Stock Market Update: ಎಲ್ಲಾ ಕಡೆಗಳಿಂದ ಮಾರಾಟದ ಹಿನ್ನೆಲೆ 285 ಅಂಕಗಳಿಂದ ಕುಸಿದ ಸೆನ್ಸೆಕ್ಸ್, ನಿಫ್ಟಿಯಲ್ಲಿಯೂ ಕೂಡ 86 ಅಂಕಗಳ ಕುಸಿತ

Stock Market Update: ನಾಲ್ಕೂ ಕಡೆಗಳಿಂದ ನಡೆದ ಭಾರಿ ಬಿಕವಾಲಿಯ ಹಿನ್ನೆಲೆ ಇಂದು ಮುಂಬೈ ಷೇರು ಮಾರುಕಟ್ಟೆ 285 ಅಂಕಗಳ ಕುಸಿತ ದಾಖಲಿಸಿದೆ. ಮಿಡ್ ಕ್ಯಾಪ್ ಇಂಡೆಕ್ಸ್ 380 ಅಂಕಗಳ ಕುಸಿತದ ಜೊತೆಗೆ 35,235 ಅಂಕಗಳ ಮೇಲೆ ತನ್ನ ದಿನದ ವಹಿವಾಟನ್ನು ನಿಲ್ಲಿಸಿದೆ.   

Written by - Nitin Tabib | Last Updated : Jun 22, 2023, 05:38 PM IST
  • ಇಂದಿನ ವ್ಯವಹಾರದಲ್ಲಿ, ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಮತ್ತು ಸ್ಮಾಲ್ ಕ್ಯಾಪ್‌ನಲ್ಲಿಯೂ ದೊಡ್ಡ ಕುಸಿತ ಕಂಡುಬಂದಿದೆ.
  • ಮಿಡ್ ಕ್ಯಾಪ್ ಸೂಚ್ಯಂಕವು 380 ಅಂಶಗಳ ಕುಸಿತದೊಂದಿಗೆ 35,235 ಅಂಶಗಳಲ್ಲಿ ತನ್ನ ವಹಿವಾಟನ್ನು ನಿಲ್ಲಿಸಿದೆ.
  • 30 ಸೆನ್ಸೆಕ್ಸ್ ಷೇರುಗಳಲ್ಲಿ, 10 ವೇಗ ಪಡೆದುಕೊಂಡು ಅಂತ್ಯ ಕಂಡರೆ ಮತ್ತು 20 ಕುಸಿತ ದಾಖಲಿಸಿ ದಿನವನ್ನು ಮುಗಿಸಿವೆ.
  • ನಿಫ್ಟಿಯ 50 ಷೇರುಗಳ ಪೈಕಿ 11 ಷೇರುಗಳು ಲಾಭದೊಂದಿಗೆ ಮತ್ತು 39 ಷೇರುಗಳು ಕೆಂಪು ಅಂಕಗಳಲ್ಲಿ ಮುಕ್ತಾಯ ಕಂಡಿವೆ.
Stock Market Update: ಎಲ್ಲಾ ಕಡೆಗಳಿಂದ ಮಾರಾಟದ ಹಿನ್ನೆಲೆ 285 ಅಂಕಗಳಿಂದ ಕುಸಿದ ಸೆನ್ಸೆಕ್ಸ್, ನಿಫ್ಟಿಯಲ್ಲಿಯೂ ಕೂಡ 86 ಅಂಕಗಳ ಕುಸಿತ title=

BSE-Nifty Updates: ಎರಡು ದಿನಗಳ ಭರ್ಜರಿ ವಹಿವಾಟಿನ ಬಳಿಕ ಇಂದು ಭಾರತೀಯ ಷೇರು ಮಾರುಕಟ್ಟೆ ಮತ್ತೆ ಲಾಭದ ಬುಕಿಂಗ್‌ನಿಂದಾಗಿ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಸರ್ವತೋಮುಖ ಮಾರಾಟ ಕಂಡು ಬಂದಿದೆ. ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಷೇರುಗಳಲ್ಲಿ ದೊಡ್ಡ ಕುಸಿತ ಕಂಡುಬಂದಿದೆ. ಇಂದಿನ ವಹಿವಾಟಿನ ಅಂತ್ಯಕ್ಕೆ ಬಿಎಸ್ ಇ ಸೆನ್ಸೆಕ್ಸ್ 285 ಅಂಕಗಳಷ್ಟು  ಕುಸಿದು 63,238 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಕೂಡ 86 ಅಂಕಗಳ ಕುಸಿತದೊಂದಿಗೆ 18,771ಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ. ಇಂದು, ಮಾರುಕಟ್ಟೆಯಲ್ಲಿನ ಈ ಕುಸಿತದಿಂದಾಗಿ, ಹೂಡಿಕೆದಾರರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ರೂ.ಗೂ ಹೆಚ್ಚು ಇಳಿಕೆಯಾಗಿದೆ.

