ನವದೆಹಲಿ: ಕರೋನಾ ವೈರಸ್ ಸಾಂಕ್ರಾಮಿಕ ಮತ್ತು ನಂತರ ದೇಶದಲ್ಲಿ ಹೇರಲ್ಪಟ್ಟ ಲಾಕ್‌ಡೌನ್‌  ಭಾರತೀಯ ರೈಲ್ವೆಯ ಸೇವೆ ಮೇಲೆ ಬಾರೀ  ಪರಿಣಾಮ ಬೀರಿತ್ತು. ಲಾಕ್ ಡೌನ್ ವೇಳೆ  ಸ್ತಬ್ದಗೊಂಡಿದ್ದ ರೈಲು ಸಂಚಾರ  ಲಾಕ್ ಡೌನ್ ನಂತರ ಮತ್ತೆ ಆರಂಭಗೊಂಡವು.  ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ದೆಶದಲ್ಲಿ ರೈಲು ಸಂಚಾರ ಕಾರ್ಯಾರಂಭ ಮಾಡಿಲ್ಲ.


COMMERCIAL BREAK
SCROLL TO CONTINUE READING

ಎಲ್ಲಾ ರೈಲುಗಳು ಹಳಿಗೆ ಹಿಂತಿರುಗಲು ಇನ್ನೂ 2 ತಿಂಗಳು ಬೇಕು :
ರೈಲ್ವೆ ಪ್ರಯಾಣಿಕರು ಮತ್ತು ಐಆರ್‌ಸಿಟಿಸಿ (IRCTC) ಪಾಲಿಗೆ ಮತ್ತೊಂದು ನಿರಾಶಾದಾಯಕ ಸುದ್ದಿ ಕೇಳಿ ಬರುತ್ತಿದೆ. ಭಾರತೀಯ ರೈಲ್ವೆ (Indian Railway) ಪ್ರಕಾರ, ಎಲ್ಲಾ ರೈಲುಗಳು ಮತ್ತೆ ಹಳಿಗೆ ಹಿಂತಿರುಗಲುಕನಿಷ್ಟ 2 ತಿಂಗಳು ಕಾಲಾವಕಾಶ ತೆಗೆದುಕೊಳ್ಳಬಹುದು. ಹಿರಿಯ ರೈಲ್ವೆ ಅಧಿಕಾರಿ ಪ್ರಕಾರ, ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ  ಕಾರ್ಯಾರಂಭವಾಗಬೇಕಾದರೆ ಮಾರ್ಚ್ ಕೊನೆವರೆಗೆ ಕಾಯಬೇಕು.  ಸಹಜವಾಗಿಯೇ ಇದು IRCTC  ಟಿಕೆಟ್ ಬುಕ್ಕಿಂಗ್ ಮೂಲದ ಗಳಿಕೆಯ ಮೇಲೆ ಪರಿಣಾಮ ಬೀರತ್ತದೆ.


ಇದನ್ನೂ ಓದಿ : Indian Railways : ರೈಲು ಟಿಕೆಟ್‌ಗಳಲ್ಲಿ 10 % ರಿಯಾಯಿತಿ ಲಭ್ಯ! ಹೇಗೆಂದು ತಿಳಿಯಿರಿ


ಪ್ರಸ್ತುತ ಓಡಾಡುತ್ತಿವೆ 65% ರೈಲುಗಳು :
ಪ್ರಸ್ತುತ, ರೈಲ್ವೆ ಎಲ್ಲಾ ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲುಗಳ (Express Trains) ಪೈಕಿ ಕೇವಲ 65% ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ.  ರೈಲ್ವೆ ಪ್ರಕಾರ, ಪ್ರತಿ ತಿಂಗಳು 100-200 ರಷ್ಟು  ರೈಲುಗಳ (Train) ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.


ಇದಲ್ಲದೆ, ದೆಹಲಿ-ಎನ್‌ಸಿಆರ್‌ನಲ್ಲಿ ಸ್ಥಳೀಯ ರೈಲು ಸೇವೆಯನ್ನು ಪುನರಾರಂಭಿಸಲು ರೈಲ್ವೆ ಚಿಂತಿಸುತ್ತಿದೆ. ಮೂಲಗಳ ಪ್ರಕಾರ, ಮುಂದಿನ ತಿಂಗಳಲ್ಲಿ ದೆಹಲಿಯಿಂದ (Delhi) ಹರಿಯಾಣದ   ಸೋನಿಪತ್, ಪಾಲ್ವಾಲ್, ಮಹೇಂದ್ರಘಡ, ಗುರುಗ್ರಾಮ ಮತ್ತು  ರಾಜಸ್ಥಾನದ ಕೆಲ  ಪ್ರದೇಶಗಳಿಗೆ ಲೋಕಲ್ಮತ್ತುಸಬ್ ಅರ್ಬನ್ ರೈಲುಗಳನ್ನು ಆರಂಭಿಸಲಾಗುವುದು.


ಇದನ್ನೂ ಓದಿIRCTC/Indian Railways:ಟ್ರೈನ್ ನಲ್ಲಿ ಸೀಟ್ ಸಿಗಲಿಲ್ಲವೇ? ಸಿಗಲಿದೆ ಬಸ್ ಸೇವೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.