ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಬಜೆಟ್: ಸಚಿವ ಮುರುಗೇಶ್ ನಿರಾಣಿ

ಈ ಬಾರಿ ‘Ease of doing business 2.0’ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ದೇಶದ ಆರ್ಥಿಕ ಪ್ರಗತಿಗೆ ದಿಕ್ಸೂಚಿ ಆಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಮೆಚ್ಚುಗೆ ವ್ಯಕ್ತಪಡಿಸಿದರು. 

Written by - Zee Kannada News Desk | Last Updated : Feb 1, 2022, 07:52 PM IST
  • ಜನಪ್ರಿಯ ಬಜೆಟ್ ಎನಿಸಿಕೊಳ್ಳಬೇಕೆಂಬ ಹಂಬಲ ತೊರೆದು ದೂರದೃಷ್ಟಿಯ ಬಜೆಟ್‌ ಮಂಡಿಸಲಾಗಿದೆ
  • ‘Ease of doing business 2.0’ ದೇಶದ ಆರ್ಥಿಕ ಪ್ರಗತಿಗೆ ದಿಕ್ಸೂಚಿ ಆಗಲಿದೆ ಎಂದ ಸಚಿವ ಮುರುಗೇಶ್ ನಿರಾಣಿ
  • ದೀರ್ಘಾವಧಿ ಆರ್ಥಿಕ ಅಭಿವೃದ್ಧಿ ಗುರಿ ಹೊಂದಿರುವ ಬಜೆಟ್‌ ನೀಡಿರುವ ನಿರ್ಮಲಾ ಸೀತಾರಾಮನ್ ರಿಗೆ ನಿರಾಣಿ ಅಭಿನಂದನೆ
ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಬಜೆಟ್: ಸಚಿವ ಮುರುಗೇಶ್ ನಿರಾಣಿ title=
'ದೂರದೃಷ್ಟಿಯ ಬಜೆಟ್‌ ಮಂಡಿಸಲಾಗಿದೆ'

ಬೆಂಗಳೂರು: ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಬಜೆಟ್ ಇದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್‌ ನಿರಾಣಿ(Murugesh Nirani) ಹೇಳಿದ್ದಾರೆ. ದೇಶದ ಆರ್ಥಿಕತೆಗೆ ಚೈತನ್ಯ ತುಂಬುವುದರ ಜೊತೆಗೆ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿ ಹೊಂದಿರುವ ಬಜೆಟ್‌ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಅವರನ್ನು ಅಭಿನಂದಿಸಿ ಅವರು ಮಾತನಾಡಿದ್ದಾರೆ.

ಇಂದಿನ ಕೇಂದ್ರ ಬಜೆಟ್‌(Union Budget 2022) ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೊವಿಡ್‌ ನಂತರದ ಆರ್ಥಿಕ ಸುಧಾರಣೆ ಮತ್ತು ಉದ್ಯೋಗ ಸೃಷ್ಟಿ ಇಂದಿನ ತುರ್ತು ಅಗತ್ಯತೆ. ಇಂದಿನ ಬಜೆಟ್‌ ಈ  ಎಲ್ಲಾ ಅಂಶಗಳನ್ನು ಒಳಗೊಂಡಿದೆ.  2022ರಲ್ಲಿ ಆರ್ಥಿಕತೆ ಶೇ.9.2ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಮುಂದಿನ 25 ವರ್ಷದ ಗುರಿಯಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಇದರಿಂದ ಕರ್ನಾಟಕದ ಉದ್ಯಮ  ಕ್ಷೇತ್ರದ ಬೆಳವಣಿಗೆಗೆ ಇನ್ನೂ ಹೆಚ್ಚಿನ ಅನುಕೂಲ ಆಗಲಿದೆ. ದೇಶದ ಒಟ್ಟಾರೆ ವಿದೇಶಿ ಹೂಡಿಕೆಯಲ್ಲಿ ರಾಜ್ಯದ ಪಾಲು ಶೇ.45ರಷ್ಟಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಏರುವ ವಿಶ್ವಾಸ ಇದೆ’ ಎಂದು ನಿರಾಣಿ ತಿಳಿಸಿದರು.

