SBI FD Interest Rate: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಮತ್ತೊಮ್ಮೆ ಹೆಚ್ಚಿಸಿದೆ. ಇದರಲ್ಲಿ, 1, 2, 3 ಮತ್ತು 5 ವರ್ಷಗಳ ಅವಧಿಯ ಮೇಲಿನ ಠೇವಣಿಗಳನ್ನು 25 ಬೇಸಿಕ್ ಪಾಯಿಂಟ್ ಹೆಚ್ಚಿಸಲಾಗಿದೆ. ಇದಲ್ಲದೆ, ಎಸ್‌ಬಿಐ ವಿಶೇಷ ಅವಧಿಯ ಠೇವಣಿ ಯೋಜನೆಯನ್ನು ಪ್ರಾರಂಭಿಸಿದೆ, ಇದರಲ್ಲಿ ಗ್ರಾಹಕರು ವರ್ಷಕ್ಕೆ 7.1% ಬಡ್ಡಿ ಲಾಭವನ್ನು ಪಡೆಯಬಹುದು. ಆದರೆ ಯೋಜನೆಯ ಲಾಭ ಪಡೆಯಲು, ಗ್ರಾಹಕರು '400 ದಿನಗಳವರೆಗೆ' ತಮ್ಮ ಹಣವನ್ನು ಠೇವಣಿ ಇರಿಸಬೇಕು. ಈ ಯೋಜನೆಯು 15 ಫೆಬ್ರವರಿ 2023 ರಿಂದ ಅನ್ವಯಿಸುತ್ತದೆ. ಗ್ರಾಹಕರು ಈ ಯೋಜನೆಯ ಲಾಭವನ್ನು 31 ಮಾರ್ಚ್ 2023 ರವರೆಗೆ ಪಡೆಯಬಹುದು.


COMMERCIAL BREAK
SCROLL TO CONTINUE READING

400 ದಿನಗಳ ಯೋಜನೆ: ₹ 5 ಲಕ್ಷ ಠೇವಣಿ ಮೇಲೆ ಎಷ್ಟು ಲಾಭ
SBI ಯ ವಿಶೇಷ 400 ದಿನಗಳ ಠೇವಣಿ ಯೋಜನೆಯು 7.1 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಎಸ್‌ಬಿಐ ಎಫ್‌ಡಿ ಕ್ಯಾಲ್ಕುಲೇಟರ್ ಪ್ರಕಾರ, ನೀವು ಈ ಯೋಜನೆಯಲ್ಲಿ ರೂ 5 ಲಕ್ಷವನ್ನು ಠೇವಣಿ ಇರಿಸಿದರೆ, ನೀವು ಮುಕ್ತಾಯದ ಮೇಲೆ ರೂ 5,40,088 ಪಡೆಯುವಿರಿ. ಅಂದರೆ, ಕೇವಲ 1 ವರ್ಷ 35 ದಿನಗಳಲ್ಲಿ 40,088 ರೂ.ಗಳ ಬಡ್ಡಿಯಿಂದ ಸ್ಥಿರ ಆದಾಯ ನಿಮಗೆ ಸಿಗಲಿದೆ. ಈ ಯೋಜನೆಯ ಪ್ರಯೋಜನವನ್ನು ಬ್ಯಾಂಕಿನ ಯಾವುದೇ ಶಾಖೆಯಿಂದ ಪಡೆದುಕೊಳ್ಳಬಹುದು.


ಇದನ್ನೂ ಓದಿ-ನಿವೃತ್ತಿಯ ಬಳಿಕ ತಿಂಗಳಿಗೆ 70 ಸಾವಿರ ಪೆನ್ಷನ್ ಪಡೆಯಬೇಕೆ? ಇಲ್ಲಿದೆ ಅದ್ಭುತ ಯೋಜನೆ!


