SBI ಗ್ರಾಹಕರೇ ಗಮನಿಸಿ : ಇಂದು 2 ಗಂಟೆ ಬಂದ್ ಇರುತ್ತೆ ಈ Online ಬ್ಯಾಂಕಿಂಗ್ ಸೇವೆ!
ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್ ಯೋನೊ ಮತ್ತು ಯೋನೊ ಲೈಟ್ ಮತ್ತು ಯುಪಿಐ ಸೇವೆಗಳು
ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್ ಯೋನೊ ಮತ್ತು ಯೋನೊ ಲೈಟ್ ಮತ್ತು ಯುಪಿಐ ಸೇವೆಗಳು ನಿರ್ವಹಣಾ ಕಾರ್ಯದಿಂದಾಗಿ ಇಂದು ಎರಡು ಗಂಟೆಗಳ ಕಾಲ ಲಭ್ಯವಿರುವುದಿಲ್ಲ ಎಂದು ಘೋಷಿಸಿದೆ.
ಡಿಜಿಟಲ್ ಪಾವತಿಮಾಡಲು ಗ್ರಾಹಕರು ಯಾವುದೇ ತೊಂದರೆಯನ್ನು ಎದುರಿಸದಂತೆ ನೋಡಿಕೊಳ್ಳಲು ಈ ವ್ಯವಸ್ಥೆಯನ್ನು ಬ್ಯಾಂಕ್ ನವೀಕರಿಸುತ್ತಿದೆ. ಅದಕ್ಕಾಗಿಯೇ ಗ್ರಾಹಕರು ಎಸ್ ಬಿಐನ ಇಂಟರ್ನೆಟ್ ಬ್ಯಾಂಕಿಂಗ್(SBI Internet Banking) ಅನ್ನು ಎರಡು ಗಂಟೆಗಳ ಕಾಲ ಬಳಸಲು ಸಾಧ್ಯವಾಗುವುದಿಲ್ಲ.
Black tree India : ಪ್ರತಿ ಬಟ್ಟೆಯ ಖರೀದಿಯೊಂದಿಗೆ ಸಿಗಲಿದೆ ಉಚಿತ ಮೊಬೈಲ್, 300 ರೂ ಕ್ಯಾಶ್ ಬ್ಯಾಕ್
ಈ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India) ಟ್ವೀಟರ್ ನಲ್ಲಿ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ. ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ನಾವು ಶ್ರಮಿಸುತ್ತಿರುವುದರಿಂದ ನಮ್ಮ ಗೌರವಾನ್ವಿತ ಗ್ರಾಹಕರು ಸಹಕರಿಸಬೇಕೆಂದು ನಾವು ವಿನಂತಿಸುತ್ತೇವೆ. ನಾವು ಜೂನ್ 17 ರಂದು 00.30 ರಿಂದ 02.30 ಗಂಟೆಯ ನಡುವೆ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ. ಈ ಅವಧಿಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೊ ಆಪ್, ಯೋನೊ ಲೈಟ್ ಮತ್ತು ಯುಪಿಐ ಅಲಭ್ಯವಾಗಿರುತ್ತವೆ. ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಹೇಳಿದೆ.
ಇದನ್ನೂ ಓದಿ : MSMEs: ಕೇವಲ ಪ್ಯಾನ್-ಆಧಾರ್‌ನಲ್ಲಿ ಹೊಸ ಕಂಪನಿ ರಿಜಿಸ್ಟರ್ ಮಾಡಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.