IRCTC ವತಿಯಿಂದ 12 ದಿನಗಳ ಕಾಲ ವಿಶೇಷ ತೀರ್ಥಯಾತ್ರೆ! ಮೇ 4 ರಿಂದ ಅಗ್ಗದ ಬೆಲೆಯಲ್ಲಿ ತೀರ್ಥ ಕ್ಷೇತ್ರ ದರ್ಶನ
IRCTC Tour Package :ಈ ರೈಲು 4 ಹವಾನಿಯಂತ್ರಿತ ಕೋಚ್‌ಗಳನ್ನು ಹೊಂದಿದ್ದು, 752 ಪ್ರಯಾಣಿಕ ಸಾಮರ್ಥ್ಯವಿರುವ ಸ್ಲೀಪಿಂಗ್ ಬರ್ತ್‌ಗಳೊಂದಿಗೆ 7 ಕೋಚ್‌ಗಳನ್ನು ಒಳಗೊಂಡಿದೆ.
IRCTC Tour Package : ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ IRCTC ವತಿಯಿಂದ ವಿಶೇಷ 12 ದಿನಗಳ ತೀರ್ಥಯಾತ್ರೆಯನ್ನು ಆಯೋಜಿಸಲಾಗಿದೆ. ಈ ನ ಬಗ್ಗೆ IRCTC ವ್ಯವಸ್ಥಾಪಕ ನಿರ್ದೇಶಕ ಕೆ.ರವಿಕುಮಾರ್ ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಸ್. ಸುಬ್ರಮಣಿ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ವಿಶೇಷ ಭಾರತ್ ಗೌರವ್ ಪ್ರವಾಸೋದ್ಯಮ~ ರೈಲನ್ನು ಪರಿಚಯಿಸಲಾಗಿದೆ.
ಈ ರೈಲು 4 ಹವಾನಿಯಂತ್ರಿತ ಕೋಚ್‌ಗಳನ್ನು ಹೊಂದಿದ್ದು, 752 ಪ್ರಯಾಣಿಕ ಸಾಮರ್ಥ್ಯವಿರುವ ಸ್ಲೀಪಿಂಗ್ ಬರ್ತ್‌ಗಳೊಂದಿಗೆ 7 ಕೋಚ್‌ಗಳನ್ನು ಒಳಗೊಂಡಿದೆ. ದಕ್ಷಿಣ ವಿಭಾಗದ ರೈಲ್ವೆ ವತಿಯಿಂದ ಯಿಂದ ಈ ವಿಶೇಷ ತೀರ್ಥಯಾತ್ರೆ ಟ್ರಿಪ್ ಅನ್ನು ಆಯೋಜಿಸಲಾಗುತ್ತಿದೆ.
ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಬಂಬಾಟ್ ಲಾಟರಿ, ಏಪ್ರಿಲ್ 30 ರಂದು ಖಾತೆಗೆ ಬರಲಿವೆ 1.20 ಲಕ್ಷ ರೂ.ಗಳು!
12 ದಿನಗಳ ತೀರ್ಥಯಾತ್ರೆ :
ಮೇ 4 ರಂದು ಪ್ರಾರಂಭವಾಗುವ ಈ ಪ್ರವಾಸದಲ್ಲಿ 12 ದಿನಗಳ ತೀರ್ಥಯಾತ್ರೆ ನಡೆಸಲಾಗುವುದು. ಪುಣೆ, ಕೋನಾರ್ಕ್, ಕೋಲ್ಕತ್ತಾ, ಗಯಾ, ವಾರಣಾಸಿ, ಅಯೋಧಿ, ಅಲಹಾಬಾದ್ ಮತ್ತು ಇತರ ಸ್ಥಳಗಳನ್ನು ಈ ಯಾತ್ರೆ ಒಳಗೊಂಡಿದೆ. ಈ ತೀರ್ಥಯಾತ್ರೆಯ ಸಮಯದಲ್ಲಿ, ವಸತಿ, ಸ್ಥಳೀಯ ಪ್ರವಾಸಗಳು, ಆಹಾರ, ವೈದ್ಯಕೀಯ ನೆರವು, ಭದ್ರತೆ ಮತ್ತು ಪ್ರವಾಸಿ ಗೈಡ್ ಗಳನ್ನೂ ಒದಗಿಸುಲಾಗುವುದು.
ದರ ಎಷ್ಟು ? :
ಒಬ್ಬ ಪ್ರಯಾಣಿಕನಿಗೆ, ಹವಾನಿಯಂತ್ರಿತ ಕೋಚ್‌ನಲ್ಲಿ ಈ ಪ್ರಯಾಣದ ದರ 35,651ರೂಪಾಯಿ. ಇನ್ನು ಹವಾನಿಯಂತ್ರಿತವಲ್ಲದ ಪ್ರಯಾಣಕ್ಕೆ 20,367 ರೂ. ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಕೇಶುಬ್ ಮಹೀಂದ್ರಾ ವಿಧಿವಶ
ಈ ಯಾತ್ರೆಯಲ್ಲಿ ಭಾಗವಹಿಸಲು ಇಚ್ಚಿಸುವವರು IRCTC ಯ ಅಧಿಕೃತ ವೆಬ್‌ಸೈಟ್ www.irctctourism.comಗೆ ಭೇಟಿ ನೀಡಬಹುದು. ಅಥವಾ ರೈಲ್ವೇ ಸ್ಟೇಷನ್‌ಗಳಾದ ಚೆನ್ನೈ, ಮಧುರೈ, ತಿರುಚ್ಚಿ ಮತ್ತು ಕೊಯಮತ್ತೂರುಗಳನ್ನು ನೇರವಾಗಿ ಟಿಕೆಟ್ ಕಾಯ್ದಿರಿಸಬಹುದು.
ಪ್ರವಾಸಿಗರು ಪ್ರವೇಶಿಸಲು ನಿಲ್ದಾಣಗಳು:
ಈ ರೈಲು ಕೊಚುವೇಲಿ ನಿಲ್ದಾಣದಿಂದ (ಕೇರಳ ರಾಜ್ಯ) ಪ್ರಾರಂಭವಾಗುತ್ತದೆ ಮತ್ತು ತೆಂಕಶಿ, ರಾಜಪಾಳ್ಯಂ, ಶಿವಕಾಶಿ, ವಿರುಧುನಗರ, ಮಧುರೈ, ದಿಂಡಿಗಲ್, ತಿರುಚ್ಚಿ, ತಂಜಾವೂರು, ಮೈಲಾಡುತುರೈ, ಚಿದಂಬರಂ, ವಿಲ್ಲುಪುರಂ, ಚೆಂಗಲ್ಪಟ್ಟು, ತಾಂಬರಂ ಮತ್ತು ಚೆನ್ನೈ ಎಗ್ಮೋರ್‌ನಲ್ಲಿ ಪ್ರಯಾಣಿಕರು ರೈಲು ಹತ್ತಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.