SBI Special FDs: ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡುವ ವಿಚಾರಕ್ಕೆ ಬಂದರೆ ಎಫ್‌ಡಿ ಬಹುತೇಕ ಜನರ ಪ್ರಥಮ ಆಯ್ಕೆಯಾಗಿರುತ್ತದೆ. ಎಫ್‌ಡಿಯಲ್ಲಿ ಹೂಡಿಕೆ ಮಾಡುವುದರಿಂದ ಹಣ ಸುರಕ್ಷಿತವಾಗಿರುವುದರ ಜೊತೆಗೆ ಹೂಡಿಕೆ ಮೇಲೆ ಬಡ್ಡಿಯನ್ನು ಕೂಡ ಪಡೆಯಬಹುದು. ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿದರ ಲಭ್ಯವಿರುತ್ತದೆ.  ಪ್ರತಿ ಬ್ಯಾಂಕ್‌ನಲ್ಲಿ  ಎಫ್‌ಡಿ ಆಯ್ಕೆಗಳನ್ನು ಕಾಣಬಹುದು. ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿದರಗಳು ಸಹ ವಿಭಿನ್ನವಾಗಿವೆ. ಅದೇ ಸಮಯದಲ್ಲಿ, ಕೆಲವು ವಿಶೇಷ ಎಫ್‌ಡಿ ಯೋಜನೆಗಳು ಸಹ ಅನೇಕ ಬ್ಯಾಂಕ್‌ಗಳಲ್ಲಿ ಲಭ್ಯವಿವೆ. 


COMMERCIAL BREAK
SCROLL TO CONTINUE READING

ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಇಂಡಿಯಾ (State Bank Of India) ತನ್ನ ಗ್ರಾಹಕರಿಗಾಗಿ ಕೆಲವು ವಿಶೇಷ ಎಫ್‌ಡಿ ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಬಡ್ಡಿ ಪ್ರಯೋಜನವನ್ನು ಪಡೆಯಬಹುದು. ಎಸ್‌ಬಿ‌ಐನ ಅಂತಹ ನಾಲ್ಕು ಪ್ರಮುಖ ಎಫ್‌ಡಿ ಯೋಜನೆಗಳ ಬಗ್ಗೆ ತಿಳಿಯೋಣ... 


* ಅಮೃತ್ ವೃಷ್ಟಿ (Amrit Vrishti): 
ಎಸ್‌ಬಿಐನ ಅಮೃತ್ ವೃಷ್ಟಿ (Amrit Vrishti) ಯೋಜನೆಯು 444 ದಿನಗಳವರೆಗಿನ ಯೋಜನೆಯಾಗಿದೆ.. ಈ ಯೋಜನೆಯಲ್ಲಿ ಎಫ್‌ಡಿ ಇಡುವುದರಿಂದ ಸಾಮಾನ್ಯ ಜನರಿಗೆ 7.25% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಆದರೆ, ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿಯನ್ನು ನೀಡಲಾಗುತ್ತಿದೆ. ಅರ್ಥಾತ್ ಹಿರಿಯ ನಾಗರಿಕರಿಗೆ 7.75% ಬಡ್ಡಿ ಸೌಲಭ್ಯ ಸಿಗಲಿದೆ. 


ಇದನ್ನೂ ಓದಿ- Home Loan: ಗೃಹ ಸಾಲ ಪಡೆಯುವಾಗ ಈ ಟ್ರಿಕ್ಸ್ ಅನುಸಿರಿಸಿದರೆ ಲಕ್ಷಾಂತರ ರೂ. ಉಳಿಸಬಹುದು!


* ಅಮೃತ ಕಲಶ ಯೋಜನೆ (Amrit Kalash Scheme):
ಎಸ್‌ಬಿಐನ ಅಮೃತ್ ಕಲಶ ಯೋಜನೆಯ (Amrit Kalash Scheme) 400 ದಿನಗಳವರೆಗಿನ ಯೋಜನೆಯಾಗಿದೆ. . ಈ ಎಫ್‌ಡಿಯಲ್ಲಿ ಸಾಮಾನ್ಯ ಜನರಿಗೆ 7.10% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದ್ದರೆ, ಹಿರಿಯ ನಾಗರಿಕರು 7.60% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ನೀವು 30 ಸೆಪ್ಟೆಂಬರ್ 2024 ರವರೆಗೆ ಇದರಲ್ಲಿ ಹೂಡಿಕೆ ಮಾಡಬಹುದು.  


