ಲೋಕಸಭೆ ಚುನಾವಣೆಗೂ Voter ID Card Correction ಮಾಡಿಸಬೇಕೆ ? ಇಲ್ಲಿದೆ ಆನ್‌ಲೈನ್ ಪ್ರಕ್ರಿಯೆಯ ಹಂತ ಹಂತದ ವಿವರ
Voter ID Card Correction : ಮತದಾರರ ಗುರುತಿನ ಚೀಟಿ ಮಾಡಿಸದಿದ್ದರೆ ಅಥವಾ ಅದರಲ್ಲಿ ಯಾವುದೇ ರೀತಿಯ ಕರೆಕ್ಷನ್ ಮಾಡಿಸಬೇಕಿದ್ದರೆ ಸುಲಭ ವಿಧಾನವಿದೆ. ಆನ್‌ಲೈನ್ ಪ್ರಕ್ರಿಯೆಯ ಮೂಲಕವೇ ಈ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಬಹುದು.
Voter ID Card Correction : ಭಾರತದಲ್ಲಿ ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಬಹಳ ಮುಖ್ಯವಾದ ದಾಖಲೆಯಾಗಿದೆ.ಇದನ್ನು ಬಳಸಿಕೊಂಡು ಅನೇಕ ಸರ್ಕಾರಿ ಸೇವೆಗಳ ಲಾಭವನ್ನು ಕೂಡಾ ಪಡೆಯಬಹುದು. 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಅಗತ್ಯ.ನೀವು ಮತದಾರರ ಗುರುತಿನ ಚೀಟಿ ಮಾಡಿಸದಿದ್ದರೆ ಅಥವಾ ಅದರಲ್ಲಿ ಯಾವುದೇ ರೀತಿಯ ಕರೆಕ್ಷನ್ ಮಾಡಿಸಬೇಕಿದ್ದರೆ ಸುಲಭ ವಿಧಾನವಿದೆ. ಇದಕ್ಕಾಗಿ ಯಾವುದೇ ಕಚೇರಿಗೆ ಅಲೆದಾಡಬೇಕಿಲ್ಲ. ಆನ್‌ಲೈನ್ ಪ್ರಕ್ರಿಯೆಯ ಮೂಲಕವೇ ಈ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಬಹುದು.
ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ಅಥವಾ ವಿಳಾಸವನ್ನು ಬದಲಾಯಿಸಲು ಈ ಹಂತಗಳನ್ನು ಅನುಸರಿಸಬೇಕು:
1. ಮೊದಲನೆಯದಾಗಿ, ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ನ (NVSP) ವೆಬ್‌ಸೈಟ್‌ಗೆ ಹೋಗಬೇಕು.
2.ನಿಮ್ಮ ವೋಟರ್ ಐಡಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು.
3. ಲಾಗ್ ಇನ್ ಆದ ನಂತರ, ನೀವು Correction of entries in electoral roll ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
4.ಇದರ ನಂತರ, ನೀವು "Correction in Name" ಅಥವಾ"Correction in Address" ಆಯ್ಕೆಯನ್ನು ಕ್ಲಿಕ್ ಮಾಡಬೇಕು.
5.ಈಗ ನೀವು ನಿಮ್ಮ ಮಾಹಿತಿಯನ್ನು ಫಾರ್ಮ್‌ನಲ್ಲಿ ತುಂಬಬೇಕು.
6.ಫಾರ್ಮ್‌ನಲ್ಲಿ ತುಂಬಿದ ಮಾಹಿತಿಯನ್ನು ಪರಿಶೀಲಿಸಲು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
7.ಅಂತಿಮವಾಗಿ, ಡಿಕ್ಲರೇಶನ್ ಭರ್ತಿ ಮಾಡಿ, ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು.
ಇದನ್ನೂ ಓದಿ : RBI MPC Meeting: ಮಧ್ಯಮ ವರ್ಗದ ಜನರ ಕೈ ಹಿಡಿಯಲಿದೆ RBI : ಮುಂದಿನ ವಾರ ಸಿಗಲಿದೆ ಸಿಹಿ ಸುದ್ದಿ
ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ಅಥವಾ ವಿಳಾಸವನ್ನು ಬದಲಾಯಿಸಲು ಅಗತ್ಯವಿರುವ ದಾಖಲೆಗಳು:
ಹೆಸರನ್ನು ಬದಲಾಯಿಸಲು:
ಆಧಾರ್ ಕಾರ್ಡ್
ಪಾಸ್‌ಪೋರ್ಟ್
ಡ್ರೈವಿಂಗ್ ಲೈಸೆನ್ಸ್
ಪ್ಯಾನ್ ಕಾರ್ಡ್
ವಿಳಾಸ ಬದಲಾಯಿಸಲು:
ಆಧಾರ್ ಕಾರ್ಡ್
ಪಾಸ್‌ಪೋರ್ಟ್
ಡ್ರೈವಿಂಗ್ ಲೈಸೆನ್ಸ್
ರೇಷನ್ ಕಾರ್ಡ್
ವಿದ್ಯುತ್ ಬಿಲ್
ಫೋನ್ ಬಿಲ್
ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ!
ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ಅಥವಾ ವಿಳಾಸವನ್ನು ಬದಲಾಯಿಸಲು ಶುಲ್ಕ:
ಹೆಸರು ಬದಲಾವಣೆಗೆ: ₹100
ವಿಳಾಸ ಬದಲಾವಣೆಗೆ: ₹50
ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ಅಥವಾ ವಿಳಾಸದ ಬದಲಾವಣೆಗೆ ಅರ್ಜಿ ಸಲ್ಲಿಸಿದ ನಂತರ, ರೆಫರೆನ್ಸ್ ಐಡಿಯನ್ನು (Reference ID ) ಸಿಗುತ್ತದೆ. ಈ ರೆಫರೆನ್ಸ್ ಐಡಿಯನ್ನು ಬಳಸಿಕೊಂಡು ಅರ್ಜಿಯ ಸ್ಟೇಟಸ್ ಪರಿಶೀಲಿಸಬಹುದು. ಮತದಾರರ ಗುರುತಿನ ಚೀಟಿಯನ್ನು ಅಪ್ಡೇಟ್ ಮಾಡಲು ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.