LICಯಿಂದ 4 ಹೊಸ ಟರ್ಮ್ ಇನ್ಶೂರೆನ್ಸ್ ಬಿಡುಗಡೆ; ಇವುಗಳ ಲಾಭಗಳ ಬಗ್ಗೆ ತಿಳಿಯಿರಿ

LIC new term life insurance plans: LICಯ ಯುವ ಅರ್ಮ್ ಮತ್ತು LICಯ ಡಿಜಿ ಟರ್ಮ್ ಇನ್ಶೂರೆನ್ಸ್ ಒಂದು ನಾನ್-ಪಾರ್, ನಾನ್-ಲಿಂಕ್ಡ್, ಲೈಫ್, ಇಂಡಿವಿಜುವಲ್, ಪ್ಯೂರ್ ರಿಸ್ಕ್ ಪ್ಲಾನ್ ಆಗಿದೆ. ಈ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರನ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ವಿಮಾದಾರನ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡುತ್ತದೆ. ಆದರೆ ಇದೊಂದು ನಾನ್-ಪಾರ್ ಇನ್ಶೂರೆನ್ಸ್ ಆಗಿರುವುದರಿಂದ ಉಳಿದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

LIC launches 4 new term life insurance plans: ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ LICಯು ತನ್ನ ಕೋಟ್ಯಂತರ ಗ್ರಾಹಕರಿಗೆ 4 ಹೊಸ ವಿಶೇಷ ಟರ್ಮ್ ಇನ್ಶೂರೆನ್ಸ್‌ಗಳನ್ನು ಬಿಡುಗಡೆ ಮಾಡಿದೆ. ಯುವಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿಮೆಗಳನ್ನು ಪರಿಚಯಿಸಲಾಗಿದೆ. ವಿಮೆ ಸೌಲಭ್ಯದ ಜೊತೆಗೆ ಸಾಲ ಮರುಪಾವತಿ ರಕ್ಷಣೆ ಸಹ ಏಕಕಾಲದಲ್ಲಿ ದೊರೆಯಲಿದೆ. LIC ಪರಿಚಯಿಸಿರುವ 4 ಹೊಸ ಟರ್ಮ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಗ್ರಾಹಕರು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ. ಈ ಟರ್ಮ್ ಇನ್ಶೂರೆನ್ಸ್‌ ಪ್ಲಾನ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

LIC ಪರಿಚಯಿಸಿರುವ 4 ಹೊಸ ಯೋಜನೆಗಳ ಪೈಕಿ ಮೊದಲನೆಯದು LIC ಯುವ ಟರ್ಮ್ ಇನ್ಶೂರೆನ್ಸ್ (LIC's Yuva Term), ೨ನೇಯದ್ದು LIC ಡಿಜಿ ಟರ್ಮ್ ಇನ್ಶೂರೆನ್ಸ್ (LIC's Digi Term), 3ನೇಯದ್ದು LICಯ ಯುವ ಕ್ರೆಡಿಟ್ ಲೈಫ್ ಟರ್ಮ್ ಇನ್ಶೂರೆನ್ಸ್ (LIC's Yuva Credit Life) ಮತ್ತು 4ನೇಯದ್ದು LICಯ ಡಿಜಿ ಕ್ರೆಡಿಟ್ ಲೈಫ್ ಟರ್ಮ್ ಇನ್ಶೂರೆನ್ಸ್ (LIC's Digi Credit Life) ಆಗಿವೆ.

2 /5

LICಯ ಯುವ ಅವಧಿ ಟರ್ಮ್ ಇನ್ಶೂರೆನ್ಸ್ (LIC's Yuva Term) ಆಫ್‌ಲೈನ್ ಮೂಲಕ, ಏಜೆಂಟ್‌ಗಳ ಮೂಲಕ ಮಾತ್ರ ಪಡೆಯಬಹುದು. LICಯ ಡಿಜಿ ಟರ್ಮ್ ಇನ್ಶೂರೆನ್ಸ್‌ ಪಾಲಿಸಿ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದೆ ಎಂದು LIC ಹೇಳಿದೆ. ಈ ಎರಡೂ ವಿಮಾ ಪಾಲಿಸಿಗಳನ್ನು ಆರಂಭಿಕ ಹಂತದಲ್ಲಿಯೇ ಟರ್ಮ್ ವಿಮೆ ಮಾಡಿಸಿಕೊಳ್ಳಲು ಬಯಸುವ ಯುವಕರಿಗೆಂದು ವಿಶೇಷವಾಗಿ ಪರಿಚಯಿಸಲಾಗಿದೆ. LICಯ ಸಿಇಒ ಮತ್ತು ಎಂಡಿ ಸಿದ್ಧಾರ್ಥ್ ಮೊಹಾಂತಿಯವರು ಸೋಮವಾರ ಈ ವಿಮೆಗಳನ್ನು ಪರಿಚಯಿಸಿದರು.