* ವಿ ಕೇರ್ ಸ್ಕೀಮ್ (WeCare FD): 
ಎಸ್‌ಬಿ‌ಐನ ವಿ ಕೇರ್ ಸ್ಕೀಮ್ (WeCare FD)ನಲ್ಲಿಯೂ ಹೆಚ್ಚಿನ ಬಡ್ಡಿ ಸೌಲಭ್ಯ ಲಭ್ಯವಿದೆ. ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚುವರಿ ಬಡ್ಡಿಯನ್ನು ನೀಡುವ ಮೂಲಕ ಅವರ ಆದಾಯವನ್ನು ಸುರಕ್ಷಿತಗೊಳಿಸುವುದು ಎಸ್‌ಬಿಐನ ಈ ವಿಶೇಷ ಯೋಜನೆಯ ಉದ್ದೇಶವಾಗಿದೆ. ಇದರಲ್ಲಿ 5 ವರ್ಷ ಮತ್ತು 10 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಪ್ರಸ್ತುತ, ಹಿರಿಯ ನಾಗರೀಕರು ಎಸ್‌ಬಿಐನ ವಿಕೇರ್ ಯೋಜನೆಯಲ್ಲಿ ಶೇಕಡಾ 7.50 ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ. 


ಇದನ್ನೂ ಓದಿ- Swavalambi Sarathi Scheme: ವಾಹನ ಖರೀದಿಗೆ ಸರ್ಕಾರದಿಂದ 3 ಲಕ್ಷ ಸಹಾಯಧನ, ಆನ್‌ಲೈನ್‌ ಅರ್ಜಿ ಪ್ರಾರಂಭ


* ಸರ್ವೋತ್ತಮ ಎಫ್‌ಡಿ (Sarvottama FD): 
ನೀವು 1 ವರ್ಷ ಅಥವಾ 2 ವರ್ಷಗಳ ಕಾಲ ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಸರ್ವೋತ್ತಮ ಎಫ್‌ಡಿ ಅತ್ಯುತ್ತಮ ಹೂಡಿಕೆ ಯೋಜನೆಯಾಗಿದೆ. ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಠೇವಣಿಗಳ ಮೇಲೆ ಉತ್ತಮ ಬಡ್ಡಿಯನ್ನು ಪಡೆಯಲು ಇದು ಉತ್ತಮ ಯೋಜನೆಯಾಗಿದೆ. ಸರ್ವೋತ್ತಮ ಎಫ್‌ಡಿಯಲ್ಲಿ 1 ಕೋಟಿಗಿಂತ ಹೆಚ್ಚು ಮತ್ತು 2 ಕೋಟಿಗಿಂತ ಕಡಿಮೆ ಮೊತ್ತವನ್ನು ಠೇವಣಿ ಇಡಬಹುದು. ಇದರಲ್ಲಿ ಜನಸಾಮಾನ್ಯರಿಗೆ ಒಂದು ವರ್ಷದ ಎಫ್‌ಡಿ ಮೇಲೆ 7.10% ಮತ್ತು ಎರಡು ವರ್ಷಗಳ ಅವಧಿಯ ಎಫ್‌ಡಿಯಲ್ಲಿ 7.40% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ. ಆದರೆ ಹಿರಿಯ ನಾಗರಿಕರು 1 ವರ್ಷದ ಎಫ್‌ಡಿಯಲ್ಲಿ 7.60% ಮತ್ತು 2 ವರ್ಷದ ಠೇವಣಿಯಲ್ಲಿ  7.90% ದರದಲ್ಲಿ ಬಡ್ಡಿಯನ್ನು ಪಡೆಯುತ್ತಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.