Stock Market Update: ಸತತ ಎರಡನೇ ದಿನವಾದ ಇಂದೂ ಕೂಡ ಷೇರುಪೇಟೆ ವಹಿವಾಟು ನಷ್ಟದೊಂದಿಗೆ ಅಂತ್ಯಕಂಡಿದೆ. ಲಾಭದ ಬುಕಿಂಗ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದ ಕಾರಣ ಕಾರಣ ಸೆನ್ಸೆಕ್ಸ್ 63 ಸಾವಿರಕ್ಕಿಂತ ಕಡಿಮೆ ಅಂಕಗಳಿಗೆ ಬಂದು ತಲುಪಿದೆ. ವಾರದ ಕೊನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 259 ಅಂಶಗಳ ಕುಸಿತದೊಂದಿಗೆ 62979 ಅಂಗಕಗಳಿಗೆ ತನ್ನ ವಹಿವಾಟನ್ನು ನಿಲ್ಲಿಸಿದೆ, ಇನ್ನೊಂದೆಡೆ ನಿಫ್ಟಿ ಕೂಡ 18665 ಕ್ಕೆ ತನ್ನ ದಿನದ ವಹಿವಾಟನ್ನು ನಿಲ್ಲಿಸಿದೆ. ಟಾಪ್-30 ಸೆನ್ಸೆಕ್ಸ್‌ನಲ್ಲಿ, 7 ಷೇರುಗಳು ಲಾಭದೊಂದಿಗೆ ಮತ್ತು 23 ನಷ್ಟದೊಂದಿಗೆ ಮುಕ್ತಾಯ ಕಂಡಿವೆ. ಇಂಡಸ್‌ಇಂಡ್ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ಏಷ್ಯನ್ ಪೇಂಟ್ಸ್ ವೇಗವನ್ನು ಪಡೆದುಕೊಂಡರೆ. ಪವರ್‌ಗ್ರಿಡ್, ಟಾಟಾ ಮೋಟಾರ್ಸ್ ಮತ್ತು ಸ್ಟೇಟ್ ಬ್ಯಾಂಕ್ ಷೇರುಗಳು ನಷ್ಟದೊಂದಿಗೆ ಮುಕ್ತಾಯ ಕಂಡಿವೆ. ಇಂದಿನ ಅವನತಿಯಲ್ಲಿ ಆಟೋ ಮತ್ತು ಲೋಹಗಳು ಪ್ರಮುಖ ಕೊಡುಗೆಯನ್ನು ನೀಡಿವೆ. ಪಿಎಸ್‌ಯು ಬ್ಯಾಂಕ್ ಮತ್ತು ಆಯಿಲ್ ಮತ್ತು ಗ್ಯಾಸ್‌ನಲ್ಲಿಯೂ ದೊಡ್ಡ ಕುಸಿತ ದಾಖಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Petrol-Diesel Price: 4 ರಿಂದ 5 ರೂ. ಅಗ್ಗವಾಗಲಿದೆ ಪೆಟ್ರೋಲ್ ಡೀಸೆಲ್!ತೈಲ ಕಂಪನಿಗಳಿಂದ ಘೋಷಣೆ ಯಾವಾಗ?

ಮಿಡ್ ಕ್ಯಾಪ್ ಷೇರುಗಳಲ್ಲಿ ಸತತ ಎರಡನೇ ದಿನವೂ ಭಾರಿ ಕುಸಿತ ಕಂಡುಬಂದಿದೆ. ನಿಫ್ಟಿಯ ಮಿಡ್ ಕ್ಯಾಪ್ ಸೂಚ್ಯಂಕವು 435 ಅಂಕಗಳ ಕುಸಿತದೊಂದಿಗೆ 34,800 ಕ್ಕೆ ಬಂದು ತಲುಪಿದೆ. ಸ್ಮಾಲ್ ಕ್ಯಾಪ್ ಸೂಚ್ಯಂಕ ಕೂಡ 126 ಪಾಯಿಂಟ್ ಅಥವಾ ಶೇ.1.17 ರಷ್ಟು ಕುಸಿತ ಕಂಡಿದೆ, ನಿಫ್ಟಿಯ 50 ಷೇರುಗಳಲ್ಲಿ 10 ಷೇರುಗಳು ಉತ್ಕರ್ಷದೊಂದಿಗೆ ಮತ್ತು 40 ಕುಸಿತದೊಂದಿಗೆ ವಹಿವಾಟನ್ನು ನಿಲ್ಲಿಸಿವೆ. 


ಇದನ್ನೂ ಓದಿ-Finance Ministry: ಸರ್ಕಾರಿ ನೌಕರರಿಗೆ ಕನಿಷ್ಠ ಪಿಂಚಣಿ ಯೋಜನೆ ವರದಿಗಳನ್ನು ತಳ್ಳಿ ಹಾಕಿದ ಕೇಂದ್ರ ಹಣಕಾಸು ಸಚಿವಾಲಯ ಹೇಳಿದ್ದೇನು?

ಹೂಡಿಕೆದಾರರಿಗೆ 3 ಲಕ್ಷ ಕೋಟಿ ರೂ.ಗಳ ನಷ್ಟ
ಸತತ ಎರಡನೇ ದಿನವೂ ಷೇರುಪೇಟೆಯಲ್ಲಿ ಭಾರಿ ಕುಸಿತದಿಂದಾಗಿ ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ. ಗುರುವಾರದಂದು ಬಿಎಸ್‌ಇಯ ಮಾರುಕಟ್ಟೆ ಮೌಲ್ಯವು  292.30 ಲಕ್ಷ ಕೋಟಿ ರೂಗಳಷ್ಟಿತ್ತು. ಅದು ಇಂದಿನ ದಿನದಾಂತ್ಯಕ್ಕೆ 289.45 ಲಕ್ಷ ಕೋಟಿ ರೂಪಾಯಿಗಳಿಗೆ ಬಂದು ತಲುಪಿದೆ. ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ 2.85 ಲಕ್ಷ ಕೋಟಿ ರೂಪಾಯಿ ನಷ್ಟ ಕಂಡುಬಂದಿದೆ, ಕಳೆದ ಎರಡು ದಿನಗಳ ಅಂಕಿಅಂಶಗಳನ್ನು ಗಮನಿಸಿದರೆ ಎರಡು ದಿನಗಳಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.