಜನೆ ಪ್ರಧಾನ ಮಂತ್ರಿ ಆರೋಗ್ಯ ಸಂರಕ್ಷಣಾ ವಿಮಾ ಯೋಜನೆ (PMSBY) 12 ರೂ. ಪ್ರಿಮಿಯಂ ಹೊಂದಿದೆ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಯೋಜನೆ ಪಡೆದುಕೊಂಡವರು ಕೊವಿಡ್-19 ಮಹಾಮಾರಿಯ ಕಾಡಲ್ಲಿ 2 ಲಕ್ಷ ರೂ.ಗಳ ವಿಮಾ ಕವರೇಜ್ ಪಡೆದುಕೊಳ್ಳಬಹುದು. PMSBY ಯೋಜನೆಯ ಅಡಿ 55 ವಯಸ್ಸಿನವರೆಗೆ ಲೈಫ್ ಕವರ್ ಸಿಗುತ್ತದೆ. ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (saving account) ಹೊಂದಿದವರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

Pradhan Mantri Jeevan Jyoti Bima Yojana ಪ್ರತಿ ಭಾರತೀಯರು ಪಡೆದುಕೊಳ್ಳಬಹುದಾದ ಯೋಜನೆಯಾಗಿದೆ. ಈ ಯೋಜನೆಯಡಿ 18 ರಿಂದ 50 ವಯಸ್ಸಿನವರು ವಿಮಾ ರಕ್ಷಣೆ ಪಡೆದುಕೊಳ್ಳಬಹುದು. ಇತರೆ ಲೈಫ್ ಇನ್ಸೂರೆನ್ಸ್  ಪಾಲಸಿಗಳಂತೆಯೇ ನೀವು ಈ ಪಾಲಸಿಯನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಹೆಸರು ನೋಂದಣಿಗಾಗಿ ಬ್ಯಾಂಕ್ ಹಾಗೂ ಜೀವ ವಿಮಾ ಕಪನಿಯ ನಡುವೆ ಟೈ ಅಪ್ ಇರಲಿದೆ. 

PMJJBY ಯೋಜನೆಯ ವಾರ್ಷಿಕ ಪ್ರಿಮಿಯಂ 300 ರೂ. ಇದೆ. ಇದರಲ್ಲಿ 2 ಲಕ್ಷ ರೂ.ಗಳ ವರೆಗೆ  Insurance cover(ವಿಮಾ ರಕ್ಷಣೆ) ಸಿಗುತ್ತದೆ. ಪ್ರತಿವರ್ಷ ನೀವು ಈ ಪಾಲಸಿಯನ್ನು ನವೀಕರಿಸಬೇಕು. ವಿಮಾ ಅವಧಿ 1 ಜೂನ್ ನಿಂದ 31 ಮೇ ವರೆಗೆ ಇರಲಿದೆ.

ಇದನ್ನೂ ಓದಿ- Health Insurance: ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳಿಗೆ IRDAI ಈ ಆದೇಶ ನಿಮಗೂ ಗೊತ್ತಿರಲಿ

Pradhan Mantri Jeevan Jyoti Bima Yojana ಅಡಿ ಒಂದು ವೇಳೆ ಪಾಲಸಿ ಪಡೆದವರು ಯಾವುದೇ ಕಾರಣದಿಂದ ಪ್ರಿಮಿಯಂ ಪಾವತಿಸದೇ ಹೋದಲ್ಲಿ ಅವರು ಪುನಃ ವಾರ್ಷಿಕ ಪ್ರಿಮಿಯಂ ಪಾವತಿಸಿ ಯೋಜನೆಗೆ ಮರಳಬಹುದು. ಆದರೆ, ಇದಕ್ಕಾಗಿ ಅವರು ತಮ್ಮ ಆರೋಗ್ಯ ಉತ್ತಮವಾಗಿರುವ ಕುರಿತು ಸೆಲ್ಫ್ ಡಿಕ್ಲೆರೇಶನ್ ನೀಡಬೇಕು.

ಇದನ್ನೂ ಓದಿ- EPF : ನಿಮ್ಮ UAN ಮರೆತಿದ್ದರೆ ಕಂಡುಹಿಡಿಯಲು ಹೀಗೆ ಮಾಡಿ

ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ ಆರೋಗ್ಯ ರಕ್ಷಣೆ 55 ವರ್ಷಗಳವರೆಗೆ ಸಿಗುತ್ತದೆ. ಯೋಜನೆಯ ಅವಧಿಯಲ್ಲಿ ಅಹಿತಕರ ಘಟನೆ ಸಂಭವಿಸಿದ ಸಂದರ್ಭಗಳಲ್ಲಿ ವಿಮಾ ರಕ್ಷಣೆ ಸಿಗುತ್ತದೆ. ಯಾವುದೇ ಓರ್ವ ವ್ಯಕ್ತಿ ಕೇವಲ ಒಂದು ಅಕೌಂಟ್ ಹಾಗೂ ಒಂದೇ ಇನ್ಸುರೆನ್ಸ್ ಕಂಪನಿ ಮೂಲಕ ಈ ಸ್ಕೀಮ್ ನಲ್ಲಿ ಶಾಮೀಲಾಗಬಹುದು.

ಇದನ್ನೂ ಓದಿ- ಪ್ರತಿ ದಿನ 7 ರೂಪಾಯಿ ಹೂಡಿಕೆ ಮಾಡಿ ತಿಂಗಳಿಗೆ ಪಡೆಯಿರಿ 5,000 ರೂ; ತಿಳಿದಿರಲಿ ಸರ್ಕಾರದ ಈ ಯೋಜನೆ

ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಲ್ಲಿ ವಿಮಾಧಾರಾಕರ ಮೃತ್ಯು ಸಂಭವಿಸಿದ ಸಂದರ್ಭದಲ್ಲಿ ಅವರ ನಾಮಿನಿ ಕ್ಲೇಮ್ ಫಾರ್ಮ್ ಜೊತೆಗೆ ಮೃತ್ಯು ಪತ್ರವನ್ನು ಬ್ಯಾಂಕ್ ಗಳಿಗೆ ಸಲ್ಲಿಸಿ ಕ್ಲೇಮ್ ಪಡೆದುಕೊಳ್ಳಬಹುದು. ನಾಮಿನಿ ಖಾತೆಗೆ 2 ಲಕ್ಷ ರೂ. ವರ್ಗಾವಣೆ ಮಾಡಲಾಗುವುದು.

ಇದನ್ನೂ ಓದಿ-Bankನ ಈ SMS ಅಪ್ಪಿ-ತಪ್ಪಿಯೂ ಕೂಡ IGNORE ಮಾಡ್ಬೇಡಿ, ಇಲ್ದಿದ್ರೆ ಬೀಳುತ್ತೆ 1000 ರೂ. ದಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News