1, 2, 3, 5 ವರ್ಷಗಳ FD ಗಳ ಮೇಲಿನ ಬಡ್ಡಿ ಎಷ್ಟು ಹೆಚ್ಚಾಗಿದೆ?
ಎಸ್‌ಬಿಐ ಎಫ್‌ಡಿ ಬಡ್ಡಿ ದರ 2023: ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ರೂ 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಶೇ.0.25 ರಷ್ಟು ಹೆಚ್ಚಿಸಿದೆ. ಎಸ್‌ಬಿಐ 1 ವರ್ಷದ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 6.75 ರಿಂದ ಶೇಕಡಾ 6.80 ಕ್ಕೆ ಹೆಚ್ಚಿಸಿದೆ. ಅಂದರೆ, ಠೇವಣಿ ದರಗಳನ್ನು ಶೇಕಡಾ 0.05 ರಷ್ಟು ಹೆಚ್ಚಿಸಲಾಗಿದೆ. 2 ವರ್ಷದ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.6.75ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಶೇ.0.25ರಷ್ಟು ಬಡ್ಡಿಯನ್ನು ಹೆಚ್ಚಿಸಲಾಗಿದೆ.


ಇದನ್ನೂ ಓದಿ-ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚುವರಿ ಬಡ್ಡಿಯ ಲಾಭ ಪಡೆಯಿರಿ, ಆರ್ಬಿಐ ಹೇಳಿದ್ದೇನು?


ಇದೇ ರೀತಿ ಬ್ಯಾಂಕಿನ 3 ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ.6.25ರಿಂದ ಶೇ.6.50ಕ್ಕೆ ಹೆಚ್ಚಿಸಲಾಗಿದೆ. ಇನ್ನೊಂದೆಡೆ, ಎಸ್‌ಬಿಐ 5 ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 6.25 ರಿಂದ ಶೇಕಡಾ 6.50 ಕ್ಕೆ ಹೆಚ್ಚಿಸಿದೆ. ಅಂದರೆ ಠೇವಣಿ ದರಗಳನ್ನು ಶೇ.0.25ರಷ್ಟು ಹೆಚ್ಚಿಸಲಾಗಿದೆ. ಹೊಸ ದರಗಳು 15 ಫೆಬ್ರವರಿ 2023 ರಿಂದ ಜಾರಿಗೆ ಬಂದಿವೆ.


ಇದನ್ನೂ ಓದಿ-ದೇಶದ ಕೋಟ್ಯಾಂತರ ಸಣ್ಣ ವ್ಯಾಪಾರಿಗಳಿಗೊಂದು ಭಾರಿ ನೆಮ್ಮದಿಯ ಸುದ್ದಿ!


ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ
SBI ಹಿರಿಯ ನಾಗರಿಕರಿಗೆ ಶೇ.0.50% ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಇದೇ ವೇಳೆ, ಹಿರಿಯ ನಾಗರಿಕರು 'ವೀಕೇರ್ ಠೇವಣಿ' ಯೋಜನೆಯಡಿಯಲ್ಲಿ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಠೇವಣಿಗಳ ಮೇಲೆ ಶೇ. 0.50 ರಷ್ಟು ಮತ್ತು ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ. ಅಂದರೆ, ಒಟ್ಟು ಶೇ.1ರಷ್ಟು ಲಾಭವಾಗಲಿದೆ. ಹೀಗಾಗಿ, ಹಿರಿಯ ನಾಗರಿಕರು ಈ ಯೋಜನೆಯಲ್ಲಿ 1 ಲಕ್ಷ ರೂ.ಗಳನ್ನು ಠೇವಣಿ ಮಾಡಿದರೆ, ನಂತರ ಲಾಭವು 1,38,042 ರೂ.ನಿಂದ 1,44,995 ರೂ.ಗೆ ಹೆಚ್ಚಾಗಲಿದೆ. ಈ ರೀತಿಯಾಗಿ, ಹೊಸ ದರಗಳಲ್ಲಿ, ಹಿರಿಯ ನಾಗರಿಕರು 6,953 ರೂ.ಗಳ ಹೆಚ್ಚುವರಿ ಲಾಭವನ್ನು ಪಡೆಯುತ್ತಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.