ರೇಶನ್ ಕಾರ್ಡ್ ನಲ್ಲಿ ಡಿಲೀಟ್ ಆದ ಹೆಸರನ್ನು ಮತ್ತೆ ಸೇರಿಸಿಕೊಳ್ಳುವ ಸರಳ ಪ್ರಕ್ರಿಯೆ ಇಲ್ಲಿದೆ !

Ration card Latest news : ರೇಷನ್ ಕಾರ್ಡ್‌ನಿಂದ ಹೆಸರು ಡಿಲೀಟ್ ಆಗಿದ್ದರೆ, ಮತ್ತೆ ಕಾರ್ಡ್ ನಲ್ಲಿ ಹೆಸರು ಸೇರಿಸುವ ಪ್ರಕ್ರಿಯೆ ಬಹಳ ಸರಳ. ಈ ಕೆಲಸಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಆನ್‌ಲೈನ್ ಮೂಲಕ ನಿಮ್ಮ ಹೆಸರನ್ನು ಮತ್ತೆ ಸೇರಿಸುವ ಕೆಲಸವನ್ನು ಬಹಳ ಸುಲಭವಾಗಿ ಮಾಡಬಹುದು.   

Written by - Ranjitha R K | Last Updated : Jan 15, 2024, 10:06 AM IST
  • ಪಡಿತರ ಚೀಟಿದಾರರಿಗೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತಲೇ ಇದೆ.
  • ಸರ್ಕಾರವು ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತದೆ
  • ಈ ಕೆಲಸಕ್ಕೆ ಈ ದಾಖಲೆಗಳ ಅಗತ್ಯವಿದೆ
ರೇಶನ್ ಕಾರ್ಡ್ ನಲ್ಲಿ ಡಿಲೀಟ್ ಆದ ಹೆಸರನ್ನು ಮತ್ತೆ ಸೇರಿಸಿಕೊಳ್ಳುವ ಸರಳ ಪ್ರಕ್ರಿಯೆ ಇಲ್ಲಿದೆ ! title=

ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡಿತರ ಚೀಟಿದಾರರಿಗೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತಲೇ ಇದೆ. ಇದರಿಂದಾಗಿ ಪಡಿತರ ಚೀಟಿದಾರರಿಗೆ ಬಂಪರ್ ಪ್ರಯೋಜನಗಳು ಸಿಗುತ್ತಿದೆ. ರೇಶನ್ ಕಾರ್ಡ್ ಮೂಲಕ ಸರ್ಕಾರವು ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತದೆ. ನೀವು ಬಡ ವರ್ಗಕ್ಕೆ ಸೇರಿದವರಾಗಿದ್ದು, ನಿಮ್ಮ ಹೆಸರನ್ನು ಪಡಿತರ ಚೀಟಿ ಪಟ್ಟಿಯಿಂದ ತೆಗೆದುಹಾಕಿದ್ದರೆ  ಅಥವಾ ನಿಮ್ಮ ಹೆಸರು ರೇಶನ್ ಕಾರ್ಡ್ ನಿಂದ ಡಿಲೀಟ್ ಆಗಿದ್ದರೆ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಆದರೆ ಇನ್ನು ಮುಂದೆ ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಒಂದು ವೇಳೆ ನಿಮ್ಮ ಹೆಸರು ಕಾರ್ಡ್ ನಿಂದ ಡಿಲೀಟ್ ಆಗಿದ್ದರೆ ಮತ್ತೆ ನಿಮ್ಮ ಹೆಸರನ್ನು ಪಡಿತರ ಚೀಟಿಗೆ ಸೇರಿಸುವ ಪ್ರಕ್ರಿಯೆ ಬಹಳ ಸುಲಭ. ಈ ಕೆಲಸಕಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವೂ ಇರುವುದಿಲ್ಲ. ಕುಳಿತ ಜಾಗದಿಂದಲೇ ಈ ಕೆಲಸವನ್ನು ಮಾಡಿ ಮುಗಿಸಬಹುದು.  

ಇದನ್ನೂ ಓದಿ : Good News: ನಿಮ್ಮ ಬಳಿಯೂ ಎಲ್ಐಸಿ ಪಾಲಸಿ ಅಥವಾ ಷೇರುಗಳಿವೆಯಾ? ಶೀಘ್ರದಲ್ಲೇ ಸಿಗಲಿದೆ ಭಾರಿ ಧನಲಾಭ!

ಈ ದಾಖಲೆಗಳ ಅಗತ್ಯವಿದೆ : 
ಪಡಿತರ ಚೀಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕಾದರೆ ಕೆಲವು ಪ್ರಮುಖ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪಡಿತರ ಚೀಟಿ
ಆಧಾರ್ ಕಾರ್ಡ್
ಇತರೆ ಗುರುತಿನ ಚೀಟಿಗಳು (ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ವೋಟರ್ ಐಡಿ)

ಆನ್‌ಲೈನ್ ಪ್ರಕ್ರಿಯೆ ಹೀಗಿದೆ: 
1.ಇದಕ್ಕಾಗಿ ನೀವು ಆಹಾರ ಮತ್ತು ಸರಬರಾಜು ಇಲಾಖೆಯ ವೆಬ್‌ಸೈಟ್ https://epds.nic.in/ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
2.ಇದರ ನಂತರ ನೀವು ಮುಖಪುಟದಲ್ಲಿ Ration Card Correction ಆಯ್ಕೆ ಕಾಣಿಸುತ್ತದೆ. ಇದರ ಮೇಲೆ ಕ್ಲಿಕ್ ಮಾಡಿ.
3. ಇದರ ನಂತರ ಹೊಸ ಪುಟವು ಸುಲಭವಾಗಿ ತೆರೆಯುತ್ತದೆ. ಅದರಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
4.ಇದರ ನಂತರ ನೀವು "Search" ಬಟನ್ ಅನ್ನು ಕ್ಲಿಕ್ ಮಾಡಬೇಕು.
5. ನಿಮ್ಮ ಪಡಿತರ ಚೀಟಿಯ ಮಾಹಿತಿಯು ಪರದೆಯ ಮೇಲೆ ಕಾಣಿಸುತ್ತದೆ.
6. ಇದರೊಂದಿಗೆ, ಬದಲಾಯಿಸಬೇಕಾದ ಮಾಹಿತಿಯನ್ನು ನವೀಕರಿಸಬೇಕಾಗುತ್ತದೆ.
7. ಎಲ್ಲಾ ಮಾಹಿತಿಯನ್ನು ಬದಲಾಯಿಸಿದ ನಂತರ ನೀವು "Submit" ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
8. ಇದರ ನಂತರ ನೀವು ಆನ್‌ಲೈನ್ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬೇಕು.

ಇದನ್ನೂ ಓದಿ Union Budget 2024: ನಿಮ್ಮ ಕೈಯಲ್ಲಿ ಅಧಿಕ ಹಣ ಉಳಿಸಲು, ವಿತ್ತ ಸಚಿವೆ ಸೀತಾರಾಮನ್ ಅವರಿಂದ ಈ ಘೋಷಣೆ ಸಾಧ್ಯತೆ!

ನಂತರ ನೀವು ನಿಮ್ಮ ಆನ್‌ಲೈನ್ ಅಪ್ಲಿಕೇಶನ್‌ನ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.ಇದಕ್ಕಾಗಿ ಆಹಾರ ಮತ್ತು ಸರಬರಾಜು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್ಲಿಕೇಶನ್ ಸ್ಟೇಟಸ್ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ನಿಮ್ಮ ಪಡಿತರ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ನೀವು  ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News