Stock Market Today: Corona ಹೊಡೆತಕ್ಕೆ Dalal Street ತತ್ತರ, 8 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು
Stock Market Today: ಇಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಹುದೊಡ್ಡ ಕುಸಿತ ಕಂಡುಬಂದಿದೆ. ಹೌದು, ಇಂದು ದಿನದಾಂತ್ಯದ ವಹಿವಾಟಿನ ಬಳಿಕ ಸೆನ್ಸೆಕ್ಸ್ (BSE Sensex) ಸುಮಾರು 1707 ಪಾಯಿಂಟ್ ಅಥವಾ ಶೇ. 3.44 ಕುಸಿತ ಕಂಡಿದೆ. ಈ ಕುಸಿತದ ನಂತರ, ಸೆನ್ಸೆಕ್ಸ್ 47,883.38 ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
ನವದೆಹಲಿ: Stock Market Today - ದೇಶಾದ್ಯಂತ ವೇಗವಾಗಿ ಹೆಚ್ಚಾಗುತ್ತಿರುವ ಕರೋನಾ ಪ್ರಕರಣಗಳಿಂದಾಗಿ, ಕೆಲವು ನಗರಗಳಲ್ಲಿ ಲಾಕ್‌ಡೌನ್ ಆಗುವ ಸಾಧ್ಯತೆಯಿದೆ,. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಇಂದು ದೊಡ್ಡ ಕುಸಿತ ಕಂಡುಬಂದಿದೆ. ಹೌದು, ಇಂದು ದಿನದಾಂತ್ಯದ ವಹಿವಾಟಿನ ಬಳಿಕ ಸೆನ್ಸೆಕ್ಸ್ (BSE Sensex) ಸುಮಾರು 1707 ಪಾಯಿಂಟ್ ಅಥವಾ ಶೇ. 3.44 ಕುಸಿತ ಕಂಡಿದೆ. ಈ ಕುಸಿತದ ನಂತರ, ಸೆನ್ಸೆಕ್ಸ್ 47,883.38 ಮಟ್ಟದಲ್ಲಿ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ. ಇನ್ನೊಂದೆಡೆ ನಿಫ್ಟಿ ಸೂಚ್ಯಂಕ (NSE Nifty) ಕೂಡ 524.05 ಪಾಯಿಂಟ್ ಗಳು ಅಥವಾ ಶೇ 3.53 ರಷ್ಟು ಕುಸಿತ ಕಂಡು 14,310.80 ಮಟ್ಟದಲ್ಲಿ ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ.
Corona Impact - ಇಂದಿನ ಸಂಪೂರ್ಣ ದಿನದ ವಹಿವಾಟಿನಲ್ಲಿ ಹೂಡಿಕೆದಾರರು ಕೇವಲ ಒಂದು ಒಂದು ದಿನಗಳಲಿ ಸುಮಾರು 8 ಲಕ್ಷ ರೂ. ಕಳೆದುಕೊಂಡಿದ್ದಾರೆ. ಬ್ಯಾಂಕಿಂಗ್ ಹಾಗೂ ಫೈನಾನ್ಸಿಯಲ್ ಷೇರುಗಳ ಮಾರಾಟ ಇಂದಿನ ವಹಿವಾಟಿನಲ್ಲಿ ಅತಿ ಹೆಚ್ಚಾಗಿತ್ತು ಎಂಬುದು ಇಲ್ಲಿ ಗಮನಾರ್ಹ.