ಸೆಕ್ಟೋರಲ್ ಅಪ್ಡೇಟ್
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್, ಐಟಿ, ಎಫ್‌ಎಂಸಿಜಿ, ಫಾರ್ಮಾ, ಎನರ್ಜಿ, ಇನ್‌ಫ್ರಾ, ಕನ್ಸ್ಯೂಮರ್ ಡ್ಯೂರಬಲ್ಸ್, ಹೆಲ್ತ್‌ಕೇರ್ ಮತ್ತು ಆಯಿಲ್ ಆ್ಯಂಡ್ ಗ್ಯಾಸ್ ವಲಯದ ಶೇರುಗಳು ಭಾರಿ ನಷ್ಟವನ್ನು ಅನುಭವಿಸಿವೆ. ಲೋಹ ಮತ್ತು ರಿಯಲ್ ಎಸ್ಟೇಟ್ ವಲಯದ ಷೇರುಗಳು ಮಾತ್ರ ಕೊಂಚ ಏರಿಕೆ ಕಂಡಿವೆ.

ಇದನ್ನೂ ಓದಿ-Minimum Pension: ಸರ್ಕಾರಿ ನೌಕರರ ಪೆನ್ಷನ್ ಕುರಿತು ಮಹತ್ವದ ಅಪ್ಡೇಟ್ ಪ್ರಕಟ, ನಿವೃತ್ತಿ ಬಳಿಕ ಎಷ್ಟು ಹಣ ಸಿಗಲಿದೆ ಗೊತ್ತಾ?

ಇಂದಿನ ವ್ಯವಹಾರದಲ್ಲಿ, ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಮತ್ತು ಸ್ಮಾಲ್ ಕ್ಯಾಪ್‌ನಲ್ಲಿಯೂ ದೊಡ್ಡ ಕುಸಿತ ಕಂಡುಬಂದಿದೆ. ಮಿಡ್ ಕ್ಯಾಪ್ ಸೂಚ್ಯಂಕವು 380 ಅಂಶಗಳ ಕುಸಿತದೊಂದಿಗೆ 35,235 ಅಂಶಗಳಲ್ಲಿ ತನ್ನ ವಹಿವಾಟನ್ನು ನಿಲ್ಲಿಸಿದೆ. 30 ಸೆನ್ಸೆಕ್ಸ್ ಷೇರುಗಳಲ್ಲಿ, 10 ವೇಗ ಪಡೆದುಕೊಂಡು ಅಂತ್ಯ ಕಂಡರೆ ಮತ್ತು 20 ಕುಸಿತ ದಾಖಲಿಸಿ ದಿನವನ್ನು ಮುಗಿಸಿವೆ. ನಿಫ್ಟಿಯ 50 ಷೇರುಗಳ ಪೈಕಿ 11 ಷೇರುಗಳು ಲಾಭದೊಂದಿಗೆ ಮತ್ತು 39 ಷೇರುಗಳು ಕೆಂಪು ಅಂಕಗಳಲ್ಲಿ ಮುಕ್ತಾಯ ಕಂಡಿವೆ.

ಇದನ್ನೂ ಓದಿ-Fitch Ratings: 2023-24 ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಮುನ್ಸೂಚನೆಯನ್ನು ಮತ್ತೊಮ್ಮೆ ಅಂದಾಜಿಸಿದ ಫೀಚ್

ಹೂಡಿಕೆದಾರರಿಗೆ 2 ಲಕ್ಷ ಕೋಟಿ ರೂ.ಗುಳುಂ
ಇಂದು ಷೇರುಪೇಟೆಯಲ್ಲಿ ಭಾರಿ ಕುಸಿತದಿಂದಾಗಿ ಹೂಡಿಕೆದಾರರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇಂದಿನ ವಹಿವಾಟಿನಲ್ಲಿ, ಬಿಎಸ್‌ಇಯ ಮಾರುಕಟ್ಟೆ ಮೌಲ್ಯವು ಮಾರುಕಟ್ಟೆಯ ಅಂತ್ಯದ ವೇಳೆಗೆ 292.30 ಲಕ್ಷ ಕೋಟಿ ರೂ.ಗೆ ತಲುಪಿದೆ, ಇದು ಬುಧವಾರದಂದು 294.35 ಲಕ್ಷ ಕೋಟಿ ರೂ.ಆಗಿತ್ತು. ಇದರರ್ಥ ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ 2.05 ಲಕ್ಷ ಕೋಟಿಗಳಷ್ಟು ನಷ್ಟವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News