3 /5

ಸಾಲದ ಹೊಣೆಗಾರಿಕೆಗಳನ್ನು ಕವರ್ ಮಾಡಲು ೨ ವಿಮೆಗಳನ್ನು ಬಿಡುಗಡೆ ಮಾಡಲಾಗಿದೆ. LICಯ ಯುವ ಕ್ರೆಡಿಟ್ ಲೈಫ್ ಮತ್ತು LICಯ ಡಿಜಿ ಕ್ರೆಡಿಟ್ ಲೈಫ್ ಎಂಬ ೨ ಪಾಲಿಸಿಗಳನ್ನು ಪರಿಚಯಿಸಲಾಗಿದೆ. ಈ ಪೈಕಿ LICಯ ಯುವ ಕ್ರೆಡಿಟ್ ಪಾಲಿಸಿ ಆಫ್‌ಲೈನ್ ಮೋಡ್‌ನಲ್ಲಿ ಲಭ್ಯವಿದ್ದರೆ, LICಯ ಡಿಜಿ ಕ್ರೆಡಿಟ್ ಲೈಫ್ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದೆ. ಸಾಲದ ಮರುಪಾವತಿ ಸಂದರ್ಭ ಅಪಾಯ ಎದುರಾದರೆ ರಕ್ಷಣೆಗೆ ಈ ವಿಮೆ ನಿಮ್ಮ ನೆರವಿಗೆ ಬರಲಿದೆ. ವಸತಿ/ಶಿಕ್ಷಣ/ವಾಹನ ಮುಂತಾದ ಸಾಲದ ಹೊಣೆಗಾರಿಕೆಯನ್ನು ಈ ವಿಮೆಯು ಒಳಗೊಂಡಿರುತ್ತದೆ.

4 /5

LICಯ ಯುವ ಅರ್ಮ್ ಮತ್ತು LICಯ ಡಿಜಿ ಟರ್ಮ್ ಇನ್ಶೂರೆನ್ಸ್ ಒಂದು ನಾನ್-ಪಾರ್, ನಾನ್-ಲಿಂಕ್ಡ್, ಲೈಫ್, ಇಂಡಿವಿಜುವಲ್, ಪ್ಯೂರ್ ರಿಸ್ಕ್ ಪ್ಲಾನ್ ಆಗಿದೆ. ಈ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರನ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ವಿಮಾದಾರನ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡುತ್ತದೆ. ಆದರೆ ಇದೊಂದು ನಾನ್-ಪಾರ್ ಇನ್ಶೂರೆನ್ಸ್ ಆಗಿರುವುದರಿಂದ ಉಳಿದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

5 /5

18 ರಿಂದ 45 ವರ್ಷದ ನಡುವಿನವರು ಮಾತ್ರ ಈ ಪಾಲಿಸಿಗಳನ್ನು ತೆಗೆದುಕೊಳ್ಳಬಹುದು, ಪಾಲಿಸಿಯ ಮೆಚ್ಯೂರಿಟಿಯ ಕನಿಷ್ಠ ವಯಸ್ಸು 33 ವರ್ಷ, ಗರಿಷ್ಠ ವಯಸ್ಸು 75 ವರ್ಷ ಆಗಿರುತ್ತದೆ. ಕನಿಷ್ಠ ಮೂಲ ವಿಮಾ ಮೊತ್ತ 50,00,000 ರೂ. ಮತ್ತು ಗರಿಷ್ಠ ಮೂಲ ವಿಮಾ ಮೊತ್ತ 5,00,00,000 ರೂ.(5 ಕೋಟಿ ಪಾಲಿಸಿ ಬೋರ್ಡ್ ನಿಯಮಗಳಿಗೆ ಬದ್ಧವಾಗಿರಬೇಕು), ಹೈ ಸಮ್ ಅಶೂರ್ಡ್ ಲಾಭ ಇರುತ್ತದೆ, ಮಹಿಳೆಯರಿಗೆ ಪ್ರೀಮಿಯಂ ದರಗಳಲ್ಲಿ ವಿಶೇಷ ರಿಯಾಯಿತಿ ಸಿಗಲಿದೆ, ಪಾಲಿಸಿದಾರರಿಗೆ ಮೊದಲೇ ಸೂಕ್ತ ಬಡ್ಡಿದರದ ಆಯ್ಕೆ ಇರುತ್ತದೆ ಮತ್ತು ಪಾಲಿಸಿದಾರ ಆಕಸ್ಮಿಕ ಸಾವಿಗೀಡಾದರೆ ಟರ್ಮ್ ಇನ್ಶೂರೆನ್ಸ್ ನಿಯಮಗಳಿಗೆ ಅನುಗುಣವಾಗಿ ಹಣ ಪಾವತಿಯಾಗಲಿದೆ.