Stock market: ಮೊದಲ ಬಾರಿಗೆ 73,000 ಗಡಿ ದಾಟಿದ ಸೆನ್ಸೆಕ್ಸ್, 22,000 ಗಡಿ ದಾಟಿದ ನಿಫ್ಟಿ!
Stock Market Updates: ಇಂಟ್ರಾ ಡೇನಲ್ಲಿ ಪ್ರಮುಖ ಷೇರುಗಳಾದ IRFC ಶೇ. 14.59, ವಿಪ್ರೋ ಶೇ. 6.94, ರೈಲ್ ವಿಕಾಸ್ ನಿಗಮ ಶೇ. 8.98 ಮತ್ತು IREDA ಶೇ. 9.98 ರಷ್ಟು ಏರಿಕೆ ಕಾಣುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟವು.
ಮುಂಬೈ: ಭಾರತೀಯ ಷೇರುಮಾರುಕಟ್ಟೆ ಸೋಮವಾರ ಹೊಸದೊಂದು ದಾಖಲೆಗೆ ಸಾಕ್ಷಿಯಾಗಿದ್ದು, ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಹೌದು, ಮಹತ್ವದ ಬೆಳವಣಿಗೆಯಲ್ಲಿ ಸೋಮವಾರದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ.
ಸೆನ್ಸೆಕ್ಸ್ ಮೊದಲ ಬಾರಿಗೆ 73,000 ಗಡಿ ದಾಟಿದರೆ, ನಿಫ್ಟಿ 22,000ರ ಮಟ್ಟವನ್ನು ದಾಟಿದೆ. ಆರಂಭಿಕ ವಹಿವಾಟಿನಲ್ಲಿ 30ಕ್ಕೂ ಹೆಚ್ಚು ಷೇರುಗಳ BSE ಸೆನ್ಸೆಕ್ಸ್ 650.91 (0.90) ಪಾಯಿಂಟ್ ಜಿಗಿದು ಸಾರ್ವಕಾಲಿಕ ಗರಿಷ್ಠ 73219.36ಕ್ಕೆ ತಲುಪಿತು.
ಇದನ್ನೂ ಓದಿ: ಸಂಕ್ರಾಂತಿ ವೇಳೆ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ: ಇದೇ ತಿಂಗಳು ವೇತನ ಪರಿಷ್ಕರಣೆ ಖಚಿತ !ಪಿಂಚಣಿ ದಾರರಿಗೂ ಲಾಭ !
ಅದೇ ರೀತಿ ನಿಫ್ಟಿ ಕೂಡ 22,000ರ ಮೈಲಿಗಲ್ಲು ದಾಟಿದೆ. 176.90 (0.81) ಪಾಯಿಂಟ್‍ನಷ್ಟು ಏರಿಕೆ ಕಂಡ ನಿಫ್ಟಿ 22071.40ಕ್ಕೆ ತುಲುಪಿತು. ಟೆಕ್ ಮಹೀಂದ್ರಾ, HCL ಟೆಕ್ನಾಲಜೀಸ್, ಇನ್ಫೋಸಿಸ್, TCS, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಹಲವು ಕಂಪನಿಗಳು ಲಾಭ ಗಳಿಸಿದವು.
ನಿಫ್ಟಿ ಬ್ಯಾಂಕ್ 360 (0.75) ಅಂಕ ಏರಿಕೆ ಕಂಡಿದ್ದು, 48069.80 ತಲುಪಿದೆ. ಅದೇ ರೀತಿ ನಿಫ್ಟಿ ಐಟಿ 719.90 (1.97) ಅಂಕ ಏರಿಕೆ ಕಂಡಿದ್ದು, 37241.60 ತಲುಪಿತು. ಅದೇ ರೀತಿ S&P BSE Smallcap 122.48(0.28) ಅಂಕಗಳಷ್ಟು ಏರಿಕೆ ದಾಖಲಿಸಿದ್ದು, 44626.18 ತಲುಪಿದೆ.
ಇದನ್ನೂ ಓದಿ: ಸಂಕ್ರಾಂತಿ ದಿನದಂದು ಚಿನ್ನದ ದರ ತಿಳಿಯಬೇಕೆ? ನಿಮ್ಮ ನಗರದ ಬೆಲೆ ಪರಶೀಲಿಸಿ!
ಇಂಟ್ರಾ ಡೇನಲ್ಲಿ ಪ್ರಮುಖ ಷೇರುಗಳಾದ IRFC ಶೇ. 14.59, ವಿಪ್ರೋ ಶೇ. 6.94, ರೈಲ್ ವಿಕಾಸ್ ನಿಗಮ ಶೇ. 8.98 ಮತ್ತು IREDA ಶೇ. 9.98 ರಷ್ಟು ಏರಿಕೆ ಕಾಣುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟವು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.