SBI ALERT! ನಾಳೆ 2 ಗಂಟೆಗಳ ಕಾಲ ಬಂದ್ ಇರಲಿದೆ ಈ Online ಬ್ಯಾಂಕಿಂಗ್ ಸೇವೆಗಳು!

ಇಂಟರ್ನೆಟ್ ಬ್ಯಾಂಕಿಂಗ್ ಗುರುವಾರ ಎರಡು ಗಂಟೆಗಳ ಕಾಲ ಲಭ್ಯವಿರುವುದಿಲ್ಲ

Last Updated : Jun 16, 2021, 11:50 AM IST
  • SBI ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು
  • ಇಂಟರ್ನೆಟ್ ಬ್ಯಾಂಕಿಂಗ್ ಗುರುವಾರ ಎರಡು ಗಂಟೆಗಳ ಕಾಲ ಲಭ್ಯವಿರುವುದಿಲ್ಲ
  • ನಾವು ಜೂನ್ 17 ರಂದು ೦೦.30 ರಿಂದ 02.30 ಗಂಟೆಯ
SBI ALERT! ನಾಳೆ 2 ಗಂಟೆಗಳ ಕಾಲ ಬಂದ್ ಇರಲಿದೆ ಈ Online ಬ್ಯಾಂಕಿಂಗ್ ಸೇವೆಗಳು! title=

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್ ಯೋನೊ ಮತ್ತು ಯೋನೊ ಲೈಟ್ ಮತ್ತು ಯುಪಿಐ ಸೇವೆಗಳು ನಿರ್ವಹಣಾ ಕಾರ್ಯದಿಂದಾಗಿ ಗುರುವಾರ ಎರಡು ಗಂಟೆಗಳ ಕಾಲ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.

ಡಿಜಿಟಲ್ ಪಾವತಿ(SBI Digital Transactions) ಮಾಡಲು ಗ್ರಾಹಕರು ಯಾವುದೇ ತೊಂದರೆಯನ್ನು ಎದುರಿಸದಂತೆ ನೋಡಿಕೊಳ್ಳಲು ಈ ವ್ಯವಸ್ಥೆಯನ್ನು ಬ್ಯಾಂಕ್ ನವೀಕರಿಸುತ್ತಿದೆ. ಅದಕ್ಕಾಗಿಯೇ ಗ್ರಾಹಕರು ಎಸ್ ಬಿಐನ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಎರಡು ಗಂಟೆಗಳ ಕಾಲ ಬಳಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಟ್ವೀಟರ್ ನಲ್ಲಿ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ.

ಇದನ್ನೂ ಓದಿ : Corona Impact: ನಗದು ಬಳಕೆಯಲ್ಲಿ ವಿಚಿತ್ರ ಬದಲಾವಣೆ!

ಉತ್ತಮ ಬ್ಯಾಂಕಿಂಗ್(Banking) ಅನುಭವವನ್ನು ಒದಗಿಸಲು ನಾವು ಶ್ರಮಿಸುತ್ತಿರುವುದರಿಂದ ನಮ್ಮ ಗೌರವಾನ್ವಿತ ಗ್ರಾಹಕರು ಸಹಕರಿಸಬೇಕೆಂದು ನಾವು ವಿನಂತಿಸುತ್ತೇವೆ. ನಾವು ಜೂನ್ 17 ರಂದು ೦೦.30 ರಿಂದ 02.30 ಗಂಟೆಯ ನಡುವೆ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ. ಈ ಅವಧಿಯಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಯೋನೊ ಆಪ್, ಯೋನೊ ಲೈಟ್ ಮತ್ತು ಯುಪಿಐ ಅಲಭ್ಯವಾಗಿರುತ್ತವೆ. ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಹೇಳಿದೆ. 

ಇದನ್ನೂ ಓದಿ : 7th Pay Commission : ಸರ್ಕಾರಿ ನೌಕರರ ಮೆಡಿಕಲ್ ಕ್ಲೈಂ ರಿಎಂಬೆಸ್ ಮೆಂಟ್ ಮಿತಿ ಹೆಚ್ಚಳ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News