ನವದೆಹಲಿ:  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)  ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ (Union Budget 2022) ಮಂಡಿಸಿದರು. ಬಜೆಟ್ ದಿನದ ಬೆಳಗ್ಗೆಯಿಂದಲೇ ಷೇರುಪೇಟೆ ಉತ್ತಮ ಆರಂಭ ಕಂಡಿತ್ತು. ಬೆಳಗ್ಗಿನ ಅವಧಿಯಲ್ಲಿ ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಕಗಳ ಜಿಗಿತದೊಂದಿಗೆ ಆರಂಭವಾಗಿತ್ತು.


COMMERCIAL BREAK
SCROLL TO CONTINUE READING

59 ಸಾವಿರ ಅಂಕಗಳ ಹತ್ತಿರಕ್ಕೆ ಸಮೀಪಿಸಿದ ಷೇರು ಸೂಚ್ಯಂಕ (Share Market On Budget Day)
ಕೇಂದ್ರ ವಿತ್ತ ಸಚಿವರ ಭಾಷಣದ ವೇಳೆ ಷೇರು ಮಾರುಕಟ್ಟೆ ನಿರಂತರ ಏರಿಳಿತಕ್ಕೆ ಸಾಕ್ಷಿಯಾಗಿದೆ. ಒಂದು ಹೊತ್ತಿನಲ್ಲಿ ಸೆನ್ಸೆಕ್ಸ್ 900ಕ್ಕೂ ಅಧಿಕ ಅಂಕಗಳ ಏರಿಕೆ ಕಂಡಿತ್ತು. ಆದರೆ ದಿನದ ವಹಿವಾಟು ಮುಕ್ತಾಯದ ಹಂತದಲ್ಲಿ ಸೆನ್ಸೆಕ್ಸ್ 848. 40 ಅಂಕಗಳ ಏರಿಕೆಯೊಂದಿಗೆ 58, 862ರ ಮಟ್ಟದಲ್ಲಿ ಮುಕ್ತಾಯ ಕಂಡಿದೆ. ಇನ್ನೊಂದೆಡೆ Nifty 50 ಕೂಡ 237 ಅಂಕಗಳ ಏರಿಕೆಯೊಂದಿಗೆ 17, 576 ರ ಮಟ್ಟಕ್ಕೆ ತಲುಪಿ ತನ್ನ ವಹಿವಾಟು ಅಂತ್ಯಗೊಳಿಸಿದೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.14 ರಷ್ಟು ಹೆಚ್ಚಳ!


ಎರಡು ದಿನಗಳಿಂದ ಹಸಿರು ನಿಶಾನೆಯಲ್ಲಿ ವಹಿವಾಟು ನಡೆಸುತ್ತಿರುವ ಸೆನ್ಸೆಕ್ಸ್ 
ಬಜೆಟ್ ದಿನದ ವಹಿವಾಟಿನಲ್ಲಿ ಮಿಡ್‌ಕ್ಯಾಪ್, ಸ್ಮಾಲ್‌ಕ್ಯಾಪ್ ಷೇರುಗಳಲ್ಲಿ ಹೆಚ್ಚಿನ ಖರೀದಿ ಕಂಡುಬಂದಿದೆ. ಈ ಖರೀದಿಯ ಆಧಾರದ ಮೇಲೆ, ಷೇರು ಮಾರುಕಟ್ಟೆಯು ಎರಡು ದಿನಗಳವರೆಗೆ ಹಸಿರು ನಿಶಾನೆಯೊಂದಿಗೆ ತನ್ನ ದಿನದ ವಹಿವಾಟು ಅಂತ್ಯಗೊಲಿಸುತ್ತಿದೆ. ಸೋಮವಾರವೂ ಸೆನ್ಸೆಕ್ಸ್ 814 ಅಂಕಗಳ ಏರಿಕೆ ಕಂಡು 58 ಸಾವಿರ ದಾಟಿದೆ, ನಿಫ್ಟಿ 17,339ರಲ್ಲಿ ತನ್ನ ವಹಿವಾಟು ಮುಕ್ತಾಯಗೊಳಿಸಿತ್ತು.


ಇದನ್ನೂ ಓದಿ-ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಬಜೆಟ್: ಸಚಿವ ಮುರುಗೇಶ್ ನಿರಾಣಿ


2021ರಲ್ಲಿ ಸೆನ್ಸೆಕ್ಸ್ ಶೇ.5ರಷ್ಟು ಏರಿಕೆ ಕಂಡಿತ್ತು
ಹೂಡಿಕೆದಾರರು ಸಾಮಾನ್ಯವಾಗಿ ಬಜೆಟ್ ದಿನದಂದು ಷೇರು ಮಾರುಕಟ್ಟೆ ಕುಸಿತ ಕಾಣುತ್ತದೆ ಎಂಬ ಪರಿಕಲ್ಪನೆಯನ್ನು ಹೊಂದಿರುತ್ತಾರೆ. ಆದರೆ 2021 ರಿಂದ ಮಾರುಕಟ್ಟೆಯು ಉತ್ತಮ ಬೆಳವಣಿಗೆಯನ್ನು ಕಾಣುತ್ತಿದೆ. 2021 ರಲ್ಲೂ, ಫೆಬ್ರವರಿ 1 ರಂದು ಸೆನ್ಸೆಕ್ಸ್‌ನಲ್ಲಿ ಶೇ.5 ರಷ್ಟು ಜಿಗಿತ ಕಂಡಿತ್ತು. ಈ ಏರಿಳಿತದ ಪ್ರವೃತ್ತಿ ಮುಂದಿನ ಆರು ದಿನಗಳವರೆಗೆ ಮುಂದುವರೆಯಿತು.


ಇದನ್ನೂ ಓದಿ-Budget 2022 : ಕೇಂದ್ರ ಬಜೆಟ್ ನಲ್ಲಿ ಮನೆ ಖರೀದಿದಾರರಿಗೆ ಸಿಹಿ ಸುದ್ದಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.