ಇದನ್ನೂ ಓದಿ: ಕೇಂದ್ರದ ಬಜೆಟ್ ಮಂಡನೆ ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ!: ಕಾಂಗ್ರೆಸ್ ಟೀಕೆ

‘ಸುಲಲಿತ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ‘Ease of doing’ ಉದ್ದೇಶದಲ್ಲಿಯೂ ಕೆಲವು ಯೋಜನೆಗಳು ಜಾರಿಯಾಗುತ್ತವೆ. ಏಕಗವಾಕ್ಷಿ ಯೋಜನೆಯಲ್ಲಿ ಜನಕ್ಕೆ ಎಲ್ಲಾ ಸೇವೆ ಅನುಕೂಲವಾಗಲಿದೆ. ಈ ಬಾರಿ ‘Ease of doing business 2.0’ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ದೇಶದ ಆರ್ಥಿಕ ಪ್ರಗತಿಗೆ ದಿಕ್ಸೂಚಿ ಆಗಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ದೇಶದಲ್ಲಿ ‘ಎಲೆಕ್ಟ್ರಿಫೈಡ್ ಇಂಡಿಯಾ’ ಯುಗ ಆರಂಭವಾಗಿದ್ದು, ಪರಿಸರ ಸ್ನೇಹಿ ಇವಿ ವಾಹನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬ್ಯಾಟರಿ ಸ್ವಾಪಿಂಗ್ ಸೌಕರ್ಯ ಕಲ್ಪಿಸುವುದರ ಜೊತೆಗೆ ಬ್ಯಾಟರಿ ಸ್ವ್ಯಾಪಿಂಗ್‌ಗೆ ನೀತಿ ಜಾರಿ ಮಾಡಲಾಗುತ್ತದೆ. ಗ್ರೀನ್ ಪಬ್ಲಿಕ್ ಟ್ರಾನ್ಸ್‌ ಪೋರ್ಟ್ ಉತ್ತೇಜನಕ್ಕಾಗಿ ಯೋಜನೆ ರೂಪಿಸಲಾಗುವುದು ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಇವಿ ಕ್ಷೇತ್ರದಲ್ಲಿ ಇದು ಮಹತ್ವದ ಹೆಜ್ಜೆ ಆಗಲಿದ್ದು, ಕರ್ನಾಟಕ(Karnataka)ವು  ಮುಂದಿನ ‘ಪರಿಸರ ಸ್ನೇಹಿ ಕ್ಯಾಪಿಟಲ್‌’ ಆಗುವುದರಲ್ಲಿ ಸಂದೇಹವಿಲ್ಲ’ ಎಂದು ಹೇಳಿದರು.    

ಇದನ್ನೂ ಓದಿ: ಆಡಳಿತದಲ್ಲಿ ಆಧುನಿಕತೆ ತರುವ, ಆರ್ಥಿಕತೆ ಸುಧಾರಣೆ ಮಾಡುವ ಬಜೆಟ್: ಸಿಎಂ ಬೊಮ್ಮಾಯಿ

ಜನಪ್ರಿಯ ಬಜೆಟ್ ಎನ್ನಿಸಿಕೊಳ್ಳುವ ಹಂಬಲವಿಲ್ಲ

‘ದೇಶದ ಜನರಿಗೆ ಅನುಕೂಲವಾಗುವ ಅದ್ಭುತ ಬಜೆಟ್ ನೀಡಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲು ಬಯಸುತ್ತೇನೆ. ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೂ ಮೋದಿ ಸರ್ಕಾರ(Central Government) ಯಾವುದೇ ಕೊಡುಗೆ ನೀಡಿಲ್ಲ. ಜನಪ್ರಿಯ ಬಜೆಟ್ ಎನಿಸಿಕೊಳ್ಳಬೇಕೆಂಬ ಹಂಬಲ ತೊರೆದು, ದೂರದೃಷ್ಟಿಯ ಬಜೆಟ್‌ ಮಂಡಿಸಲಾಗಿದೆ’ ಎಂದು ಸಚಿವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News