ವೇಗ ಪಡೆದುಕೊಂಡ ಷೇರುಗಳು
ಸೆನ್ಸೆಕ್ಸ್ ನ ಟಾಪ್ 30 ಷೇರುಗಳ ಕುರಿತು ಹೇಳುವುದಾದರೆ, ಡಾ.ರೆಡ್ಡಿಸ್ ಹೊರತು ಪಡಿಸಿ ಉಳಿದ ಎಲ್ಲಾ ಷೇರುಗಳು ಕೆಂಪು ನಿಶಾನೆಯಲ್ಲಿ ತನ್ನ ವಹಿವಾಟನ್ನು ನಡೆಸಿವೆ. ಡಾ. ರೆಡ್ಡಿಸ್ ಶೇ.4 ರಷ್ಟು ಏರಿಕೆಯೊಂದಿಗೆ ಹಸಿರು ನಿಶಾನೆಯೊಂದಿಗೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
ಇದನ್ನೂ ಓದಿ-SBI Online FD Fraud : ಪತ್ತೆಯಾಗಿದೆ ಸೈಬರ್ ಕಳ್ಳರ ಹೊಸ ವಂಚನೆ, ಒಂದೇ ಒಂದು ತಪ್ಪಿನಿಂದ ಆಗಲಿದೆ ಎಫ್‌ಡಿ ಖಾತೆ ಖಾಲಿ
ಮಾರಾಟಗೊಂಡ ಸ್ಟಾಕ್ಸ್
ಇದಲ್ಲದೆ ಕುಸಿತ ಕಂಡ ಷೇರುಗಳ ಪಟ್ಟಿಯಲ್ಲಿ ಇಂಡಸ್ ಇಂಡ ಬ್ಯಾಂಕ್ ಎಲ್ಲಕ್ಕಿಂತ ಮುಂದಿತ್ತು. ಈ ಬ್ಯಾಂಕಿನ ಷೇರುಗಳ ಬೆಲೆಯಲ್ಲಿ ಶೇ.8 ರಷ್ಟು ಇಳಿಕೆಯನ್ನು ಗಮನಿಸಲಾಗಿದೆ. ಇದಲ್ಲದೆ ಬಜಾಜ್ ಫೈನಾನ್ಸ್, SBI, ONGC, TITAN, ಆಕ್ಸಿಸ್ ಬ್ಯಾಂಕ್, ICICI ಬ್ಯಾಂಕ್, HDFC, ITC, RELIANCE, TCS, Infosys ಹಾಗೂ Tech Mahindra ಈ ಎಲ್ಲ ಷೇರುಗಳಲ್ಲಿ ಬಿಕವಾಲಿ ಕಂಡುಬಂದಿದೆ.
ಇದನ್ನೂ ಓದಿ-PAN-Aadhaar ಲಿಂಕ್ ಆಗಿಲ್ಲವಾದರೆ ತಕ್ಷಣ ಮಾಡಿಕೊಳ್ಳಿ.. ಇಲ್ಲವಾದರೆ ಬೀಳಲಿದೆ ದಂಡ..!
Sectorial Index ನಲ್ಲಿಯೂ ಮಾರಾಟ
ಸೇಕ್ಟೊರಿಯಲ್ ಇಂಡೆಕ್ಸ್ ಕುರಿತು ಹೇಳುವುದಾದರೆ, ಎಲ್ಲಾ ಕ್ಷೇತ್ರಗಳಲ್ಲಿ ಕುಸಿತ ಕಂಡುಬಂದಿದೆ. ಇಂದಿನ ವಹಿವಾಟಿನಲ್ಲಿ ಆಟೋ, ಬ್ಯಾಂಕ್ ನಿಫ್ಟಿ, ಕ್ಯಾಪಿಟಲ್ ಗೂಡ್ಸ್, ಕನ್ಸೂಮರ್ ಡ್ಯೂರೆಬಲ್ಸ್, FMCG, ಮೆಟಲ್ ಆಯಿಲ್ ಅಂಡ್ ಗ್ಯಾಸ್ ಹಾಗೂ ಟೆಕ್ ಸೆಕ್ಟರ್ ಗಳು ಕೆಂಪು ನಿಶಾನೆಯಲ್ಲಿ ತನ್ನ ವಹಿವಾಟನ್ನು ನಡೆಸಿವೆ.
ಇದನ್ನೂ ಓದಿ-Public Provident Fund: ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ, 26 ಲಕ್ಷ ರೂ. ಗಳಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.